ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಎಂದರೆ ಈ ಕೆಲಸವನ್ನು ಮಾಡಲೇಬೇಕು

Gruhalakshmi Yojana

ರಾಜ್ಯ ಸರ್ಕಾರವು ಈಗಾಗಲೇ ಯಶಸ್ವಿಯಾಗಿ ಗೃಹ ಲಕ್ಷ್ಮಿ ಯೋಜನೆಯ 7 ಕಂತಿಗಳ ಹಣವನ್ನು ಮಹಿಳೆಯ ಖಾತೆಗೆ ನೇರವಾಗಿ ಜಮಾ ಮಾಡಿದೆ. ಇನ್ನು ಕೆಲವರಿಗೆ ಒಂದು ಕಂತಿನ ಹಣವೂ ಜಮಾ ಆಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅದರಂತೆ ನಿಮ್ಮ ಖಾತೆಗೆ ಕೆಲವು ಅಪ್ಡೇಟ್ ಮಾಡದೆ ಇದ್ದರೆ ಹಾಗೂ ಯಾವ ತಪ್ಪಿನಿಂದ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂಬ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಈ ಕೆಲಸಗಳನ್ನು ಮಾಡದೆ ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ.

  • ಮಹಿಳೆಯರು ಅರ್ಜಿ ಸಲ್ಲಿಸುವಾಗ ನೀವು ನಿಮ್ಮ ಖಾತೆಗೆ ಇ ಕೆ ವೈ ಸಿ ಮಾಡಿಸಿರುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಇ ಕೆ ವೈ ಸಿ ಮಾಡಿಸದೆ ಇದ್ದರೆ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಹಣವೂ ಬರುವುದಿಲ್ಲ.
  • ಇ ಕೆ ವೈ ಸಿ ಮಾಡಿರುವುದರ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ನಿಮ್ಮ ಆಧಾರ್ ಸಿಡಿಂಗ್ ಮಾಡಿರಬೇಕು. ನೀವು ಆಧಾರ್ ಸಿಡಿಂಗ್ ಮಾಡದೆ ಇದ್ದರೆ ನಿಮಗೆ ಗೃಹ ಲಕ್ಷ್ಮಿ ಹಣವೂ ಬರುವುದಿಲ್ಲ.
  • ಇ ಕೆ ವೈ ಸಿ ಮತ್ತು ಆಧಾರ್ ಸಿಡಿಂಗ್ ಮಾಡಿಸಿದರು ಹಣ ಜಮಾ ಆಗುತ್ತಿಲ್ಲ ಎಂದಾದರೆ ನೀವು NPCI ಮಾಡಿಸಬೇಕು. ಆಗ ನಿಮ್ಮ ಖಾತೆಗೆ ಹಣ ಬರುತ್ತದೆ.

ಈ ಮೇಲಿನ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೂ ಸಹ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎಂದಾದರೆ ನೀವು ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗೃಹ ಲಕ್ಷ್ಮಿ ಯೋಜನೆಯ ಅಪ್ಡೇಟ್ ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  • ಹಂತ 1:- DBT ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಹಾಗೂ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಹಾಗೂ ನಿಮ್ಮ ಫೋನ್ ನಂಬರ್ ಗೆ ಬರುವ OTP ಯನ್ನು ನಮೂದಿಸಿ ಲಾಗಿನ್ ಆಗಬೇಕು.
  • ಹಂತ 2:- ನಿಮ್ಮ ಖಾತೆಯ ವಿವರಗಳು ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಹಂತ 3:- ಆಯ್ಕೆ ಮತ್ತು ಪಾವತಿ ಸ್ಥಿತಿಯನ್ನು ಪರಿಶೀಲಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಿ ಆಯ್ಕೆಯಲ್ಲಿ ಫಲಾನುಭವಿಯ ಹೆಸರನ್ನು ಆಯ್ಕೆ ಮಾಡಬೇಕು. ಕೊನೆಗೆ ಪಾವತಿ ಸ್ಥಿತಿ ಎಂಬ ಬಟನ್ ಆಯ್ಕೆ ಮಾಡಬೇಕು.

ಗೃಹ ಲಕ್ಷ್ಮಿ 8 ಕಂತಿನ ಹಣ ಹಲವರ ಖಾತೆಗೆ ಜಮಾ ಆಗಿದೆ :- ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ ಹಣವೂ ಈಗಾಗಲೇ 7 ಕಂತಿನ ಹಣವು ಹಲವು ರಾಜ್ಯದ ಬಹುತೇಕ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಿದೆ. ಅದರ ಜೊತೆಗೆ ಈಗ 8 ನೇ ಕಂತಿನ ಹಣವೂ ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿದೆ. 8 ನೇ ಕಂತಿನ ಹಣ ಜಮಾ ಆಗಿರುವ ಬಗ್ಗೆ ಈಗಾಗಲೇ ಹಲವರ ಮೊಬೈಲ್ ಸಂಖ್ಯೆಗೆ ಹಣ ಜಮಾ ಆಗಿರುವ ಬಗ್ಗೆ ಸಂದೇಶ ಬಂದಿದ್ದು, ಜೊತೆಗೆ ಮೊಬೈಲ್ ಸಂಖ್ಯೆಗೆ ಮೆಸೇಜ್ ಬಾರದೆ ಇದ್ದರೆ ನಿಮ್ಮ ಬ್ಯಾಂಕ್ ನಲ್ಲಿ ಮಾಹಿತಿಯೂ ಲಭ್ಯವಾಗಿದೆ. ಇಲ್ಲವೇ ಸರ್ಕಾರದ ವೆಬ್ಸೈಟ್ ನಲ್ಲಿ ಸಹ ನೀವು ಮಾಹಿತಿ ಪಡೆಯಬಹುದು.

ಇದನ್ನೂ ಓದಿ: PM ಕಿಸಾನ್ ಸ್ಟೇಟಸ್; 17ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ?

ಇದನ್ನೂ ಓದಿ: ಅತೀ ಕಡಿಮೆ ಬೆಲೆಯಲ್ಲಿ OnePlus Nord CE 4 5G, ಸಾಮಾನ್ಯ ವರ್ಗದವರೂ ಖರೀದಿಸಬಹುದು!