ಮೊದಲ ಕೆಡಿಪಿ (ಕಲಬುರಗಿ ಅಭಿವೃದ್ಧಿ ಕಾರ್ಯಕ್ರಮ) ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. 20 ರಂದು ಅಂದರೆ ನೆನ್ನೆ ಬುದವಾರದಂದು ನಡೆದ ಮೊದಲ ಕೆಡಿಪಿ ಸಭೆಗೆ ಸಚಿವ ಪ್ರಿಯಾಂಕ್ ಖರ್ಗೆ ತೆರಳಿದ್ದರು. ಈ ಸಭೆಯಲ್ಲಿ ರೈತರ ಬೆಳೆ ವಿಮೆಗೆ ಸಂಬಂಧಿಸಿದ ವಿವಿಧ ಇಲಾಖೆ ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳು ಇದ್ದರು. ಈ ವೇಳೆ ಖರ್ಗೆ ಅವರು ಜಿಲ್ಲೆಯ ಎಲ್ಲ ಸಮಸ್ಯೆಗಳ ಕುರಿತು ವಿವರವಾಗಿ ಮಾತನಾಡಿ, ರೈತರಿಗೆ ತೊಂದರೆಯಾಗದಂತೆ ಬ್ಯಾಂಕ್ ಅಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದರು. ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಸರಕಾರ ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಿದ ಗೃಹಲಕ್ಷ್ಮಿ ಯೋಜನೆ(Gruhalakshmi Yojana) 2000 ರೂಪಾಯಿ ಹಣ ಎಷ್ಟೋ ಮಹಿಳೆಯರ ಖಾತೆಗೆ ತಲುಪುತ್ತಿಲ್ಲ ಇದಕ್ಕೆ ಕಾರಣ ಬ್ಯಾಂಕ್ ಅಧಿಕಾರಿಗಳು. ಈ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲದ ವಸೂಲಾತಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಈ ಕ್ರಮವು ಸರಿಯಲ್ಲ ಇದನ್ನು ತಪ್ಪಿಸಲು ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಖಡ ಖಂಡಿತವಾಗಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಭೆಯಲ್ಲಿ ಜಿಲ್ಲಾ ಮಟ್ಟದ ನಮ್ಮ ಪ್ರಗತಿ ಪರಿಶೀಲನೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು (ಕೆಡಿಪಿ) ನಡೆಯಿತು. ಯೋಜನೆಯ ಫಲಾನುಭವಿಗಳಿಗೆ ಸರಕಾರ ನೀಡುವ ಹಣವನ್ನು ಸಾಲ ಪಡೆಯಲು ಬಳಸಲಾಗುತ್ತಿದೆ. ನಾಲ್ಕು ವಾರಗಳಿಂದ ಅಲ್ಲಿದ್ದ ಕೆಜಿಬಿ ಮ್ಯಾನೇಜರ್‌ಗೆ ಯಾರಾದರೂ ಪ್ರಶ್ನೆ ಕೇಳಿದರೆ ಅಸಭ್ಯವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಸಚಿವರು ಸಿಟ್ಟಿನಿಂದ ಹೇಳಿದರು. ನಾವು ಈ ಸಮಸ್ಯೆಗಳ ಬಗ್ಗೆ ಇನ್ನೂ ಕೇಳಿಲ್ಲ, ಆದರೆ ಯಾರಾದರೂ ನಮಗೆ ತಿಳಿಸಿದರೆ ನಾವು’ ಕ್ರಮ ಕೈಗೊಳ್ಳುತ್ತೇನೆ. ಮುಂದೆ ಈ ರೀತಿ ಆಗದಂತೆ ತಡೆಯಲು ಎಲ್ಲ ಬ್ಯಾಂಕ್‌ಗಳಿಗೆ ತಿಳಿಸುವುದಾಗಿ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ರಚ್ಚಿಕರ ಹೇಳಿದರು.
ಈ ವೇಳೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕಾದ ಜನರಿಗೆ ಹಣ ನೀಡದ ಸರ್ಕಾರಿ ಹಾಗೂ ನಿಗಮದ ಹಣವನ್ನು ಬ್ಯಾಂಕ್‌ಗಳಿಗೆ ಹಾಕಬೇಡಿ ಎಂದು ಎಲ್ಲರಿಗೂ ತಿಳಿಸಿದರು. ಎಂಎಲ್‌ಸಿ ತಿಪ್ಪನಪ್ಪ ಕಮಕನೂರ ಹೇಳಿದರು. ರೈತರ ಆತ್ಮಹತ್ಯೆಗೆ ಸರಕಾರ ನೀಡುವ ಭರವಸೆ ಹಾಗೂ ಪರಿಹಾರ ನೀಡಿದ್ದರೂ ಬ್ಯಾಂಕ್ ಅಧಿಕಾರಿಗಳು ಅತ್ಯಂತ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಹೆಬ್ಬಾಳ, ಕಾಳಗಿ ಬ್ಯಾಂಕ್‌ಗಳಲ್ಲೂ ಇದೇ ರೀತಿ ನಡೆದಿದೆ ಎಂದು ಸಚಿವರಿಗೆ ತಿಳಿಸಿದರು.
ಗ್ಯಾರೆಂಟಿ ಯೋಜನೆಯಡಿ ಪಡೆದುಕೊಂಡ ಹಣವನ್ನು ಮರಳಿ ಕೊಡುವಂತೆ ಬ್ಯಾಂಕಿನ ಮ್ಯಾನೇಜರ್ ಅವರಿಗೆ ಕಡ ಸೂಚನೆಯನ್ನು ನೀಡಿದರು. ಆಗ ಮಧ್ಯ ಪ್ರವೇಶಿಸಿ ತಿಪ್ಪಣ್ಣಪ್ಪ ಕಮನೂರ್ ಅವರು ಮಾತನಾಡಿ ಬರೀ ಗ್ಯಾರಂಟಿ ಯೋಜನೆಯ ಹಣವಷ್ಟೇ ಅಲ್ಲ ಸರ್ಕಾರ ನೀಡುತ್ತಿರುವ ವಿವಿಧ ಪರಿಹಾರಗಳ ಹಣ ಹಾಗೂ ಆತ್ಮಹತ್ಯೆ ಪರಿಹಾರದ ಮೊತ್ತವನ್ನು ಕೂಡ ಬ್ಯಾಂಕುಗಳು ಇದೇ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿವೆ ಇದು ಸರಿಯಾದ ಕ್ರಮವಲ್ಲ ಇದನ್ನು ಕೂಡ ನಿಲ್ಲಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಇಲ್ಲಷ್ಟೇ ಅಲ್ಲದೆ ಈ ಪ್ರಕರಣವೂ ಹೆಬ್ಬಾಳ ಹಾಗೂ ಕಾಳಗಿಯಲ್ಲಿಯೂ ಕೂಡ ಈ ಪ್ರಕರಣಗಳು ನಡೆದಿವೆ ಇದನ್ನು ತಪ್ಪಿಸಲು ಕಟ್ಟುನಿಟ್ಟಾಗಿ ಬ್ಯಾಂಕಿನ ಅಧಿಕಾರಿಗಳಿಗೆ ಆಜ್ಞೆಯನ್ನು ನೀಡಿದರು.
ಈ ವರ್ಷ ಹೆಚ್ಚಿನ ಬೆಳೆ ವಿಮೆ ಪರಿಹಾರವನ್ನು ಘೋಷಿಸಿದ ಸರ್ಕಾರ
ಇಷ್ಟು ವರ್ಷಗಳಲ್ಲಿ ಇಷ್ಟು ಚೆನ್ನಾಗಿರೋ ಬೆಳೆ ಪರಿಹಾರವನ್ನು ಕೊಟ್ಟಿರಲಿಲ್ಲ. ಆದರೆ ಈ ವರ್ಷ ಅದನ್ನು ಸಾಧಿಸಿದ್ದೇವೆ ರೈತರಿಗೆ ಹೆಚ್ಚಿನ ಬೆಳೆ ಪರಿಹಾರವನ್ನು ಕೊಟ್ಟಿದ್ದೇವೆ ರಾಜ್ಯದ ಹಲವು ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿ ಆ ಜಿಲ್ಲೆಗಳಿಗೆ ಪ್ರತ್ಯೇಕವಾದ ಪರಿಹಾರವನ್ನು ನೀಡಲಾಗಿದೆ. ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ; ಯಾವ್ಯಾವ ಜಿಲ್ಲೆಯವರಿಗೆ ಹಣ ಬಂದಿದೆ? ಉಳಿದವರಿಗೆ ಯಾವಾಗ ಹಣ ಬರುತ್ತೆ