ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜಾರಿಗೆ ಬಂದಿರುವ ಯೋಜನೆಗಳಲ್ಲಿ ಸಾಕಷ್ಟು ಜನಪ್ರಿಯತೆ, ಜೊತೆಗೆ ಅಷ್ಟೇ ಗೊಂದಲ ಸೃಷ್ಟಿ ಮಾಡಿ ಒಂದಷ್ಟು ಜನರಿಗೆ ಖುಷಿ ಮತ್ತೊಂದಷ್ಟು ಜನರಿಗೆ ಈಗಲೂ ಗೊಂದಲದ ಗುಡಾಗಿರುವ ಯೋಜನೆ ಅಂದ್ರೆ ಅದು ಗೃಹಲಕ್ಷ್ಮಿ ಯೋಜನೆ. ಆದ್ರೆ ಈ ಯೋಜನೆ ಬರ್ತಾ ಬರ್ತಾ ಯಾಕೋ ಕಗ್ಗಂಟಾಗುತ್ತಿದೆ. ಹೌದು ಒಂದಷ್ಟು ಜನ ತಮ್ಮ ಖಾತೆಗೆ 2000ರೂಪಾಯಿ ಜಮಾ ಆಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ರೆ ಇನ್ನೊಂದಿಷ್ಟು ಜನ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೂ ನಮ್ಮ ಖಾತೆಗೆ ಮಾತ್ರ 2000 ಬಂದಿಲ್ಲ ಅಂತ ಒಳಗೊಳಗೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೌದು ಗೃಹಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ಬಂದ ಗೃಹಿಣೀಯರ ಖಾತೆಗೆ 2,000ಗಳನ್ನು ನೇರ ವರ್ಗಾವಣೆ ಮಾಡುವಂತಹ ಒಂದು ಯೋಜನೆಯಾಗಿದೆ. 1.28 ಕೋಟಿ ಗೃಹಿಣಿಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಜಿಯನ್ನ ಸಲ್ಲಿಸಿ, ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ಆದರೆ ಎಷ್ಟು ಅರ್ಜಿ ಸಲ್ಲಿಕೆಯಾಗಿದೆಯೋ ಅಷ್ಟು ಜನರಿಗೆ ಹಣ ಬಂದಿಲ್ಲ.
ಹೌದು ಈಗಾಗಲೇ ಗೃಹಲಕ್ಷ್ಮಿ ಯೋಜನೆ(Gruhalakshmi Yojana) ಆರಂಭವಾಗಿ 20-25 ದಿನಗಳೆ ಆಯಿತು, ಆದರೂ ತಮ್ಮ ಖಾತೆಗೆ ಮೊದಲ ಕಂತು ಬರಲಿಲ್ಲ ಎನ್ನುವುದು ಹಲವು ಮಹಿಳೆಯರ ಗೋಳು. ಇತ್ತ ಒಂದಷ್ಟು ಮಹಿಳೆಯರು ತಮ್ಮ ಖಾತೆಗೆ ಇನ್ನೂ ಹಣವೇ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದಷ್ಟು ಜನ ತಮಗೆ 2ನೇ ಕಂತಿನ ಹಣ ಯಾವಾಗ ಬಂದು ಸೇರುತ್ತದೆ ಅಂತ ಕಾಯ್ತಾ ಇದ್ದಾರೆ. ಹಾಗಾದ್ರೆ 2ನೇ ಕಂತಿನ ಹಣ ಯಾವಾಗ ಬರುತ್ತೆ? ಮೊದಲ ಕಂತಿನ ಹಣ ಬರದೇ ಇರೋರ ಗೋಳು ಏನ್ ಗೊತ್ತಾ ನೋಡೋಣ ಬನ್ನಿ.,
ಹೌದು ಯೋಜನೆ ಆರಂಭವಾದ ದಿನದಿಂದ ಇವತ್ತಿನವರೆಗೂ ಕೂಡ ತಮ್ಮ ಎಲ್ಲ ದಾಖಲೆಗಳು ಅಂದ್ರೆ ಆಧಾರ್ ಕಾರ್ಡ್(Aadhaar Card), ರೇಷನ್ ಕಾರ್ಡ್(Ration Card), ಬ್ಯಾಂಕ್ ಖಾತೆ(Bank Account) ವಿವರ ಸರಿ ಇಟ್ಟುಕೊಂಡು ಹಣ ಬರುವುದನ್ನೇ ಕಾಯ್ತಾ ಇರುವ ಗೃಹಿಣಿಯರು ತಮ್ಮ ಖಾತೆಗೆ ಹಣ ಬರುವುದಿಲ್ಲವೇನೋ ಎನ್ನುವ ಆತಂಕಕ್ಕೆ ಒಳಗಾಗುವುದು ಬೇಡ. ನೀವು ಫಲಾನುಭವಿಗಳಾಗಿದ್ದರೆ ನೀವು ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ, ಜೊತೆಗೆ ನಿಮ್ಮ ಅರ್ಜಿ ಸ್ವೀಕಾರವಾಗಿದ್ದರೆ ವಿಳಂಬವಾಗಿ ಆದರೂ ಸರಿ ನಿಮ್ಮ ಖಾತೆಗೆ ಹಣ ಬಂದೇ ಬರುತ್ತದೆ. ಇನ್ನು ಮುಖ್ಯವಾಗಿ ಆರ್‌ಬಿಐ ಪ್ರತಿದಿನ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ.
ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ ಆರ್‌ಬಿಐ ಕೂಡ ಒಂದು ದಿನಕ್ಕೆ ಇಷ್ಟು ಹಣವನ್ನು ಬಿಡುಗಡೆ ಮಾಡಬಹುದು ಎನ್ನುವ ಮಿತಿ ಇರುತ್ತೆ. ಹಾಗಾಗಿ ಪ್ರತಿದಿನ ಆ ಮಿತಿಯ ಒಳಗೆ ಮಾತ್ರ ಹಣ ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಕೋಟ್ಯಂತರ ಮಹಿಳೆಯರಿಗೆ ಒಮ್ಮೆಲೆ ಅವರ ಖಾತೆಗೆ ಹಣ ಬರಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ನಿಮ್ಮ ಖಾತೆಗೆ ಹಣ ಬರುವುದು ವಿಳಂಬವಾಗುತ್ತಿದೆ. ಹಾಗಾಗಿ ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಚಿಂತೆ ಮಾಡುವ ಮಹಿಳೆಯರಿಗೆ ಇದು ಗುಡ್ ನ್ಯೂಸ್ ಎನ್ನಬಹುದು. ಬಹುಶಃ ಎರಡು ಕಂತುಗಳ ಹಣವು ಒಟ್ಟಿಗೆ ಸೇರಿ 4,000 ಮಹಿಳೆಯರ ಖಾತೆಗೆ ಜಮಾ ಆಗಬಹುದು ಅಂತ ಹೇಳಲಾಗ್ತಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
2ನೇ ಕಂತಿನ ಹಣ ಯಾವಾಗ ಬರುತ್ತೆ?
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಈಗಾಗಲೇ ತಿಳಿಸಿರುವಂತೆ ಎರಡನೇ ಕಂತಿನ ಹಣ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಅದೇ ರೀತಿ ಮೊದಲ ಕಂತಿನ ಹಣ ಯಾರ ಖಾತೆಗೆ ಬಂದು ತಲುಪಿಲ್ಲವೋ ಅದನ್ನು ಕೂಡ ಶೀಘ್ರವಾಗಿ ಮುಗಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ಹೌದು, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರತವಾಗಿರುವ ಸರ್ಕಾರ ಮೊದಲ ಕಂತಿನಲ್ಲಿ ಹಣ ಬಿಡುಗಡೆ ಆಗುವ ವಿಚಾರದಲ್ಲಿ ನಡೆದಿರುವ ಗೊಂದಲ ವಿಳಂಬ ಯಾವುದು ಕೂಡ ಎರಡನೇ ಕಂತಿನ ಹಣ ಬಿಡುಗಡೆ ಸಂದರ್ಭದಲ್ಲಿ ಆಗದೇ ಇರುವಂತೆ ಎಚ್ಚರಿಕೆ ವಹಿಸಲಿದೆ ಅಂತ ತಿಳಿಸಿದ್ದಾರೆ.
ಅಲ್ದೇ ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ(Gruhalakshmi Yojana) ಎರಡನೇ ಕಂತು(Installment) ಕೂಡ ಬಿಡುಗಡೆಯಾಗಲಿದ್ದು ಮೊದಲ ಕಂತಿನ ಹಣ ಈಗಾಗಲೇ ಬಂದವರಿಗೆ ಈ ತಿಂಗಳ ಕೊನೆಗೆ 2ನೇ ಕಂತಿನ 2000ರೂಪಾಯಿ ಹಣ(Amount) ಜಮೆ ಆಗಲಿದೆ. ಈ ತಿಂಗಳ 29 ಅಥವಾ 30ನೇ ತಾರೀಖಿನೊಂದು ಹಣ ಜಮೆ ಆಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನೂ ಮೊದಲ ಕಂತಿನ ಹಣವೇ ಬಂದಿಲ್ಲ ಅನ್ನೋರಿಗೆ ನಾಲ್ಕು ಸಾವಿರ ರೂಪಾಯಿಗಳು ಒಟ್ಟಾಗಿ ಬರುವ ಸಾಧ್ಯತೆ ಇದೆ ಅಂತ ಕೂಡ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: 26 ಬೆರಳುಗಳುಳ್ಳ ಹೆಣ್ಣು ಮಗು ಜನನ! ಮಹಾ ಲಕ್ಷ್ಮೀ ಸ್ವರೂಪ ಅಂತ ಪೂಜಿಸಿದ ಜನರು
ಇದನ್ನೂ ಓದಿ: ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ, ಹಣ ಯಾವಾಗ ಬರುತ್ತೆ? ಹಣ ಜಮಾವಣೆ ಬಗ್ಗೆ ಲಕ್ಷ್ಮೀ ಹೆಬಾಳ್ಕರ್ ಅವ್ರು ಹೇಳಿದ್ದೇನು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram