ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ(Gruhalakshmi Yojana). ಇನ್ನು ಈಗಾಗಲೇ ಯೋಜನೆಯಲ್ಲಿ ಒಂದು ಕಂತನ್ನು ಪಡೆದಿರುವ ರಾಜ್ಯದ ಬಹುತೇಕ ಮನೆ ಯಜಮಾನಿಯರು ಎರಡನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ಹೌದು ಗೃಹಲಕ್ಷ್ಮೀ ಯೋಜನೆ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಕಂತು ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಯೋಜನೆಯಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ ತಿಂಗಳು ಕೊನೆಯಾಗುತ್ತಿದ್ದು, ಎರಡನೇ ಕಂತಿನ ಹಣ ಬರೋದು ಯಾವಾಗ ಎಂಬ ಕುತೂಹಲದಲ್ಲಿ ತಮ್ಮ ಮೊಬೈಲ್ ಗಳನ್ನು ಹಿಡಿದು ಹಣ ಕ್ರೆಡಿಟ್ ಆಗುವ ಮೆಸೇಜ್ ಗಾಗಿ ಗೃಹಲಕ್ಷ್ಮಿಯರು ಕಾಯುತ್ತಿದ್ದಾರೆ.
ಇನ್ನು ಕೆಲವರು, ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಇಕೆವೈಸಿ ಆಗದಿರುವ ಕಾರಣಗಳಿಂದಾಗಿ ಗೃಹಲಕ್ಷ್ಮೀಯ ಮೊದಲ ಕಂತಿನ ಹಣದಿಂದಲೇ ವಂಚಿತರಾಗಿದ್ದಾರೆ. ಎಲ್ಲರಿಗೂ ಸಿಗುತ್ತಿದ್ದು ನಮಗ್ಯಾಕೆ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೀಗ ಅಂಥವರಿಗೆ ಗುಡ್ ನ್ಯೂಸ್ ಬಂದಿದ್ದು, ಗೃಹಲಕ್ಷ್ಮಿಯರಿಗೆ ಖುಷಿಯ ವಿಚಾರ ಅಂತ ಹೇಳಬಹುದು. ಹೌದು ಈ 10ಜಿಲ್ಲೆಯ ಗೃಹಲಕ್ಷ್ಮಿಯರ ಖಾತೆಗೆ ಯೋಜನೆಯ ಹಣ ಈ ದಿನದಂದ್ದೋ ಜಮೆ ಅಗಲಿದ್ಯಂತೆ.
ಹೌದು ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆ ಅಬಲೆಯಲ್ಲ, ಸಬಲೆ ಎನ್ನುವಂತಾಗಿದ್ದು, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆ ತರಲಾಗಿದೆ. ಇನ್ನು ಮಹಿಳೆಯರು ಪರಾವಲಂಬಿಗಳಾಗಬಾರದು, ಯಾರ ಬಳಿಯೂ ಕೈಚಾಚಿ ನಿಲ್ಲುವಂತಾಗಬಾರದು ಎನ್ನುವ ಉದ್ದೇಶದಿಂದ ವಾರ್ಷಿಕ 30 ಸಾವಿರ ಕೋಟಿ ವ್ಯಯವಾಗುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಅದ್ರೆ ಯೋಜನೆ ಜಾರಿಯಾದಾಗಿನಿಂದ ಒಂದಿಲ್ಲೊಂದು ತಲೆಬಿಸಿ ಅಂತಲೇ ಹೇಳಬಹುದು. ಹೌದು ಈ ಹಿಂದೆ ಸರ್ಕಾರ ಪ್ರತೀ ತಿಂಗಳ 26 ರಂದೇ ಗೃಹಲಕ್ಷ್ಮೀ ಹಣ ಖಾತೆಗೆ ಸೇರಲಿದೆ ಎಂದೂ ಹೇಳಿತ್ತು. ಜೊತೆಗೆ ಮೊದಲ ಕಂತಿನ ಹಣ ಆಗಸ್ಟ್ 30 ರಿಂದ ಬಿಡುಗಡೆ ಮಾಡಲಾಗಿತ್ತು. ಇನ್ನು ಇಡೀ ರಾಜ್ಯದಿಂದ ಈ ಯೋಜನೆಗಾಗಿ 1 ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದರೂ, 82 ಲಕ್ಷ ಜನರ ಖಾತೆಗೆ ಮಾತ್ರ ಜಮೆಯಾಗಿದೆ.
ಯಾರಿಗೆಲ್ಲಾ ಹಣ ಬಂದಿಲ್ಲವೋ, ಎಲ್ಲರಿಗೂ ಸೆಪ್ಟೆಂಬರ್ ತಿಂಗಳ ಒಳಗಾಗಿ ಜಮೆ ಮಾಡಲಾಗುವುದು, ಮೊದಲ ಕಂತಿನ ಹಣವೂ ಸೇರಿ ಒಟ್ಟು 4 ಸಾವಿರ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದರು. ಇನ್ನು ಮೊದಲನೇ ಕಂತು ಯಶಸ್ವಿಯಾಗಿ ಪಡೆದಿರುವ ಅಕೌಂಟ್ ಓನರ್ಸ್ ಎರಡನೇ ಕಂತಿಗಾಗಿ ಎದುರು ನೋಡುತ್ತಿದ್ದಾರೆ. ಅದ್ರೆ ಈ ತಿಂಗಳು ಮುಗಿಯುತ್ತ ಬಂದರು ಇನ್ನು ಕೂಡ ಹಣ ಬಂದಿಲ್ಲ. ಅಲ್ದೇ ಈ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ. ಆದರೆ ಸಪ್ಟೆಂಬರ್ ತಿಂಗಳ ಅಂತ್ಯದೊಳಗೆ ಅಂದರೆ ಸೆಪ್ಟೆಂಬರ್ 30 ರೊಳಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ 2000 ಸಾವಿರ ರೂಪಾಯಿ ಅಕೌಂಟ್ ಗೆ ಬೀಳುವ ಸಾಧ್ಯತೆ ಇದೆ ಅಂತ ಮಾತ್ರ ಹೇಳಲಾಗ್ತಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಗೃಹಲಕ್ಷ್ಮೀ ಯೋಜನೆಯ ಹಣ ಯಾರಿಗೆಲ್ಲ ಬರುತ್ತೆ ಗೊತ್ತಾ?
ಈ ಮಧ್ಯೆ ಮೊದಲನೇ ಕಂತಿನ ಹಣ ಪಡೆಯದೇ ಇರೋರು ಸಾಕಷ್ಟು ಗೊಂದಲದಲ್ಲಿದ್ದಾರೆ. ಎಲ್ಲ ಸರಿಯಿದ್ರು ನಮಗೆ ಹಣ ಬಂದಿಲ್ಲ ನಮಗೆ ಮೋಸ ಆಗ್ತಿದೆ ಅಂತೆಲ್ಲಾ ಹೇಳ್ತಿದ್ದಾರೆ. ಅಲ್ದೇ ಅಕ್ಕಿ ಹಣ(Amount) ಅಕೌಂಟ್ ಗೆ ಬರ್ತಿದೆ ಅದ್ರೆ ಗೃಹಲಕ್ಷ್ಮೀ ಯೋಜನೆಯ(Gruhalakshmi Yojana) ಹಣ ಮಾತ್ರ ಬರುತ್ತಿಲ್ಲ, ಅಕ್ಕಿ ಹಣಕ್ಕೆ ಇಲ್ಲದ ತಾಂತ್ರಿಕ ದೋಷ ಗೃಹಲಕ್ಷ್ಮೀ ಹಣಕ್ಕೆ ಮಾತ್ರಾನಾ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮಧ್ಯೆ ಕೆಲ ಜಿಲ್ಲೆಗಳ ಅವರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು ಇಂದು ಅಥವಾ ನಾಳೆ ಮೊದಲನೇ ಕಂತಿನ ಹಣ ಯಾರಿಗೆ ಬಂದಿಲ್ವೋ ಅಂತವರ ಖಾತೆಗೆ ಯೋಜನೆಯ ಹಣ ಜಮೆ ಆಗಲಿದೆ ಅಂತ ಒಂದಷ್ಟು ಜಿಲ್ಲೆಗಳ ಲಿಸ್ಟ್ ಅನ್ನ ಕೂಡ ಬಿಡುಗಡೆ ಮಾಡಿದೆ. ಹೌದು ಬಳ್ಳಾರಿ, ಯಾದಗಿರಿ, ರಾಯಚೂರು, ಕಲ್ಬುರ್ಗಿ, ಬೀದರ್, ಮಂಡ್ಯ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಅರ್ಹ ಫಲನುಭವಿಗಳು ಯಾರಿದ್ದಾರೋ ಅವ್ರ ಖಾತೆಗೆ ಹಣ ಜಮೆ ಆಗುತ್ತೆ ಅಂತ ಮಾಹಿತಿ ಲಭ್ಯ ಆಗಿದೆ. ಹಾಗಾದ್ರೆ ಈ ಜಿಲ್ಲೆಯ ಎಲ್ಲರಿಗೂ ಹಣ ಬರುತ್ತಾ ಅಂದ್ರೆ ಖಂಡಿತಾ ಇಲ್ಲ ಯಾರ ದಾಖಲೆಗಳು ಸರಿಯಾಗಿರುತ್ತೋ ಅವ್ರಿಗೆ ಮಾತ್ರ ಯೋಜನೆಯ ಹಣ ಬರುತ್ತೆ. ಹಾಗಾದ್ರೆ ಬೇರೆ ಜಿಲ್ಲೆಯವರಿಗೆ ಬರಲ್ವಾ ಅಂದೇ ಅವ್ರಿಗೆ ಬರುತ್ತೆ ಆದರೆ ಈ ತಿಂಗಳ ಒಳಗಾಗಿ. ಇನ್ನು ಮೊದಲ ಕಂತು ಪಡೆದಿರೋರಿಗೆ ಈ ತಿಂಗಳ 29 ಇಲ್ಲ 30ನೆ ತಾರೀಖು ಹಣ ಬರಲಿದೆ.
ಇದನ್ನೂ ಓದಿ: ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ಗೊತ್ತಾ? ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ದರ ಎಷ್ಟಿದೆ ನೋಡಿ
ಇದನ್ನೂ ಓದಿ: ನಿಮಗೆ ದರ್ಶನ್, ಶಿವಣ್ಣ, ಯಶ್ ಮಾತ್ರನ ಕಾಣಿಸೋದಾ? ದರ್ಶನ್ ಖಡಕ್ ಮಾತು; ಕನ್ನಡ ನಾಡಲ್ಲಿ ತಮಿಳನ್ನ ಬೆಳೆಸ್ತಾ ಇರೋರು ಯಾರು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram