ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 27ಕ್ಕೆ ನೂರು ದಿನ ಪೂರೈಸಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪ್ರತಿದಿನ ಒಂದೊಂದು ಅಪ್ಡೇಟ್ಸ್ ಬರುತ್ತಲೇ ಇರುತ್ತೆ. ಇನ್ನು ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಇದುವರೆಗೆ 1.1 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್ 30ಕ್ಕೆ ರಾಹುಲ್ ಗಾಂಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರ ಖಾತೆಗೆ 2000 ರೂ. ಜಮೆ ಆಗಲಿದೆ. ಹೌದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಇದುವರೆಗೆ ಶೇ. 86 ರಷ್ಟು ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಆಗಸ್ಟ್ 30 ರಂದು ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ದೊರೆಯಲಿದ್ದು, ಯೋಜನೆಯ ಲಾಭ ಯಾರಿಗೆ ಸಿಗುತ್ತೆ ಏನೆಲ್ಲಾ ಕಂಡೀಷನ್ಸ್ ಇರುತ್ತೆ ಇದೆಲ್ಲವನ್ನ ನೋಡೋಣ.
ಇದನ್ನೂ ಓದಿ: ಇಂದು ಸ್ವಲ್ಪ ಇಳಿಕೆ ಕಂಡ ಚಿನ್ನದ ಬೆಲೆ; ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಯಾರಿಗೆಲ್ಲ ಸಿಗುತ್ತೆ ಯೋಜನೆಯ ಲಾಭ
ಹೌದು ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದು,ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ದೇ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು, ಜನ ಸಾಮಾನ್ಯರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಗೃಹಲಕ್ಷ್ಮಿ ಯೋಜನೆ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಯಶಸ್ವಿಯಾಗುವಂತೆ ಮಾಡೋದೇ ಕಾಂಗ್ರೆಸ್ ಸರ್ಕಾರ ಗುರಿ ಅಂತ ಹೇಳಿಕೊಂಡಿದ್ರು. ಸದ್ಯ ಅಂದುಕೊಂಡಂತೆ ಇದೀಗ ಗೃಹಲಕ್ಷ್ಮೀ ಯೋಜನೆ ಅಧಿಕೃತವಾಗಿ ಆರಂಭವಾಗುತ್ತಿದ್ದೂ ಪ್ರತಿ ಮನೆಯೊಡತಿಗೂ 2000 ರೂಪಾಯಿ ಹಣ ನಾಳೆ ಖಾತೆಗೆ ಜಮೆ ಆಗಲಿದೆ.
ಇನ್ನು ಅರ್ಜಿ ಹಾಕಿದ ಎಲ್ಲಗೂ ಯೋಜನೆಯ ಲಾಭ ಸಿಗೋದಿಲ್ಲ. ಅದಕ್ಕೂ ಕೆಲವೊಂದಷ್ಟು ನಿಯಮಗಳನ್ನ ಸರ್ಕಾರ ನಿಗಧಿಪಡಿಸಿದೆ. ಹೌದು ಮೊದಲಿಗೆ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ಕಡ್ಡಾಯ. ಅರ್ಜಿ ಹಾಕಿದ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು. ಜೊತೆಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಹೊಂದಿರಬೇಕು. ಆಧಾರ್ ಗೆ ಪ್ಯಾನ್ ಕಾರ್ಡ್ ಜೋಡಣೆಯಾಗಿರಬೇಕು. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
ಇನ್ನು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ. ಇನ್ನು ಆಧಾರ್ ಕಾರ್ಡ್ ಖಾತೆಗೆ ಲಿಂಕ್ ಆಗಿಲ್ಲ ಅಂದ್ರೆ ನಿಮ್ಮ ಅರ್ಜಿ ತಿರಸ್ಕಾರಗೊಳ್ಳುತ್ತೆ. ಇನ್ನು ತೆರಿಗೆ ಪಾವತಿ ಮಾಡುತ್ತಿರುವವರಿಗೆ ಇದರ ಲಾಭ ಸಿಗೋದಿಲ್ಲ. ಅಂಥವರು ಅರ್ಜಿ ಹಾಕಿದ್ರು ಕೂಡ ಅದು ತಿರಸ್ಕೃತಗೊಳ್ಳುತ್ತೆ. ಮನೆಯ ಯಜಮಾನಿ ಅಂತ ಯಾರು ಪಡಿತರ ಚೀಟಿಯಲ್ಲಿ ಇರುತ್ತಾರೋ ಅಂತವರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ. ಸುಳ್ಳು ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ್ರೆ ಅಂತವರಿಗೂ ಬಹಳ ದೊಡ್ಡ ಒಡೆತ ಬೀಳುತ್ತದೆ. ಅಂತವರಿಗೆ ಹಣ ಬರೋದಿಲ್ಲ. ಕಾನೂನಾತ್ಮಕವಾಗಿ ಕೆಲವೊಂದು ತೊಂದರೆಗಳಿಗೆ ಗುರಿಯಗಬೇಕಾಗುತ್ತೆ.
ಇದನ್ನೂ ಓದಿ: ತಾಳಿ ಕಟ್ಟುವಾಗ ಮದುವೆ ಇಷ್ಟ ಇಲ್ಲ ಎಂದ ಯುವತಿ! ಅಷ್ಟಕ್ಕೂ ಆಗಿದ್ದೇನು? ಮದುವೆ ನಿಲ್ಲಲ್ಲು ಕಾರಣ ಏನ್ ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram