ಗೃಹಲಕ್ಷ್ಮೀ ಯೋಜನೆಯ 7 ಕಂತಿನ ಹಣದ ಜೊತೆಗೆ ಇಲ್ಲಿಯವರೆಗೆ ಹಣ ಬಾರದೆ ಇದ್ದವರಿಗೆ 6 ಕಂತುಗಳ ಹಣ ಒಟ್ಟಿಗೆ ಬರಲಿದೆ.

Gruhalakshmi Yojana Money

ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ 2,000 ರೂಪಾಯಿ ಸಹಾಯಧನ ನೀಡುತ್ತಿದೆ. ಈ ಯೋಜನೆಯಡಿ ಮೊದಲ 6 ಕಂತಿನ ಹಣ ಮಹಿಳೆಯರ ಖಾತೆಗೆ ನೇರವಾಗಿ ಜಮಾ ಆಗಿದೆ. 7 ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಇರುವ ಮಹಿಳೆಯರಿಗೆ ಮಾರ್ಚ್ 2 ನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಈಗಾಗಲೇ 5 ಮತ್ತು 6ನೇ ಕಂತಿನ ಹಣ ಇನ್ನೂ ಬಂದಿಲ್ಲದವರಿಗೆ ಶೀಘ್ರದಲ್ಲೇ ಖಾತೆಗೆ ಜಮಾ ಮಾಡಲಾಗುವುದು. ಹಾಗೂ ಒಂದು ಕಂತಿನ ಹಣವೂ ಬಾರದೆ ಇದ್ದವರಿಗೆ ಸರ್ಕಾರವು ಎಲ್ಲಾ ಹಣವನ್ನು ಒಮ್ಮೆಲೆ ಖಾತೆಗೆ ಜಮಾ ಮಾಡುತ್ತಿದೆ.

WhatsApp Group Join Now
Telegram Group Join Now

7ನೇ ಕಂತಿನ ಹಣ ಯಾವಾಗ ಖಾತೆಗೆ ಜಮಾ ಆಗುತ್ತದೆ?: 7ನೇ ಕಂತಿನ ಹಣ ಮಾರ್ಚ್ 15, 2024 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಹೇಳಲಾಗುತ್ತಿದ್ದು ಮಾರ್ಚ್ ತಿಂಗಳ ಕೊನೆಯ ದಿನಾಂಕದೊಳಗೆ ಎಲ್ಲಾ ಮಹಿಳೆಯರಿಗೂ 7ನೇ ಕಂತಿನ ಹಣ ಜಮಾ ಆಗುತ್ತದೆ ಎಂದು ಸರ್ಕಾರವು ಮಾಹಿತಿ ನೀಡಿದೆ.

ಒಮ್ಮೆಲೆ ಜಮಾ ಆಗಲಿದೆ ಆರು ಕಂತಿನ ಹಣ:- ತಾಂತ್ರಿಕ ಸಮಸ್ಯೆಯಿಂದ ಜೊತೆಗೆ ಸರಿಯಾಗಿ ಮಾಹಿತಿ ನೀಡದೆ ಇದ್ದ ಕಾರಣದಿಂದ ಜಮಾ ಆಗದೆ ಉಳಿದಿದ್ದ ಹಣವೂ ಒಮ್ಮೆಲೆ ಹಣ ವರ್ಗಾವಣೆ ಆಗಿದೆ. ಈಗಾಗಲೇ ಜನವರಿ ಕೊನೆಯ ವಾರದಲ್ಲಿ ಕೆಲವು ಮಹಿಳೆಯರಿಗೆ ಹಣ ಜಮಾ ಆಗಿದ್ದು, ಜಮಾ ಆಗದೆ ಇರುವ ಮಹಿಳೆಯರಿಗೆ ಮಾರ್ಚ್ ತಿಂಗಳ ಒಳಗೆ 10,000 ರೂಪಾಯಿ ಒಮ್ಮೆಲೆ ಜಮಾ ಆಗಲಿದೆ. ಮಾರ್ಚ್ ತಿಂಗಳ ಕೊನೆಯ ವರೆಗೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣವೂ ವರ್ಗಾವಣೆ ಆಗದೆ ಇದ್ದರೆ ನಿಮ್ಮ ಹತ್ತಿರ ಗ್ರಾಮ್ ಒನ್ ಕೇಂದ್ರ ಅಥವಾ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಉತ್ತಮ ಮೈಲೇಜ್ ಹಾಗೂ ಕಡಿಮೆ ನಿರ್ವಹಣೆಯ ಖರ್ಚನ್ನು ಹೊಂದಿರುವ ಹೀರೋ ಹೋಂಡಾ ಸ್ಪ್ಲೆಂಡರ್ ನ ಬೆಲೆಯನ್ನು ತಿಳಿಯಿರಿ

ಯಾವ ಯಾವ ಕಾರಣಗಳಿಂದ ಮಹಿಳೆಯರಿಗೆ ಹಣ ವರ್ಗಾವಣೆ ಆಗಲಿಲ್ಲ?

  • ಆಧಾರ್ ಲಿಂಕ್ : ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಆಗದೆ ಇದ್ದರೆ ಅಂತವರ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.
  • ಯಜಮಾನಿ ಆಗಿರದಿದ್ದರೆ: ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರು ಯಜಮಾನಿ ಸ್ಥಾನದಲ್ಲಿ ಇಲ್ಲದೆ ಇದ್ದರೆ ಅಂತವರ ಖಾತೆಗೆ ಹಣ ಜಮಾ ಆಗುವುದಿಲ್ಲ.
  • ಎನ್ ಪಿ ಸಿ ಸಿ : ಆಧಾರ್ ಲಿಂಕ್ ಆಗಿದ್ದು ನೀವೇ ಮನೆಯ ಯಜಮಾನಿ ಆಗಿದ್ದರೂ ಸಹ ಎನ್ ಪಿ ಸಿ ಸಿ ಮ್ಯಾಪಿಂಗ್ ಮಾಡಿಸದೆ ಇದ್ದರೆ ಹಣ ಜಾಣ ಆಗುವುದಿಲ್ಲ.
  • ಇ ಕೆವೈ ಸಿ : ನಿಮ್ಮ ಬ್ಯಾಂಕ್ ಖಾತೆಗೆ ಇ ಕೆ ವೈ ಸಿ ಅಪ್ಡೇಟ್ ಆಗದಿದ್ದರೆ ಹಣ ಜಾಣ ಆಗುವುದಿಲ್ಲ.
  • ತಪ್ಪಾದ ಮಾಹಿತಿ : ನೀವು ಅರ್ಜಿ ಸಲ್ಲಿಸುವಾಗ ನೀಡುವ ಎಲ್ಲ ದಾಖಲೆಗಳಲ್ಲಿ ಮಹಿಳೆಯ ಹೆಸರು ಅಥವಾ ವಿಳಾಸವು ಒಂದೇ ರೀತಿಯಲ್ಲಿ ಇಲ್ಲ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್ ಇದೆ ಎಂದಾದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.
  • ಸರ್ಕಾರಿ ನೌಕರರು : ನೀವು ಅಥವಾ ನಿಮ್ಮ ಮನೆಯ ಸದಸ್ಯರು ಸರ್ಕಾರಿ ನೌಕರರು ಆಗಿದ್ದರೆ ಆದರೂ ನೀವು ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ಮಾನ್ಯವಾಗುವುದಿಲ್ಲ.
  • ಆದಾಯ ತೆರಿಗೆ : ಅರ್ಜಿದಾರರು ಆದಾಯ ತೆರಿಗೆ ಪಾವತಿ ಮಾಡುತ್ತಾ ಇದ್ದಲ್ಲಿ ನಿಮಗೆ ಹಣ ಬರುವುದಿಲ್ಲ.
  • ತಾಂತ್ರಿಕ ದೋಷ : ಡಿಬಿಟಿ ಹಣ ವರ್ಗಾವಣೆ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ಕೆಲವೊಮ್ಮೆ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷ ಗಳಿಂದಾಗಿ ಮಹಿಳೆಯರ ಖಾತೆಗೆ ಹಣ ಬಾರದೆ ಇರಬಹುದು.

ಇದನ್ನೂ ಓದಿ: ಸೂರ್ಯ ಘರ್ ಯೋಜನೆಗೆ ಪೋಸ್ಟ್ ಆಫೀಸ್ ನಲ್ಲೂ ಸಹ ಅರ್ಜಿ ಸಲ್ಲಿಸಬಹುದು