ಗೃಹಲಕ್ಷ್ಮಿ ಯೋಜನೆಯ 8 ಮತ್ತು 9 ನೇ ಕಂತಿನ ಹೊಸ ಅಪ್ಡೇಟ್ ಇಲ್ಲಿದೆ.

Gruhalakshmi Yojana

ಗೃಹಲಕ್ಷ್ಮಿ ಯೋಜನೆ ಈಗಾಗಲೇ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಮಹಿಳೆಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರಂಭವಾದ ಯೋಜನೆ ಈಗ 7 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ಈಗ 8 ನೇ ಕಂತಿನ ಹಣ ಬಿಡುಗಡೆ ಆಗುವ ಮುನ್ನ ಹೊಸದೊಂದು ಅಪ್ಡೇಟ್ ಬಿಡುಗಡೆ ಆಗಿದೆ.

WhatsApp Group Join Now
Telegram Group Join Now

ಏನಿದು ಹೊಸ ಅಪ್ಡೇಟ್?: 

ಈಗಲೇ ಕೆಲವು ಮಹಿಳೆಯರ ಖಾತೆಗೆ 8 ನೇ ಕಂತಿನ ಹಣವೂ ಜಮಾ ಆಗಿದೆ. ಆದರೆ ಇನ್ನೂ ಕೆಲವರು ಹಣ ಬಂದಿಲ್ಲ ಎಂದು ಹೇಳುತ್ತ ಇದ್ದರೆ ಅಂತವರಿಗೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಇದೇ ಬರುವ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಆದರೆ ಏಪ್ರಿಲ್ 25ರ ಒಳಗಾಗಿ ಎಲ್ಲಾರ ಗೃಹ ಲಕ್ಷ್ಮಿ ಖಾತೆಗೆ 2,000ರೂಪಾಯಿ ಹಣ. ಜಮಾ ಆಗಲಿದೆ. ಕೆಲವು ತಾಂತ್ರಿಕ ದೋಷದ ಕಾರಣದಿಂದ 8ನೇ ಕಂತಿನ ಹಣ ಜಮಾ ಆಗುವುದು ಸ್ವಲ್ಪ ತಡವಾಗಿದೆ. ಆದರೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಸಚಿವರು ತಿಳಿಸಿದರು.

9 ನೇ ಕಂತಿನ ಹಣ ಯಾವಾಗ ಬರುತ್ತದೆ?: ಏಪ್ರಿಲ್ 26 2024 ಹಾಗೂ ಮೇ 7 2024 ಎರಡು ದಿನ ಲೋಕಸಭಾ ಚುನಾವಣೆ ರಾಜ್ಯದಲ್ಲಿ ನಡೆಯುತ್ತದೆ. ಆಗ ಯಾವುದೇ ರೀತಿಯ ಹಣವನ್ನು ಜಮಾ ಮಾಡಲು ಆಗುವುದಿಲ್ಲ. ಅದರಿಂದ ಮುಂದಿನ ಕಂತಿನ ಹಣ ಯಾವಾಗ ಬರುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಮೇ 7 ರ ನಂತರ ರಾಜ್ಯ ಸರ್ಕಾರವು ಮುಂದಿನ ಅಪ್ಡೇಟ್ ನೀಡಲಿದೆ ಎಂಬ ಮಾಹಿತಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮಿ ಖಾತೆಯ ಸ್ಟೇಟಸ್ ನೋಡುವುದು ಹೀಗೆ :-

ಈ ಹಿಂದೆ ಮಾಹಿತಿ ಕಣಜ ಎಂಬ ವೆಬ್ಸೈಟ್ ಇದ್ದಿತ್ತು. ಅದರಲ್ಲಿ ನೀವು ಗೃಹ ಲಕ್ಷ್ಮಿ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿತ್ತು. ಆದರೆ ಈಗ ಆ ವೆಬ್ಸೈಟ್ ಬಂದ್ ಆಗಿದೆ. ಹಾಗೂ ಸರ್ಕಾರದಿಂದ ಗ್ಯಾರೆಂಟಿ ಸ್ಕೀಮ್ ಎಂದು ಒಂದು ವೆಬ್ಸೈಟ್ ಬಿಡುಗಡೆ ಆಗಿತ್ತು ಅದರಲ್ಲಿ ನಿಮ್ಮ ಗೃಹ ಲಕ್ಷ್ಮಿ ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ದ ಹಣ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತಿತ್ತು. ಆದರೆ ಈಗ ಅಲ್ಲಿ ಸರ್ವರ್ ಡೌನ್ ಆಗಿ ಯಾವುದೇ ಮಾಹಿತಿಯನ್ನು ವೀಕ್ಷಿಸಲು ಆಗುತ್ತಿಲ್ಲ ಈಗ ಅದೇ ಕಾರಣಕ್ಕೆ ಸರಕಾರವು ಹೊಸದೊಂದು ಅಪ್ಲಿಕೇಶನ್ ಬಿಡುಗಡೆ ಮಾಡಿದೆ.

ನೀವು ಆ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡಬೇಕು. ಅಪ್ಲಿಕೇಶನ್ ಹೆಸರು ಡಿಬಿಟಿ. ನೀವು ಈ ಅಪ್ಲಿಕೇಶನ್ ತೆರೆದು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಂಡು ನೀವು ನಿಮ್ಮ ಖಾತೆಯ ಪೂರ್ಣ ವಿವರ ನೋಡಬಹುದು. ಪ್ಲೇ ಸ್ಟೋರ್ ನಲ್ಲಿ dbt karnataka ಎಂದು ಸರ್ಚ್ ಮಾಡಿದರೆ ನಿಮಗೆ ಅಪ್ಲಿಕೇಶನ್ ಸಿಗುತ್ತದೆ.

ನಿಮ್ಮ ಬಳಿ ಡಿಬಿಟ್ ಅಪ್ಲಿಕೇಶನ್ ಇಲ್ಲ ಎಂದರೆ ನಿಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ನೀಡಿದರೆ ನಿಮಗೆ ಪೂರ್ಣ ಮಾಹಿತಿಯನ್ನು ನೀಡುತ್ತದೆ.

ಇದನ್ನೂ ಓದಿ: ಸ್ವಿಗ್ಗಿ ಹಾಗೂ ಜೊಮಾಟೊಗೆ ಪೈಪೋಟಿ ನೀಡಲು ಬರುತ್ತಿದೆ ಹೊಸ Tata Neu, ಬೆಂಗಳೂರಿನಲ್ಲಿ ಇದರ ಹವಾ ಶುರು!

ಇದನ್ನೂ ಓದಿ: Tata Nexon ಹಾಗೂ Tiago EV ಗಳಲ್ಲಿ ಪಡೆಯಿರಿ big discount, hurry up!!