ಆಧುನಿಕ ಯುಗದಲ್ಲಿ ವಿಕಲಚೇತನರು ಯಾರಿಗೂ ಯಾವುದಕ್ಕೂ ಕಮ್ಮಿಯಿಲ್ಲ. ಎಲ್ಲವನ್ನು ಮೀರಿಸುವಂತಹ ಕೆಲಸ ಮಾಡಿ ತೋರಿಸುತ್ತಿದ್ದಾರೆ. ಅಲ್ದೇ ವಿಕಲಚೇತನರಿಗೆ ಸರಕಾರಿ ನೌಕರಿಯಲ್ಲಿ ಮೀಸಲಾತಿ ಇದ್ದು, ಅವರುಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು, ಅದರ ಜೊತೆಗೆ ವಿಕಲಚೇತನರಿಗಾಗಿ ಸರಕಾರದಿಂದ ಅನೇಕ ಯೋಜನೆಗಳು ಜಾರಿಯಾಗಿವೆ. ಹೀಗಾಗಿ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು. ಯಾಕಂದ್ರೆ ವಿಕಲಚೇತನರಿಗೆ ಸಂಬಂಧಿಸಿದ ಯೋಜನೆಗಳ ಸೇವೆಗಳು, ವಿಕಲಚೇತನರ ವಿದ್ಯಾರ್ಥಿವೇತನ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ವಿವಾಹ ಪ್ರೋತ್ಸಾಹ ಧನ ಯೋಜನೆ, ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರ ಪ್ರಶಸ್ತಿ, ವಿಕಲಚೇತನರಿಗೆ ಸಾಧನ ಸಲಕರಣೆಗಳು, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಸೇರಿದಂತೆ ಅಂಗವಿಕಲ ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಯೋಜನೆಗಳ ಸೇವೆಗಳು ಸಾಕಷ್ಟಿದ್ದು, ಸರ್ಕಾರ ಕಾಲ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವನೆಗಳೊಂದಿಗೆ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿದ್ದೂ, ಅರ್ಹರು ಯೋಜನೆಯ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಪಡ್ತಿದೆ. ಅಲ್ದೇ ವಿಶೇಷ ಚೇತನರು, ಅಂಗವೈಕಲ್ಯ ಇರುವಂತವರು ಯೋಜನೆಯ ಲಾಭವನ್ನ ಸದುಪಯೋಗ ಪಡೆಸಿಕೊಳ್ಳಬೇಕು. ಸರ್ಕಾರ ಇದೀಗ ಇಂತಹ ಜನರಿಗಾಗಿ ಹೊಸ ಅರ್ಜಿ ಆಹ್ವಾನಿಸಿದ್ದು, ಅರ್ಹರು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವುದು ಎಲ್ಲಿ? ಏನೆಲ್ಲಾ ಸೌಲಭ್ಯಗಳನ್ನು ಪಡೆಯಬಹುದು
ಹೌದು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಲವು ಯೋಜನೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೀಗಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಲು ಸೂಚಿಸಲಾಗಿದೆ. ಇನ್ನು ಯೋಜನೆಯ ಲಾಭ ಪಡೆಯಲು ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸೋದು ಹೇಗೆ ಮತ್ತು ಎಲ್ಲಿ? ಕಲಾವಕಾಶ ಮಿತಿ ಇದ್ಯಾ? ಏನೆಲ್ಲಾ ದಾಖಲೆಗಳು ಬೇಕು ಇನ್ನು ಉಳಿದ ಸಂಪೂರ್ಣ ಮಾಹಿತಿಯನ್ನ ಒಂದೊದಾಗೆ ನೋಡ್ತಾಹೋಗೋಣ ಬನ್ನಿ. ಮುಖ್ಯವಾಗಿ ಈ ಯೋಜನೆಯಲ್ಲಿ ಯಾವೆಲ್ಲ ಸೌಲಭ್ಯಗಳಿವೆ ಅನ್ನೋದನ್ನ ನೋಡೋದಾದ್ರೆ, ಟಾಕಿಂಗ್ ಲ್ಯಾಪ್ ಟಾಪ್, ಮೋಟಾರು ದ್ವಿಚಕ್ರ ವಾಹನ, ಬೈಲ್ ಕಿಟ್, ಹೊಲಿಗೆ ಯಂತ್ರಗಳು ಸೇರಿದಂತೆ ವಿಕಲಚೇತನರ ಕೆಲವೊಂದು ಸಾಧನ ಸಲಕಾರಣೆಗಳನ್ನ ನೀಡ್ತಾ ಇದ್ದು ಇವುಗಳನ್ನ ಪಡೆಯಲು ಅರ್ಹರು ಅರ್ಜಿ ಸಲ್ಲಿಸಬಹುದು. ಹೌದು ನಿಮ್ಮ ಹತ್ತಿರ ಗ್ರಾಮ ಒನ್ ಗೆ ಭೇಟಿ ಕೊಟ್ಟು ಅಗತ್ಯ ದಾಖಲೆಗಳನ್ನ ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಲಾಭವನ್ನ ಮುಖ್ಯವಾಗಿ ಎಸ್ ಎಸ್ ಎಲ್ ಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸ ಮಾಡಲು ಬಯಸುವವರು, ಟಾಕಿಂಗ್ ಲ್ಯಾಪ್ ಟಾಪ್ ಪಡೆದುಕೊಳ್ಳಬಹುದು, ಇನ್ನು ದೈಹಿಕ ಅಂಗ ವೈಕಲ್ಯ ಇರುವವರಿಗೆ ಮೋಟಾರ್ ಬೈಕ್, ದೃಷ್ಟಿ ದೋಷ ಇರೋರಿಗೆ ಬೈಲ್ ಕಿಟ್, ಶ್ರಾವಣ ದೋಷ ಇರುವಂತವರಿಗಾಗಿ ಹೊಲಿಗೆ ಯಂತ್ರಗಳು ಸೇರಿದಂತೆ ವಿಕಲಚೇತನರಿಗೆ ಒಂದಷ್ಟು ಸಲಕರಣೆಗಳನ್ನ ನೀಡಲಾಗುತ್ತಿದೆ. ಹೀಗಾಗಿ ಆಸಕ್ತರು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅರ್ಹರು ತಮ್ಮ ಆಧಾರ್ ಕಾರ್ಡ್,ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, UDID ಕಾರ್ಡ್ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಜಿಲ್ಲೆಯ ಅಂಗವಿಕಲರ ಕಲ್ಯಾಣಧಿಕಾರಿಗಳು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿಗೂ ಕೂಡ ಭೇಟಿ ನೀಡಿ ಹೆಚ್ಚಿನ ಮಾಹಿತಿ ಲಾಡೆದು ನಂತರ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ನೀವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾ? ಹೀಗೆ ಅರ್ಜಿಯನ್ನು ಸಲ್ಲಿಸಿ