2024–25ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾತಿ ಇರುವ ಅತಿಥಿ ಶಿಕ್ಷಕರ ಪಿಎಸ್‌ಟಿ ಹಾಗೂ ಜಿಪಿಟಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಹುದ್ದೆಯ ಬಗ್ಗೆ ಮಾಹಿತಿ :- ರಾಜ್ಯವಾರು ಹಾಗೂ ತಾಲೂಕುವಾರು. ಖಾಲಿ ಇರುವ ಒಟ್ಟು 33,863 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ 1,336 ಹಾಗೂ ಕಲಬುರಗಿ ಜಿಲ್ಲೆಯಲ್ಲಿ 1,832 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 1,758 ಹಾಗೂ ರಾಯಚೂರು ಜಿಲ್ಲೆಯಲ್ಲಿ 3,205 ಹಾಗೂ ಯಾದಗಿರಿಯಲ್ಲಿ 2,259 ಹಾಗೂ ಚಿಕ್ಕೋಡಿಯಲ್ಲಿ 2,231 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 1,470 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 1,088 ಹಾಗೂ ಬೆಳಗಾವಿ ಯಲ್ಲಿ 1,457 ಹಾಗೂ ಬೆಂಗಳೂರು ದಕ್ಷಿಣ ನಲ್ಲಿ 1,092 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,033 ಹಾಗೂ ಮೈಸೂರು ಜಿಲ್ಲೆಯಲ್ಲಿ 1,001 ಹುದ್ದೆಗಳ ಭರ್ತಿಗೆ ಮುಂದಾಗಿದೆ.
ಜೂನ್ ಒಂದರಂದು ಆದೇಶ ಹೊರಡಿಸಲಾಗಿದೆ :- ಜೂನ್ ಒಂದರಂದು ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಜಾಗಕ್ಕೆ ಕಾಯಂ ಶಿಕ್ಷಕರನ್ನೂ ನೇಮಿಸಿಕೊಳ್ಳುವ ವರೆಗೆ ಇಲ್ಲವೇ 2024-25 ರ ಶೈಕ್ಷಣಿಕ ವರ್ಷ ಅಂತ್ಯ ಆಗುವ ತನಕ ಕೊರತೆ ಇರುವ ಶಿಕ್ಷಕರ ಜಾಗಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಮೊದಲನೇ ಹಂತದಲ್ಲಿ ಒಟ್ಟು 33,863 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆದೇಶದಲ್ಲಿ ಇರುವ ಅಂಶಗಳು ಏನು?
ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ಆದೇಶ ಹೊರಡಿಸಿ ಕೆಲವು ಅಂಶಗಳನ್ನು ತಿಳಿಸಿದೆ.
- ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಅದಕ್ಕೂ ಹೆಚ್ಚಿನ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ನೇಮಕ ಮಾಡಿಕೊಳ್ಳಬಾರದು.
- ನೇಮಕ ಆಗುವ ಅತಿಥಿ ಶಿಕ್ಷಕರ ಜವಾಬ್ದಾರಿಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ನೀಡಲಾಗುವುದು.
- ಗ್ರಾಮೀಣ ಭಾಗದ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಜೊತೆಗೆ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆಗೆ ಹೆಚ್ಚು ಶಿಕ್ಷಕರ ನೇಮಕಾತಿ ಮಾಡಬೇಕು.
- ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು ಬೆಂಗಳೂರು ಪಬ್ಲಿಕ್ ಶಾಲೆಗಳು ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆ ಇರುವ ಶಾಲೆಗಳಿಗೆ ಜೊತೆಗೆ ಆದರ್ಶ ವಿದ್ಯಾಲಯಡಲ್ಲಿ ಶೇಕಡಾ 100% ನಾಸ್ತು ಅತಿಥಿ ಶಿಕ್ಷಕರನ್ನು ಭರ್ತಿ ಮಾಡಬೇಕು.
- ಖಾಯಂ ಶಿಕ್ಷಕರು ನೇಮಕ ಆಗುವ ತನಕ ಮಾತ್ರ ಅತಿಥಿ ಶಿಕ್ಷಕರು ಇರುತ್ತಾರೆ.
- ಇಲಾಖೆ ಹೊರಡಿಸುವ ಆದೇಶದ ಅನ್ವಯ ಕನಿಷ್ಠ ಅಂಕ ಗಳಿಸಿದ ಅಭ್ಯರ್ಥಿ ಗಳನ್ನ ಮಾತ್ರ ಆಯ್ಕೆ ಮಾಡಬೇಕು. ಜೊತೆಗೆ ಮೆರಿಟ್ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು.
ಅತಿಥಿ ಶಿಕ್ಷಕರಿಗೆ ನೀಡುವ ಗೌರವ ಧನ ಏಷ್ಟು?: ಅತಿಥಿ ಶಿಕ್ಷಕರಿಗೆ ಸರಕಾರ ಯಾವುದೇ ಸಂಬಳ ನೀಡುವುದಿಲ್ಲ. ಅವರಿಗೆ ಸರಕಾರವು ಗೌರವ ಧನ ನೋಡುತ್ತದೆ. ಆಯ್ಕೆಯಾದ ಅತಿಥಿ ಶಿಕ್ಷಕರಿಗೆ ತಿಂಗಳಿಗೆ 10,000 ರೂಪಾಯಿ ಗೌರವ ಧನ ನೀಡುತ್ತದೆ.
ಸರಕಾರಿ ಶಿಕ್ಷಕರಾಗಿ ಕೆಲಸ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರಾಜ್ಯದ ಯಾವ ಶಾಲೆಯಲ್ಲಿ ಆದರೂ ನೇಮಕ ಆಗಬಹುದು. ನೀವು ಕರ್ನಾಟಕ ರಾಜ್ಯದಾದ್ಯಂತ ಯಾವುದೇ ಪ್ಲೇಸ್ ನಲ್ಲಿ ಆದರೂ ಕೆಲಸ ಮಾಡಲು ನೀವು ರೆಡಿ ಇದ್ದರೆ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶಗಳು! ಇಂದೇ ಅರ್ಜಿಯನ್ನು ಸಲ್ಲಿಸಿ!
ಇದನ್ನೂ ಓದಿ: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.