ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಬಂದಿಲ್ವಾ!? ಹಣ ಬರೆದೆ ಇರೋರಿಗೆಲ್ಲ ಇಲ್ಲಿದೆ ಗುಡ್ ನ್ಯೂಸ್

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಚುನಾವಣೆಯಲ್ಲಿ ಮಹಿಳೆಯರ ಮತವನ್ನ ಅಸ್ತ್ರವಾಗಿ ಬಳಸಿಕೊಂಡಿತ್ತು. ಮಹಿಳೆಯರ ಮತಗಳನ್ನ ಗಮನದಲ್ಲಿಟ್ಟುಕೊಂಡು 5ಯೋಜನೆಗಳ ಪೈಕಿ 4ಯೋಜನೆಗಳು ಮಹಿಳೆಯರ ಹಿತದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿತ್ತು. ಹೌದು ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಮೊದಲ ಆದ್ಯತೆ ನೀಡುತ್ತಿದೆ. ಇನ್ನು ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷ ಮೊದಲ ಆದ್ಯತೆ ನೀಡುತ್ತದೆ. ಅಲ್ದೇ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಈಗಾಗಲೇ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದೆ. ಆ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಕಾಂಗ್ರೆಸ್ ಸರ್ಕಾರವು ತಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಿದೆ.

WhatsApp Group Join Now
Telegram Group Join Now

ಇನ್ನು ಕಾಂಗ್ರೆಸ್ ಸರ್ಕಾರದ ಈ ಪ್ರಯತ್ನಕ್ಕೆ ಸಾರ್ವಜನಿಕರು ಸಹ ಕೈಜೋಡಿಸಿದ್ದಾರೆ. ಈ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಇನ್ನು ಆ ಯೋಜನೆಗಳ ಪೈಕಿ ಗೃಹಲಕ್ಷ್ಮಿ(Gruhalakshmi) ಯೋಜನೆ ಒಂದು ಮಹತ್ವದ ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ಅವರ ಖಾತೆಗೆ ನೇರವಾಗಿ 2000 ರೂಪಾಯಿಗಳು ಜಮಾ ಆಗಲಿದೆ. ಇನ್ನು ಯೋಜನೆಯ ಲಾಭವನ್ನು ರಾಜ್ಯದ ಪ್ರತಿಯೊಬ್ಬ ಮಹಿಳೆಯು ಪಡೆಯಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿತ್ತು, ಆದ್ರೆ ಈಗ ಕೆಲವೊಬ್ಬರ ಖಾತೆಗೆ ಹಣ ಇನ್ನು ಜಮಾ ಆಗ್ದೇ ಒಂದು ರೀತಿಯ ಗೊಂದಲ ಶುರುವಾಗಿದೆ.

ಹೌದು ಈಗಾಗಲೇ ಗೃಹಲಕ್ಷ್ಮೀ(Gruhalakshmi) ಯೋಜನೆಗೆ ರಾಜ್ಯದಲ್ಲಿ 1.28 ಕೋಟಿಗೂ ಅಧಿಕ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು ಈ ಅರ್ಜಿಗಳನ್ನು ಪರಿಶೀಲಿಸಿ, ಸರ್ಕಾರವು ಇದೆ ಆಗಸ್ಟ್ 30 ರಂದು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ 2000 ಹಣ ಜಮಾ ಮಾಡಿದೆ. ಆಗಸ್ಟ್ 30 ರಂದು ಗೃಹಲಕ್ಷ್ಮೀ ಯೋಜನೆಗೆ ಕಾಂಗ್ರೆಸ್ ಸರ್ಕಾರವು ಚಾಲನೆ ನೀಡಿತ್ತು. ಇನ್ನು ಈಗಾಗಲೇ ಮಹಿಳಾ ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮಾ ಆಗಿರುವುದರಿಂದ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನೂ ಸಾಕಷ್ಟು ಮಹಿಳಾ ಫಲಾನುಭವಿಗಳಿಗೆ 2000 ರೂಪಾಯಿಗಳು ತಮ್ಮ ಬ್ಯಾಂಕಿನ ಖಾತೆಗೆ ಜಮಾ ಆಗದೇ ಇರುವುದರಿಂದ ಅವರು ಬೇಸರಗೊಂಡಿದ್ದಾರೆ. ಹೌದು ಕೆಲವೊಂದು ತಪ್ಪುಗಳಿಂದ ಒಂದಷ್ಟು ಜನ ಮಹಿಳೆಯರ ಖಾತೆಗೆ ಹಣ ಕೂಡ ಇನ್ನು ಬಂದಿಲ್ಲ ಹೀಗಾಗಿ ನಮಗೆ ಹಣ ಬರುತ್ತಾ ಇಲ್ವಾ ಅನ್ನೋ ಗೊಂದಲದ ಜೊತೆಗೆ ಒಂದು ರೀತಿಯಲ್ಲಿ ಭಯದಲ್ಲಿಯೇ ಇದ್ದಾರೆ ಅಂತ ಹೇಳಬಹುದು. ಆದರೆ ಆಂತಕ ಪಡುವ ಅಗತ್ಯವೇ ಇಲ್ಲ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ನಿಮಗೆ ಯಾಕೆ ಹಣ ಬಂದಿಲ್ಲ? ಯಾವಾಗ ಬರುತ್ತೆ ಗೊತ್ತಾ?

ಹೌದು ಈಗಾಗಲೇ ಒಂದಷ್ಟು ಜನ ಮಹಿಳೆಯರು ಮೊದಲ ಕಂತಿನ ಹಣ ಪಡೆದ ಖುಷಿಯ ಜೊತೆಗೆ ಈಗ ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಜನ ಮಹಿಳೆಯರಿಗೆ ಮೊದಲನೇ ಕತ್ತಿನ ಹಣವೇ ಇನ್ನೂ ಕೂಡ ಬಂದಿಲ್ಲ. ಹೀಗಾಗಿ ನಮಗೆ ಹಣ ಬರುತ್ತೋ ಇಲ್ವೋ ಅನ್ನೋ ಗೊಂದಲದಲ್ಲಿದ್ದಾರೆ ಆದರೆ ಆ ಗೊಂದಲ ಬೇಡ ಯಾಕಂತ ಅಂದ್ರೆ ಸ್ವತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಒಂದು ಮಾಹಿತಿ ಬಂದಿದ್ದು ಯಾರ ಮಹಿಳೆಯರ ಖಾತೆಗೆ ಹಣ ಬಂದಿಲ್ವೋ ಅಂತ ಮಹಿಳೆಯರ ಖಾತೆಗೆ ಈ ತಿಂಗಳು ಹಾಗೂ ಕಳೆದ ತಿಂಗಳು ಎರಡು ತಿಂಗಳ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮಾವಣಿ ಆಗುತ್ತೆ. ಯಾರ್ಯಾರು ಗೃಹಲಕ್ಷ್ಮಿ(Gruhalakshmi) ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಒಂದು ಅಪ್ರುವಲ್ ಅನ್ನು ತೆಗೆದುಕೊಂಡಿದ್ದೀರೋ ಅಂತವರಿಗೆಲ್ಲವೂ ಕೂಡ ಈ ಗೃಹಲಕ್ಷ್ಮಿ ಯೋಜನೆಯ ಹಣ ತಲ್ಪೇ ತಲುಪುತ್ತದೆ ಅಂತ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಿಳಿದು ಬಂದಿತ್ತು.

ಪ್ರತಿಯೊಬ್ಬ ಮಹಿಳೆಗೂ ಕೂಡ ಯಾರು ಅರ್ಜಿಯನ್ನು ಸಲ್ಲಿಸಿರ್ತಾರೋ ಅವರಿಗೆ ಹಣ ಬರೋದು ಸಂದೇಹ ಇಲ್ಲ ಹೀಗಾಗಿ ಎರಡು ತಿಂಗಳ ಹಣ ಒಟ್ಟಿಗೆ ಜಮಾವಣೆ ಆಗುತ್ತೆ. ಇನ್ನು ಅರ್ಜಿಯಲ್ಲಿ ಏನಾದ್ರು ತಪ್ಪಿದ್ದು ಅಥವಾ ಕೆಲವೊಂದು ಲೋಪದೋಷಗಳು ಇತ್ತು ಅಂತ ಅಂದ್ರೆ ಅಂತವರು ಪುನಹ ಕೂಡ ಅರ್ಜಿಯನ್ನು ಸಲ್ಲಿಸಿ ಗ್ರಹಲಕ್ಷ್ಮಿ ಯೋಜನೆಯ ಎರಡು ಹಣವನ್ನು ಪಡೆದುಕೊಳ್ಳಬಹುದು. ಆದರೆ ಅರ್ಜಿ ಸಲ್ಲಿಸಿ ಅವರಿಗೆ ಒಂದು ಪ್ರಿಂಟ್ ಔಟ್ ಅನ್ನು ಕೊಟ್ಟಿರುತ್ತಾರೆ ಅವರೆಲ್ಲರಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ತಲ್ಪೇ ತಲುಪುತ್ತದೆ ಅನ್ನೋ ಮಾಹಿತಿ ಇದೀಗ ಬಂದಿದ್ದು ಈ ತಿಂಗಳಲ್ಲೇ ಎರಡು ತಿಂಗಳ ಹಣವನ್ನ ಫಲಾನುಭವಿಗಳ ಖಾತೆಗೆ ಜಮಾವಣೆ ಮಾಡಲಾಗುತ್ತಂತೆ.

ಇದನ್ನೂ ಓದಿ: ಬ್ರೇಕ್ ಅಪ್ ಮಾಡಿಕೊಂಡ ವರ್ಷ ವರುಣ್! ಸೋಶಿಯಲ್ ಮೀಡಿಯಾ ಸ್ಟಾರ್ ನಡುವೆ ಆಗಿದ್ದೇನು ಗೊತ್ತಾ?

ಇದನ್ನೂ ಓದಿ: ಗಣೇಶ ಹಬ್ಬಕ್ಕೂ ಮುನ್ನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ 

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram