ರಾಜ್ಯ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳ ಹಣ ಈಗಾಗಲೇ ರಾಜ್ಯದ ಬಹುತೇಕ ಯಜಮಾನಿ ಮಹಿಳೆಯ ಅಧಿಕೃತ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಆದರೂ ಸಹ ಕೆಲವು ಮಹಿಳೆಯರ ಖಾತೆಗೆ ಒಂದು ಕಂತಿನ ಹಣವೂ ಜಮಾ ಆಗಲಿಲ್ಲ. ಹಾಗೆಯೇ ಕೆಲವರಿಗೆ ಒಂದು ಕಂತಿನ ಹಣ ಬಂದರೆ ಇನ್ನೊಂದು ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿಲ್ಲ. ಅಂತವರು ಹೇಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಏನಿದು ಗೃಹಲಕ್ಷ್ಮಿ ಯೋಜನೆ :- 2023 ಏಪ್ರಿಲ್ ಮೇ ತಿಂಗಳಲ್ಲಿ ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆಯ ಕಾವು ಹೆಚ್ಚಾಗಿತ್ತು. ಆಗ ರಾಜ್ಯದ ಕಾಂಗ್ರೆಸ್ ಸರ್ಕಾರವು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 5 ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿತು. ಅದರಲ್ಲಿ ಗೃಹ ಲಕ್ಷ್ಮಿ ಯೋಜನೆಯು ಒಂದು. ಈ ಯೋಜನೆಯಲ್ಲಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ ರಾಜ್ಯಾ ಸರಕಾರವು 2,000 ರೂಪಾಯಿಗಳನ್ನು ನೇರವಾಗಿ ಖಾತೆಗೆ ಜಮಾ ಮಾಡುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇದ್ದರೆ ಹೀಗೆ ಮಾಡಿ :-
- ನಿಮ್ಮ ಬ್ಯಾಂಕ್ ಅಕೌಂಟ್ ಗೆ ekyc ಅಪ್ಡೇಟ್ ಆಗಿದೆಯೇ ಇಲ್ಲವೇ ಎಂಬುದನ್ನು ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ನಲ್ಲಿ ಹಾಕಿರುವ ಬ್ಯಾಂಕ್ ಗೆ ಹೋಗಿ ಮಾಹಿತಿ ಮಡೆದು ekyc ಮಾಡಿಸಬೇಕು. ಇಲ್ಲದಿದ್ದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ.
- ಈಗ ಯಾವುದೇ ಸರ್ಕಾರಿ ಯೋಜನೆಯ ಹಣ ಜಮಾ ಆಗಬೇಕು ಎಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಆಗದೆ ಇದ್ದರೆ ಆಧಾರ್ ಲಿಂಕ್ ಮಾಡಿಸಿ. ನಂತರ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಗೆ ಹಣ ಬರುತ್ತದೆ.
- ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಮನೆಯ ಎಲ್ಲಾ ಸದಸ್ಯರ ekyc ಅಪ್ಡೇಟ್ ಆಗಿರಬೇಕು. ಇಲ್ಲದೆ ಇದ್ದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ.
- ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಈಗ ಕಡ್ಡಾಯವಾಗಿ NPCI ಮ್ಯಾಪಿಂಗ್ ಮಾಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಹೇಳಿದೆ. ಅದೇ ರೀತಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಯಲ್ಲಿ ನೀಡಿರುವ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸಿ.
- ನಿಮ್ಮ ಬ್ಯಾಂಕ್ ಖಾತೆಯ ಹೆಸರು ಹಾಗೂ ನಿಮ್ಮ ಪಡಿತರ ಚೀಟಿಯಲ್ಲಿ ಇರುವ ಹೆಸರು ಹಾಗೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಎಲ್ಲವೂ ಒಂದೇ ರೀತಿ ಇವೆಯೇ ಎಂಬುದನ್ನು ಪರಿಶೀಲಿಸಿ. ತಪ್ಪಿದ್ದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.
ಮೇಲಿನ ಎಲ್ಲಾ ವಿಧಾನವನ್ನು ಅನುಸರಿಸಿದರೂ ನಿಮ್ಮ ಖಾತೆಗೆ ಹಣ ಜಮಾ ಆಗದೆ ಇದ್ದರೆ ತಾಂತ್ರಿಕ ದೋಷಗಳಿಂದ ಹಣ ಬಾರದೆ ಇದರಬಹುದು. ಎಲ್ಲ ಮಾಹಿತಿಗಳು ಸರಿಯಾಗಿದ್ದು ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇದ್ದರೆ ಒಮ್ಮೆ ಇಲಾಖೆಯ ಗಮನಕ್ಕೆ ತಂದು ನಿಮ್ಮ ಸಮಸ್ಯೆಯ ಬಗ್ಗೆ ಮಾಹಿತಿ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಿಂಗಳಿಗೆ ದಿನಕ್ಕೆ 333 ರೂಪಾಯಿ ಹೂಡಿಕೆ ಮಾಡಿ 17 ಲಕ್ಷ ರೂಪಾಯಿ ಹಿಂಪಡೆಯುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯೋಣ.
ಇದನ್ನೂ ಓದಿ: NPS ನಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು ರೂ 40,000 ಪಿಂಚಣಿ ಪಡೆಯಿರಿ.