ರಾಮಮಂದಿರಕ್ಕೆ ಹನುಮಾನ್ ಚಿತ್ರತಂಡದಿಂದ ದೊಡ್ಡ ಪ್ರಮಾಣದ ಹಣ ದೇಣಿಗೆ!

Hanuman Makers Ram Mandir

ಇವತ್ತಿನ ಭಾರತದ ಜನರ ಕಣ್ಣು ಅಯೋಧ್ಯೆಯ ಮೇಲೆ ಇದೆ. ಅಯೋಧ್ಯೆಯಲ್ಲಿ ಏನಾಗುತ್ತಿದೆ. ಯಾರೂ ಏಷ್ಟು ಹಣವನ್ನು ದೇಣಿಗೆ ನೀಡಿದರು ಎಂಬೆಲ್ಲ ಚರ್ಚೆಗಳು ಆಗುತ್ತಲಿವೆ. ಈಗಾಗಲೇ ದೇಶದ ಹಲವಾರು ಸೆಲೆಬ್ರಿಟಿ ಗಳು ಲಕ್ಷಗಟ್ಟಲೆ ಹಣವನ್ನು ಬಂಗಾರವನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಅಂತೆಯೇ ಈಗ ಹನುಮಾನ್ ಚಿತ್ರತಂಡದಿಂದ ಸಹ ಹಣವನ್ನು ದೇಣಿಗೆ ನೀಡುತ್ತಾ ಇದೆ. ಹಲವು ಫಿಲ್ಮ್ ಗಳು ತಮ್ಮ ಚಿತ್ರದ ಯಶಸ್ಸನ್ನು ನಾನಾ ರೀತಿಯಲ್ಲಿ ಸಂಭ್ರಮ ಪಡುತ್ತಾರೆ ಈಗ ಹನುಮಾನ್ ಚಿತ್ರತಂಡದಿಂದ ತಮ್ಮ ಚಿತ್ರದ ಯಶಸ್ಸನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವ ರೂಪದಲ್ಲಿ ಆಚರಿಸುತ್ತಾ ಇದೆ.

WhatsApp Group Join Now
Telegram Group Join Now

ಏಷ್ಟು ಹಣ ದೇಣಿಗೆ ನೀಡುತ್ತಿದೆ ಚಿತ್ರ ತಂಡ:-

ಭಾರತ ಮತ್ತು ವಿವಿಧ ರಾಷ್ಟ್ರಗಳಲ್ಲಿ ಪ್ರದರ್ಶನ ಪಡೆಯುತ್ತಾ ಇರುವ ಚಿತ್ರ ಹನುಮಾನ್. ಈಗಾಗಲೇ4.5 ರೇಟಿಂಗ್ ಪಡೆದಿದೆ. ಭರ್ಜರಿ ಯಶಸ್ಸನ್ನು ಕಾಣುತ್ತಾ ಇರುವ ಚಿತ್ರ ತಂಡ ಈ ಮೊದಲೇ ಟಿಕೆಟ್ ದರದ 5 ರೂಪಾಯಿಗಳನ್ನು ರಾಮ ಮಂದಿರಕ್ಕೆ ನೀಡಬೇಕು ಎಂದು ನಿರ್ಧರಿಸಿತ್ತು  ಅದರಂತೆಯೇ ಈಗ ಗಳಿಸುವ ಹಣವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುತ್ತಿದೆ. ಚಿತ್ರ ತಂಡದ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಶೆ ವ್ಯಕ್ತವಾಗುತ್ತದೆ ಇದೆ. ಈಗಾಗಲೇ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಿನಿಮಾ 53,28,211 ಟಿಕೆಟ್ ಗಳು ಸೆಲ್ ಆಗಿವೆ. ಅದರಲ್ಲಿ ಸಂಗ್ರಹವಾದ 2,66,41,055 ರೂಪಾಯಿಗಳನ್ನು ದೇವಸ್ತಾನಕ್ಕೆ ನೀಡಿದೆ. 80 ಕೋಟಿಗೂ ಅಧಿಕ ಹಣವನ್ನು ಈ ಚಿತ್ರ ಗಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹನುಮಾನ್ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ 

ಮೂಲತಃ ತೆಲುಗಿನ ಚಿತ್ರ ಇದಾಗಿದ್ದು, ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮಾ. ಕಡಿಮೆ ಬಜೆಟ್ ನಲ್ಲಿ ಚಿತ್ರವನ್ನು ಮಾಡಿದ್ದಾರೆ ಎನ್ನಲಾಗಿದೆ. ಹನುಮಾನ್ ಸಿನಿಮಾ 5 ಭಾಷೆಗಳಲ್ಲಿ ಅಂದರೆ ಮಲಯಾಳಂ, ಕನ್ನಡ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಚಿತ್ರದಲ್ಲಿ ಅಂಜನಾದ್ರಿಯನ್ನು ಕಾಲ್ಪನಿಕವಾಗೀ ತೋರಿಸಲಾಗಿದೆ. ಚಿತ್ರದ ನಾಯಕಿಯಾಗಿ ಅಮೃತಾ ಅಯ್ಯರ್ ಕಾಣಿಸಿಕೊಂಡಿದ್ದಾರೆ. ತೇಜಾ ಸಜ್ಜ ನಾಯಕನಾಗಿ ಉತ್ತವಾಗಿ ನಟಿಸಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ರಾಜ್ ದೀಪಕ್ ಶೆಟ್ಟಿ ಮತ್ತು ವಿನಯ್ ರೈ ಪ್ರಮುಖ ಪಾತ್ರಧಾರಿಗಳು. ಚಿತ್ರಕ್ಕೆ ಈಗಾಗಲೇ ಹಲವರು ಗಣ್ಯರು ಉತ್ತಮವಾಗಿದೆ ಎಂದು ಹೇಳಿದ್ದಾರೆ. ಭಾರತದ ತುಂಬಾ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಹುದ್ದೆಗಳ ನೇಮಕಾತಿ ನಡೆಯುತ್ತಿದೆ

ಚಿತ್ರ ತಂಡ ಗಳಿಸಿದ ಮೊತ್ತ:-

2024 ಸಿನಿಮಾ ಪ್ರಿಯರಿಗೆ ನಿಜವಾದ ಹಬ್ಬವಾಗಿದೆ. ಒಂದಾದ ಮೇಲೆ ಒಂದು ಸೂಪರ್ ಹಿಟ್ ಫಿಲ್ಮ್ ಗಳು ಬಿಡುಗಡೆ ಆಗುತ್ತಾ ಇವೆ. ದರ್ಶನ್ ನಟಿಸಿದ ಕಾಟೇರ ಈಗಾಗಲೇ ಸದ್ದು ಮಾಡುತ್ತಿದೆ. ಈಗ ಹನುಮಾನ್ ಚಿತ್ರ ಸಹ ಸೂಪರ್ ಹಿಟ್ ಆಗಿದೆ. ಭಾರತ ಮತ್ತು ವಿದೇಶಗಳಲ್ಲಿ ಈ ಚಿತ್ರ ಪ್ರದರ್ಶನ ಗೊಂಡಿದೆ. ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ 100 ಕೋಟಿಯ ಗಡಿ ದಾಟಿದೆ ಎಂದು ಚಿತ್ರತಂಡ ತಿಳಿಸಿದೆ.
ರಾಮ ಮಂದಿರ ಪ್ರತಿಷ್ಟಾಪನೆ ಸಮಯದಲ್ಲಿ ಬಿಡುಗಡೆ ಆಗಿರುವುದು ಚಿತ್ರ ತಂಡಕ್ಕೆ ಒಂದು ರೀತಿಯ ಲಾಭ ತಂದುಕೊಟ್ಟಿದೆ. ಚಿತ್ರೀಕರಣ ಮತ್ತು ಚಿತ್ರಕಥೆ ಜನರಿಗೆ ಇಷ್ಟವಾಗಿದೆ. ಆದರಿಂದ ಎರಡು ಮೂರು ಭಾರಿ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ನೋಡುತ್ತಾ ಇದ್ದಾರೆ. ಚಿತ್ರ ತಂಡವು ಬಹಳ ಸಂತೋಷದಿಂದ ಇದೆ. ವಿದೇಶಗಳಲ್ಲಿ ಸಹ ಭಾರತೀಯರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: 6000 ಗಳ ರಿಯಾಯಿತಿಯಲ್ಲಿ ಹೊಸ Vivo T2X 5G ನಲ್ಲಿ ದೊಡ್ಡ ಮೊತ್ತವನ್ನು ಉಳಿಸಲು ಸಿದ್ಧರಾಗಿ, ನಂಬಲಾಗದ ಬೆಲೆಯೊಂದಿಗೆ