GruhaLakshmi Yojana: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಯನ್ನ ಹೀಗೆ ಸಲ್ಲಿಸಬೇಕು! ಎಲ್ಲಿ ಬೇಕಾದರಲ್ಲಿ ಅರ್ಜಿಸಲ್ಲಿಸೋಕಾಗಲ್ಲ!?

GruhaLakshmi Yojana: ಕಾಂಗ್ರೆಸ್ ಸರ್ಕಾರ ನೀಡಿದ್ದ 5 ಗ್ಯಾರಂಟಿಗಳಯಲ್ಲಿ ಒಂದಾದ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಹೌದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಮನೆ ಯಜಮಾನಿಗೆ 2000 ರೂಪಾಯಿ ಹಣ ನೀಡುವ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಮುಹೂರ್ತ ನಿಗದಿಪಡಿಸಿದೆ. ನಾಳೆ ಅಂದರೆ ಜುಲೈ 19ರಂದು ಸಂಜೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಗೆ ನಾಳೆ ಅಂದರೆ ಜುಲೈ 19…. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

WhatsApp Group Join Now
Telegram Group Join Now

ಹೌದು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಮನೆಯೊಡತಿಗೆ ಮಾಸಿಕ ಎರಡು ಸಾವಿರ ರೂಪಾಯಿ ಭತ್ಯೆ ನೀಡುವ ಗೃಹಲಕ್ಷ್ಮಿ ಯೋಜನೆಗೆ ಜುಲೈ 19ರಂದು ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು. ಬ್ಯಾಂಕ್ವೆಟ್ ಹಾಲ್​​​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯ ಆ್ಯಪ್ ಬಿಡುಗಡೆ ಮಾಡಲಿದ್ದು, ಅದೇ ದಿನದಿಂದ ಅರ್ಜಿಗಳು ಅಪ್ ಲೋಡ್ ಆಗಲಿವೆ ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ಇದನ್ನೂ ಓದಿ: ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!

ಗೃಹಲಕ್ಷ್ಮಿ ಅರ್ಜಿ ಹಾಕಲು ಮೊದಲು ಈ ನಂಬರ್ ಗೆ ಮೆಸೇಜ್ ಮಾಡಬೇಕು

ಇನ್ನು ಈಗಾಗ್ಲೇ ಮಹಿಳಾ ಮತ್ತು ಕಲ್ಯಾಣ ಇಲಾಖೆಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಧಿಕಾರಿಗಳು, ಸಿಬ್ಬಂದಿಗೆ ತಳ ಹಂತದಿಂದ ತರಬೇತಿ ಕೊಟ್ಟಿದ್ದೇವೆ ಅಂತ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಹೇಳಿದ್ದಾರೆ. ಇನ್ನು ನಾಡಕಚೇರಿ, ಗ್ರಾಮ ಒನ್, ಬೆಂಗಳೂರು ಒನ್ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಮನೆ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪತಿಯ ಆಧಾರ್ ​​ಕಾರ್ಡ್ ಕೂಡ ಬೇಕಾಗುತ್ತೆ. ಆಧಾರ್​ ಜತೆಗೆ ಮೊಬೈಲ್ ತೆಗೆದುಕೊಂಡು ಹೋದರೆ ಸಾಕು, ಬೇರೇನೂ ಬೇಡ ಅಂತ ತಿಳಿಸಿದ್ದಾರೆ.

ಇದಕ್ಕೂ ಮೊದಲು ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ. ಕೂಡಲೇ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಹೋಗುತ್ತೆ. ಯಾವುದೇ ಮಧ್ಯವರ್ತಿಗಳ ತಲೆನೋವುಗಳು ಇರಲ್ಲ, ಅದಕ್ಕೂ ಮೀರಿ ಗೊಂದಲವಿದ್ದರೆ 1902 ನಂಬರ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಅಂತ ತಿಳಿಸಿರುವ ಅವ್ರು, ಇನ್ನು ಗೃಹಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ. ಮನೆ ಯಜಮಾನಿ ಯಾರೆಂದು ಕುಟುಂಬದವರೇ ನಿರ್ಧರಿಸುತ್ತಾರೆ. ಗೃಹಲಕ್ಷ್ಮೀ ಯೋಜನೆಯಿಂದ 1.28 ಕೋಟಿ ಕುಟುಂಬಕ್ಕೆ ಲಾಭವಾಗುತ್ತೆ. ಈ ಯೋಜನೆಗೆ ಬಜೆಟ್​​ನಲ್ಲಿ 17,500 ಕೋಟಿ ರೂ. ಹಾಕಿದ್ದೇವೆ. ಆಗಸ್ಟ್​ನಲ್ಲಿ ಫಲಾನುಭವಿಗಳ ಬ್ಯಾಂಕ್​​ ಖಾತೆಗೆ ಹಣ ಹಾಕುತ್ತೇವೆ ಅಂತ ಹೇಳಿದ್ದಾರೆ.

ಇನ್ನು ಯೋಜನೆಯಡಿ ನೊಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಬುಕ್ ಆಧಾರ್ ನಂಬರ್ ಜೋಡಣೆಯಾಗಿರುವ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಸದರಿ ಬ್ಯಾಂಕ್‌ ಖಾತೆಯ ಪಾಸ್‌ ಬುಕ್ ನ ಮಾಹಿತಿ ಅಗತ್ಯವಿರುತ್ತದೆ ಅಂತ ತಿಳಿಸಿರುವ ಅವ್ರು, ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ- ಒನ್/ಬಾಪೂಜಿಕೇಂದ್ರ/ಕರ್ನಾಟಕ-ಒನ್/ಬೆಂಗಳೂರು-ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ, ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ, ಇದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿ ಪ್ರತಿ ಸಾವಿರ ಜನರಿಗೆ ಇಬ್ಬರು ಪ್ರಜಾಪ್ರತಿನಿಧಿಗಳ ಆಯ್ಕೆಯಾಗಲಿದ್ದು, ಅವರೇ ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಹೆಸರು ನೋಂದಣಿ ಮಾಡಿಕೊಳ್ಳಲಿದ್ದಾರೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದ್ದಾರೆ.

ಈಗಾಗ್ಲೇ ರಾಜ್ಯದಲ್ಲಿ ಒಟ್ಟು 11 ಸಾವಿರ ಕೇಂದ್ರಗಳಿದ್ದು, ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 30 ಜನರಿಗೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸುತ್ತಿದ್ದು, ಅಂದ್ರೆ ಒಂದು ದಿನಕ್ಕೆ 60ಜನರಿಗೆ ಅವಕಾಶ ಕಲ್ಪಿಸಿದ್ದು, ಈ ಪ್ರಕಾರ ಪ್ರತಿದಿನ 6.50 ಲಕ್ಷ ರಷ್ಟು ಹೆಸರುಗಳು ನೋಂದಣಿಯಾಗಲಿವೆ. ಇನ್ನು ಮುಂದಿನ ವರ್ಷಕ್ಕೆ ಇದು 30 ಸಾವಿರ ಕೋಟಿಯನ್ನ ದಾಟುತ್ತೆ. ಯಾಕಂದ್ರೆ ಈಗಾಗ್ಲೇ 1 ಕೋಟಿ 11 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಮೊಬೈಲ್ ಸಂಖ್ಯೆ ಆಧಾರ್ ಹಾಗೂ ಬ್ಯಾಂಕ್ ಗೆ ಲಿಂಕ್ ಆಗಿದೆ. ಹೀಗಾಗಿ ಮುಂದಿನ ವರ್ಷಕ್ಕೆ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಅಂತ ಹೇಳಿದ್ದಾರೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram