ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಹಾಗೂ ಭುವನ್; ಮದುವೆಯ ಸುಂದರ ಕ್ಷಣಗಳು, ಯಾರೆಲ್ಲ ಬಂದಿದ್ರು ಗೊತ್ತಾ?

ಸ್ನೇಹಿತರೆ ಸ್ಯಾಂಡಲ್ವುಡ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಭುವನ್ ಹಾಗೂ ಹರ್ಷಿಕಾ ಈಗ ಮದುವೆ ಮೂಲಕ ಒಂದಾಗಿದ್ದಾರೆ. ಪ್ರೀತಿಸಿ ಮನೆಯವರ ಒಪ್ಪಿಸಿ ಮದುವೆ ಆಗಿರುವ ಹರ್ಷಿಕಾ, ಭುವನ್ ಮುಖದಲ್ಲಿ ಮದುವೆ ರಂಗು ತುಂಬಿದೆ. ಹೌದು ವಿರಾಜಪೇಟೆಯಲ್ಲಿಯೇ ಈ ಜೋಡಿ ಮದುವೆಯಾಗಿದ್ದಾರೆ. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಭುವನ್‌ ಹರ್ಷಿಕಾ ಹಸೆಮಣೆ ಏರಿದ್ದಾರೆ.​ ಇವರಿಬ್ಬರ ವಿವಾಹ ಆಮಂತ್ರಣ ಪತ್ರಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೊಡವ ಭಾಷೆಯಲ್ಲಿ ಲಗ್ನ ಪತ್ರಿಕೆ ಪ್ರಿಂಟ್ ಮಾಡಲಾಗಿತ್ತು. ಆಗಸ್ಟ್ 24 ಕ್ಕೆ ಹೊಸ ಬಾಳಿಗೆ ಕಾಲಿಟ್ಟಿರುವ ಹರ್ಷಿಕಾ ಭುವನ್ ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಕೊಡವ ಸಂಪ್ರದಾಯದಂತೆ ಇವರಿಬ್ಬರ ಮದುವೆ ನಡೆದಿದೆ. ಹೌದು ಕೊಡವ ಸಂಪ್ರದಾಯದಂತೆಯೇ ಮದುವೆಯ ಎಲ್ಲ ಶಾಸ್ತ್ರಗಳು ನಡೆದಿದೆ. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ಈ ವಿವಾಹದಲ್ಲಿ ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದ್ದಾರೆ.

WhatsApp Group Join Now
Telegram Group Join Now

ಹರ್ಷಿಕಾ ಅವರ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಹಾಗೂ ಮಗಳು ಕೂಡ ಆಗಮಿಸಿದ್ದರು. ಅವರು ಮದುವೆಯಲ್ಲಿ ಭಾಗಿಯಾದ ಫೋಟೋಸ್ ವೈರಲ್ ಆಗಿವೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 4 ಖ್ಯಾತಿಯ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಅವರು ಕೊಡಗಿನಲ್ಲಿ ಕೊಡವ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಈ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು, ರಾಜಕಾರಣಿಗಳು ಆಗಮಿಸಿದ್ದರು. ಅಲ್ದೇ ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ಸಂದರ್ಭದಲ್ಲಿ ಹರ್ಷಿಕಾ ಪೂಣಚ್ಚ ಅವರು ಸುಂದರವಾದ ರೆಡ್ ಸೀರೆಯಲ್ಲಿ ಮಿಂಚಿದ್ದಾರೆ. ಹರ್ಷಿಕಾ ಅವರ ಮದುವೆ ಫೋಟೋಗಳು ಈಗ ಫುಲ್ ವೈರಲ್ ಆಗಿವೆ.

ಹೌದು ಹರ್ಷಿಕಾ, ಭುವನ್ ಅವರು ಕೊಡವ ಸಂಪ್ರದಾಯದಲ್ಲಿ ಮದುವೆ ಆಗಿದ್ದಾರೆ. ಆದ್ರೆ ಈ ಮೊದಲು ಅವರಿಗೆ ಬೆಂಗಳೂರಿನಲ್ಲಿ ಮದುವೆ ಆಗಬೇಕು ಎಂಬ ಆಲೋಚನೆ ಇತ್ತಂತೆ. ಆದರೆ ಈ ಜೋಡಿ ನಮ್ಮ ಸಂಸ್ಕೃತಿ, ಆಚಾರ-ವಿಚಾರ ಬಿಡಬಾರದು ಅಂತ ಕೊಡಗಿನಲ್ಲಿ ಕೊಡವ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಎರಡು ದಿನಗಳ ಕಾಲ ಈ ಮದುವೆ ಕಾರ್ಯಕ್ರಮ ನಡೆದಿದೆ.

ಇನ್ನು ಕೊಡವ ಜೋಡಿಯ ಮದುವೆಯಲ್ಲಿ ಬಗೆ ಬಗೆಯ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಸಸ್ಯಾಹಾರ, ಮಾಂಸಾಹಾರ ಎರಡೂ ಇತ್ತು, ಕೊಡವ ಶೈಲಿಯ ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರಿಯಾನಿ, ಮಟನ್ ಪ್ರೈ, ಚಿಕನ್ ಪ್ರೈ, ವೆಜಿಟೇಬಲ್ ಪಲಾವ್ , ಆಲಸಂಡೆ ಪಲ್ಯ, ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ ಹೀಗೆ ನಾನಾ ಭಕ್ಷ ಭೋಜನಗಳಿತ್ತು. ಇನ್ನು ಪಕ್ಕ ಸಂಪ್ರದಾಯದಂತೆ ಮದುವೆ ಆಗಿರೋ ಈ ಜೋಡಿ ಲುಕ್ ನಲ್ಲೂ ಕೂಡ ಅಷ್ಟೇ ಸಂಪ್ರದಾಯಬದ್ದವಾಗಿ ರೆಡಿಯಾಗಿ ಮಿಂಚುತ್ತಿದ್ರು.

ಇವ್ರ ಮದುವೆಯ ಸುಂದರ ಕ್ಷಣಗಳು ಫುಲ್ ವೈರಲ್

ಹೌದು ಕೊಡವ ಶೈಲಿಯಲ್ಲಿ ಎರಡು ದಿನ ಅದ್ದೂರಿಯಾಗಿ ವಿವಾಹ ಜರುಗಿತು. ಮೊದಲ ದಿನ ಊರು ಕೂಡುವ ಶಾಸ್ತ್ರ ನಡೆಯಿತು. ಊರು ಕೂಡುವ ಶಾಸ್ತ್ರದ ದಿವನೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯಧಾರಣೆ ಮಾಡಲಾಯಿತು. ನಂತರ ಎರಡನೇ ದಿನ ಬಳೆ ಶಾಸ್ತ್ರ ನಂತರ ಭುವನ್ ಹಾಗೂ ಹರ್ಷಿಕಾ ಇಬ್ಬರು ಕೂಡ ಒಬ್ಬೊರನೊಬ್ಬರು ನೋಡಿದ ಮೇಲೆ ತಾಳಿ ಶಾಸ್ತ್ರ ನಡೆದಿದೆ. ಈ ಎರಡನೇ ದಿನದ ಕಾರ್ಯಕ್ರಮದಲ್ಲಿ ಹರ್ಷಿಕ ಪೂಣಚ್ಚ ಅವರು ವಧುವಾಗಿ ಮಿಂಚಿರೋ ಫೋಟೋಸ್ ಈಗ ಫುಲ್ ವೈರಲ್ ಆಗಿವೆ. ಹೌದು ಅವರ ಮದುವೆಯ ಫೋಟೋಗಳು ಎಲ್ಲ ಕಡೆ ಹರಿದಾಡುತ್ತಿವೆ. ಇನ್ನು ಹರ್ಷಿಕಾ ಪೂಣಚ್ಚ ಅವರು ಸುಂದರವಾದ ರೆಡ್ ಸೀರೆಯಲ್ಲಿ ಮಿಂಚಿದ್ದಾರೆ. ಹರ್ಷಿಕಾ ಅವರ ಮದುವೆ ಫೋಟೋಗಳನ್ನು ಇನ್ನೂ ಹರ್ಷಿಕ ಪೋಸ್ಟ್ ಮಾಡಿಲ್ಲ. ಆದ್ರೆ ಕೆಲವೊಂದಷ್ಟು ಫೋಟೋಗಳು ಈಗ ಎಲ್ಲ ಕಡೆ ವೈರಲ್ ಆಗ್ತಿವೆ.

ಹರ್ಷಿಕಾ ಹಾಗೂ ಭುವನ್ ಫೋಟೋ ಇನ್ನೂ ರಿಲೀಸ್ ಆಗಿಲ್ಲವಾದ್ರೂ, ಒಂದಷ್ಟು ಪೋಟಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಅದರಲ್ಲೂ ಹರ್ಷಿಕಾ ಅವರ ಕ್ಯೂಟ್ ಬ್ರೈಡಲ್ ಲುಕ್​ನ ಒಂದು ವ್ಯೂ ವಾವ್ ಅನಿಸುವಂತೆ ಇದೆ. ಇದರಲ್ಲಿ ಹರ್ಷಿಕಾ ಮುದ್ದಾಗಿ ಕಾಣಿಸಿದ್ದಾರೆ. ಕೆಂಬಣ್ಣದ ಉಡುಗೆಯಲ್ಲಿ ವಧುವಾಗಿ ಮಿಂಚಿದ್ದಾರೆ ಕೊಡಗಿನ ಕುವರಿ. ಇನ್ನು ಭುವನ್ ಪೊನ್ನಣ್ಣ ಕೂಡ ಅಪ್ಪಟ ಕೊಡಗಿನ ಗಂಡುಗಲಿಯಂತೆ ರೆಡಿಯಾಗಿದ್ದು ಮಿಂಚಿದ್ದಾರೆ. ಕೊಡಗಿನ ಉಡುಗೆಯನ್ನ ತೊಟ್ಟು ಶುದ್ಧ ಬಿಳಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿದ್ದಾರೆ. ಇದರ ಜೊತೆಗೆ ಹರ್ಷಿಕ ಅವ್ರಿಗೆ ಮ್ಯಾಚಿಂಗ್ ಅನ್ನುವಂತೆ ಅಲ್ಲಲ್ಲಿ ಕೆಂಪು ಬಣ್ಣದ ವಸ್ತ್ರವನ್ನ ತೊಟ್ಟಿದ್ದು ಆ ಫೋಟೋಗಳು ಇಲ್ಲದೆ ವೈರಲ್ ಆಗ್ತಿದ್ದು. ಎಲ್ಲರು ಹರ್ಷಿಕ ಅವ್ರ ಬ್ರೈಡಲ್ ಲುಕ್ ಗೆ ಫಿಧಾ ಆಗಿದ್ದಾರೆ.

ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ – ಪ್ರೇರಣಾ ದಂಪತಿ

ಇದನ್ನೂ ಓದಿ: ತಪ್ಪಿನ ಅರಿವಾಗಿ ದಿಢೀರ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram