ಈ ಕೆಲಸ ಮಾಡದಿದ್ದರೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ ಆಗುವುದಿಲ್ಲ.

Gruhalakshmi Yojana New Update

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು ರಾಜ್ಯದ ಪ್ರತಿ ಮಹಿಳೆಗೆ ತಿಂಗಳಿಗೆ 2000 ರೂಪಾಯಿ ಹಣ ನೀಡುವುದಾಗಿ ಘೋಷಣೆ ಮಾಡಿತ್ತು. ನಂತರ ಅಧಿಕಾರಕ್ಕೆ ಬಂದ ಮೇಲೆ ಸರಕಾರದ ಆರ್ಥಿಕ ಸ್ಥಿತಿ ಮತ್ತು ಎಲ್ಲಾ ಆಗು ಹೋಗುಗಳನ್ನು ಚರ್ಚಿಸಿ ಕುಟುಂಬದ ಯಜಮಾನಿಯ ಖಾತೆಗೆ 2,000 ರೂಪಾಯಿ ಹಣವನ್ನು ಜಮಾ ಮಾಡುವುದಾಗಿ ಹೇಳಿತು. ಅದರಂತೆಯೇ ಇಲ್ಲಿಯ ವರೆಗೆ ಒಟ್ಟು 10 ಕಂತುಗಳ ಹಣವನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ರಾಜ್ಯದ ಮಹಿಳೆಯರಿಗೆ ನೀಡಿದೆ. ಈಗ ಲೋಕಸಭಾ ಚುನಾವಣೆಯ ಅಂಗವಾಗಿ ಈ ತಿಂಗಳ ಹಣವು ಸ್ವಲ್ಪ ತಡವಾಗಿ ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದರೆ ರಾಜ್ಯ ಸರಕಾರ 11 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ 11 ನೇ ಕಂತಿನ ಹಣವನ್ನು ಕಡ್ಡಾಯವಾಗಿ ಈ ಕೆಲಸ ಮಾಡಬೇಕು ಎಂದು ತಿಳಿಸಿದೆ. ರಾಜ್ಯ ಸರಕಾರ ಯಾವ ವಿಷಯದ ಬಗ್ಗೆ ಹೇಳಿದೆ ಎಂಬುದನ್ನು ತಿಳಿಯೋಣ.

WhatsApp Group Join Now
Telegram Group Join Now

ಈಗಾಗಲೇ ಪೆಂಡಿಂಗ್ ಹಣವನ್ನು ರಾಜ್ಯ ಸರ್ಕಾರ ನೀಡಿದೆ.:- ಜಮಾ ಆಗದೆ ಉಳಿದಿದ್ದ ಕೆಲವು ಕಂತಿನ ಹಣಗಳೂ ಹಾಗೂ ತಾಂತ್ರಿಕ ದೋಷದಿಂದ ಹಾಗೂ ಅರ್ಜಿ ನಮೂನೆ ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಮಾಹಿತಿ ವ್ಯತ್ಯಾಸಗಳಿಂದ ಹಲವು ಮಹಿಳೆಯರಿಗೆ ಒಂದು ಕಂತಿನ ಹಣ ಬಂದರೆ ಇನ್ನೊಂದು ಕಂತಿನ ಹಣ ಬರಲಿಲ್ಲ ಹಾಗೂ ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣವೂ ಸಹ ಜಮಾ ಆಗಿರಲಿಲ್ಲ. ಆದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜ್ಯ ಸರಕಾರವು ಬಾಕಿ ಇರುವ ಎಲ್ಲ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 2 ಸಾವಿರ ರೂಪಾಯಿ ಜಮಾ ಮಾಡಿದ ಮೋದಿ.

ಈಗಾಗಲೇ 11ನೇ ಕಂತಿನ ಹಣ ಬಿಡುಗಡೆ ಆಗಿದೆ :-

ಜೂನ್ ತಿಂಗಳ ಎರಡನೇ ವಾರದಲ್ಲಿ ಹಲವಾರು ಮಹಿಳೆಯರಿಗೆ 11ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ. ಇನ್ನು 11 ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬರದಿದ್ದವರು ಒಂದೆರಡು ದಿನಗಳ ಕಾಲ ಕಾಯಬೇಕು. ಜೂನ್ ತಿಂಗಳ ಕೊನೆಯ ಒಳಗೆ ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಜಮಾ ಮಾಡಲಿದೆ.

ಈ ಕೆಳಗಿನ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತಿಲ್ಲ :-

ಇನ್ನು ಸಹ ರಾಜ್ಯದ ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನಯ ಹಣ ಜಮಾ ಆಗಲಿಲ್ಲ. ಅದಕ್ಕೆ ಕಾರಣಗಳು ಏನೆಂದರೆ.

  • ನೀವು ಅರ್ಜಿಯಲ್ಲಿ ನಮೂದಿಸಿರುವ ಹೆಸರು ಹಾಗೂ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಗೆ ನೀಡಿರುವ ಹೆಸರು ಒಂದೇ ಆಗಿರಬೇಕು. ಯಾವುದೇ ಸ್ಪೆಲ್ಲಿಂಗ್ ಮಿಸ್ಟೆಕ್ಸ್ ಕಂಡುಬಂದರೆ ಗೃಹ ಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.
  • ನಿಮ್ಮ ಬ್ಯಾಂಕ್ ಖಾತೆಗೆ ಇ ಕೆ ವೈ ಸಿ ಮಾಡಿಸದೆ ಇದ್ದಲ್ಲಿ ಸಹ ನೀವು ನೀವು ಹಣ ಪಡೆಯಲು ಸಾಧ್ಯವಿಲ್ಲ.
  • ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಿಡಿಂಗ್ ಮಾಡಿಸದೆ ಇದ್ದರೆ ನಿಮಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

ಈ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿದ ನಂತರ ಎಲ್ಲಾ ಅಪ್ಡೇಟ್ ಗಳನ್ನು ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಯ ಕಾರ್ಯಕರ್ತರಿಗೆ ಮಾಹಿತಿ ನೀಡುವ ಮೂಲಕ ನೀವು ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯ.

ಇದನ್ನೂ ಓದಿ: ಒಂದು ವರ್ಷ ಬಳಸದಿದ್ದರೆ ಆಯುಷ್ಮಾನ್ ಕಾರ್ಡ್ ರದ್ದಾಗುವ ಬಗ್ಗೆ ಸರ್ಕಾರದ ಸ್ಪಷ್ಟನೆ!

Leave a Reply

Your email address will not be published. Required fields are marked *