ಗೃಹ ಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಜಮಾ ಆಗಿದೆ.

Gruhalakshmi Yojana 8th Installment

ಕರ್ನಾಟಕ ಸರ್ಕಾರವು ಯಶಸ್ವಿಯಾಗಿ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರಿಗೆ ನೀಡುತ್ತಿದೆ. ಈಗಾಗಲೇ ಒಂದು ಕಂತಿನ ಹಣವೂ ಬಾರದೆ ಇದ್ದವರ ಖಾತೆಗೆ ನೇರವಾಗಿ ಎಲ್ಲಾ ಕಂತಿನ ಹಣವೂ ಒಮ್ಮೆಲೆ ಬರುತ್ತಿದೆ ಹಲವರಿಗೆ ಒಂದು ಕಂತಿನ ಹಣ ಬಂದು ಇನ್ನುಳಿದ ಕಂತಿನ ಹಣವೂ ತಾಂತ್ರಿಕ ದೋಷಗಳಿಂದ ಖಾತೆಗೆ ಹಣ ವರ್ಗಾವಣೆ ಆಗಿರಲಿಲ್ಲ. ಹಿಂದಿನ ತಿಂಗಳಿಂದ ಎಲ್ಲರಿಗೂ ಸರಿಯಾದ ರೀತಿಯಲ್ಲಿ ಸಮಯಕ್ಕೆ ಹಣ ವರ್ಗಾವಣೆ ಆಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ 7ಕಂತಿನ ಪೂರ್ಣ ಹಣ ಪಡೆದಿರುವ ಮಹಿಳೆಯರಿಗೆ ಮತ್ತೆ ಸರ್ಕಾರವು ಶುಭ ಸುದ್ದಿ ನೀಡಿದೆ.

WhatsApp Group Join Now
Telegram Group Join Now

8ನೇ ಕಂತಿನ ಹಣ ಹಲವರ ಖಾತೆಗೆ ಜಮಾ ಆಗಿದೆ :- ಗೃಹ ಲಕ್ಷ್ಮಿ ಯೋಜನೆಯ ಹಣವೂ ಈಗಾಗಲೇ 7 ಕಂತಿನ ಹಣವು ಹಲವು ರಾಜ್ಯದ ಬಹುತೇಕ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಅದರ ಬೆನ್ನಲ್ಲೇ ಈಗ 8 ನೇ ಕಂತಿನ ಹಣವೂ ಕೆಲವು ಮಹಿಳೆಯ ಖಾತೆಗೆ ಜಮಾ ಆಗಿದೆ. ಇನ್ನು ಹಲವರ ಖಾತೆಗೆ ಸ್ವಲ್ಪ ದಿನಗಳಲ್ಲಿಯೇ 8 ನೇ ಕಂತಿನ ಹಣ ಜಮಾ ಆಗಲಿದೆ. ಈಗಾಗಲೇ ಹಲವರ ಮೊಬೈಲ್ ಸಂಖ್ಯೆಗೆ ಹಣ ಜಮಾ ಆಗಿರುವ ಬಗ್ಗೆ ಸಂದೇಶ ಬಂದಿದ್ದು, ಜೊತೆಗೆ ಹಲವರ ಖಾತೆಗೆ ಹಣ ಬಂದಿರುವ ಬಗ್ಗೆ ಬ್ಯಾಂಕ್ ನಲ್ಲಿ ಮಾಹಿತಿಯೂ ಲಭ್ಯವಾಗಿದೆ. ನಿನ್ನೆಯು ಸಹ ಹಲವು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಇಲಾಖೆಯು ಮಾಹಿತಿ ನೀಡಿದ್ದು. ನಿಮ್ಮ ಖಾತೆಯ ವಿವರಗಳನ್ನು ಆನ್ಲೈನ್ ಮೂಲಕ ಪಡೆಯಬಹುದು ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

8 ನೇ ಕಂತಿನ ಹಣ ಬಂದಿರುವ ಬಗ್ಗೆ ಆನ್ಲೈನ್ ನಲ್ಲಿ ಮಾಹಿತಿ ಪಡೆಯಿರಿ :-

ಕೆಲವೊಮ್ಮೆ ನೆಟ್ವರ್ಕ್ ಪ್ರಾಬ್ಲಂ ನಿಂದಾ ಹಣ ಬಂದಿರುವ ಬಗ್ಗೆ ಸಂದೇಶ ಬರುವುದಿಲ್ಲ. ಆದರೆ ನೀವು ಆನ್ಲೈನ್ ಮೂಲಕ ನಿಮ್ಮ ಗೃಹ ಲಕ್ಷ್ಮಿ ಖಾತೆಯ ಪೂರ್ಣ ವಿವರಗಳನ್ನು ಪಡೆಯಲು ಸಾಧ್ಯವಿದೆ. ನೀವು ಇಲಾಖೆಯ ಅಧಿಕೃತ ಅಪ್ಲಿಕೇಶನ್ ಆಗಿರುವ DBT karnataka ಆ್ಯಪ್ downoad ಮಾಡಿ. ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಲು ಆಪ್ಷನ್ ಇರುತ್ತದೆ. ಖಾಲಿ ಇರುವ ಬಾಕ್ಸ್ ನಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ . ನಿಮ್ಮ ಆಧಾರ್ ಕಾರ್ಡ್ ಜೋಡಣೆಯ ನಂಬರ್ ಗೆ ಬರುವ OTP ನಮೂದಿಸಿ ಲಿಗಿನ್ ಆಗಿ. ನಂತರ ನಿಮ್ಮ ಹೆಸರು, ವಿಳಾಸ, ಮತ್ತು ಮೊಬೈಲ್ ನಂಬರ್ ನಮೂದಿಸಿ. ನಂತರ ನಿಮ್ಮ ಇಷ್ಟದ mPIN ನಮೂದಿಸಬೇಕು.

mPIN ನಮೂದಿಸಿದ ನಂತರ select beneficiary ಆಪ್ಷನ್ ನಲ್ಲಿ ಫಲಾನುಭವಿ ಹೆಸರನ್ನು ಆಯ್ಕೆ ಮಾಡಬೇಕು. ನಂತರ ನಮೂದಿಸಿದ mPIN ಹಾಕಬೇಕು. ನಂತರ payment status option ಮೇಲೆ ಕ್ಲಿಕ್ ಮಾಡಿ .ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಎರಡು ಆಯ್ಕೆಗಳು ಕಣುತ್ತವೆ. ಗೃಹಲಕ್ಷ್ಮಿ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮಗೆ ಯಾವ ದಿನಾಂಕದಂದು ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆ ಮತ್ತು ಏಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ.

ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗದೆ ಇದ್ದಲ್ಲಿ ನೀವು ಇಲಾಖೆಯ ವೆಬ್ಸೈಟ್ ನಲ್ಲಿ ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ಬೆಂಗಳೂರು ಓನ್ ಅಂತಹ ಕೇಂದ್ರಗಳಲ್ಲಿ ದೂರು ನೀಡಿ ನಿಮ್ಮ ಖಾತೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

ಇದನ್ನೂ ಓದಿ: ಮಹಿಳೆಯರು ತೆಗೆದುಕೊಳ್ಳುವ ಗೃಹ ಸಾಲಕ್ಕೆ ಹಲವು ರೀತಿಯ ಪ್ರಯೋಜನಗಳು ಇವೆ

ಇದನ್ನೂ ಓದಿ: ನಿಮ್ಮ LKG ಅಥವಾ 1ನೇ ತರಗತಿಗೆ ಉಚಿತವಾಗಿ ಪ್ರವೇಶಿಸಲು ಬಯಸುವಿರಾ? RTE ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿ!