ದೀಪಾವಳಿಗೆ ಸಿಕ್ತು ಊಹಿಸಲಾರದ ಭರ್ಜರಿ ಗಿಫ್ಟ್; ಆಫೀಸ್ ಬಾಯ್ ಗು ಸೇರಿ ಉದ್ಯೋಗಿಗಳಿಗೆ ಬಂಪರ್ ಕಾರ್ ಗಿಫ್ಟ್

ದೇಶಡೆಲ್ಲೆಡೆ ದೀಪಾವಳಿ ಹಬ್ಬ(Diwali Festival) ಬಂತು ಅಂದ್ರೆ ಸಾಕು ಸರ್ಕಾರಿ ನೌಕರರು ಸೇರಿದಂತೆ ಇತರ ಖಾಸಗಿ ಕಂಪನಿಯ ನೌಕರರಿಗೆ ಎಲ್ಲಿಲ್ಲದ ಖುಷಿ. ಕಾರಣ ದೀಪಾವಳಿ ಗಿಫ್ಟ್, ಕಂಪನಿಯಿಂದ ಸಿಗುವ ಭರ್ಜರಿ ಬೋನಸ್ ಹಾಗೂ ಇನ್ನಿತರ ಸೌಲಭ್ಯಗಳು ಸಿಗೋದ್ರಿಂದ ನೌಕರರು ಒಂದು ರೀತಿ ಕಾತುರರಾಗಿರ್ತಾರೆ ಅನ್ನಬಹುದು. ಆದ್ರೆ ನೌಕರರು ಊಹಿಸಲು ಆಗದ ಮಟ್ಟಿಗೆ ಇಲ್ಲೊಂದು ಕಂಪನಿ ನೌಕರರಿಗೆ ಬೋನಸ್ ಕೊಟ್ಟಿದೆ. ಹೌದು ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲ ಕಂಪನಿಗಳಲ್ಲಿ ದೀಪಾವಳಿ ಬೋನಸ್‌ ಕುರಿತು ಚರ್ಚೆಯಾಗುತ್ತಿದೆ. ಇನ್ನು ಕಂಪನಿಗಳೂ ಸಹ ದೀಪಾವಳಿ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಬೋನಸ್‌ ಹಾಗೂ ಸ್ವೀಟ್‌ ಕೊಟ್ಟು ಅವರ ಹಬ್ಬದ ಖುಷಿ ಹೆಚ್ಚಿಸುತ್ತವೆ. ಆದರೆ, ಹರಿಯಾಣದಲ್ಲಿ ಫಾರ್ಮಾ ಕಂಪನಿ(Pharma Company) ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಟಾಟಾ ಪಂಚ್‌(Tata Punch) ಕಾರುಗಳನ್ನೇ ಉಡುಗೊರೆ ನೀಡುವ ಮೂಲಕ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

WhatsApp Group Join Now
Telegram Group Join Now

ಹೌದು, ಹರಿಯಾಣದ ಪಂಚ್‌ಕುಲ ಮೂಲದ ಮಿಟ್ಸ್‌ಕಾರ್ಟ್‌ ಎಂಬ ಫಾರ್ಮಾ ಕಂಪನಿಯ ಮಾಲೀಕ ಎಂ.ಕೆ. ಭಾಟಿಯಾ ಕಂಪನಿಯ 12 ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಟಾಟಾ ಪಂಚ್‌ ಕಾರುಗಳನ್ನು(Tata Punch Car) ನೀಡಿದ್ದಾರೆ. ಹೌದು ಎಂ.ಕೆ. ಭಾಟಿಯಾ ಅವರು ಕಂಪನಿ ಉದ್ಯೋಗಿಗಳಿಗೆ ಕಾರುಗಳ ಕೀ ಕೊಟ್ಟಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಅಲ್ಲದೆ, ಉದ್ಯೋಗಿಗಳಿಗೆ ಕಾರುಗಳನ್ನೇ ಗಿಫ್ಟ್‌ ಕೊಟ್ಟು ಹೃದಯ ವೈಶಾಲ್ಯ ಮೆರೆದ ಬಾಸ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಭಾಟಿಯಾ ತನ್ನ ಕಂಪನಿಯ ಉದ್ಯೋಗಿಗಳನ್ನು ಉದ್ಯೋಗಿ ಎಂದು ಕರೆಯುವ ಬದಲು ಸೆಲೆಬ್ರಿಟಿಗಳು ಮತ್ತು ಸ್ಟಾರ್‌ಗಳು ಎಂದು ಸಂಬೋಧಿಸುತ್ತಾರೆ. ದೀಪಾವಳಿ ಬೋನಸ್ ಅವರು ತಮ್ಮ ಕಂಪನಿಯ 12 ಸ್ಟಾರ್ ಸೆಲೆಬ್ರಿಟಿಗಳಿಗೆ ಟಾಟಾ ಪಂಚ್ ಕಾರ್ ಗಳನ್ನು ಉಡುಗೊರೆಯಾಗಿ ನೀಡಿದರು. ಶೀಘ್ರದಲ್ಲೇ ಇನ್ನೂ 38 ಉದ್ಯೋಗಿಗಳಿಗೆ ಕಾರ್ ಕೊಡುವ ಆಲೋಚನೆಯನ್ನು ಸಹ ಹೊಂದಿದ್ದಾರೆ. ಮಿಸ್ಟ್‌ ಕಾರ್ಟ್ ಫಾರ್ಮಾ ತನ್ನ ಉದ್ಯೋಗಿಗಳ ಪರಿಶ್ರಮದಿಂದ ಇಂದು ಈ ಹಂತಕ್ಕೆ ತಲುಪಿದೆ ಎಂದು ಭಾಟಿಯಾ ಹೇಳಿದ್ದಾರೆ. ಹೌದು ಕನಸಿನೊಂದಿಗೆ ಚಂಡೀಗಢಕ್ಕೆ ಬಂದಿದ್ದೇನೆ, ಈ ಕನಸು ನನಸಾಗುವಲ್ಲಿ ಈ ಉದ್ಯೋಗಿಗಳ ಪಾತ್ರ ದೊಡ್ಡದು. ಈ ಕಾರಣಕ್ಕಾಗಿ ಈ ದೀಪಾವಳಿಯಲ್ಲಿ ಉದ್ಯೋಗಿಗಳಿಗೆ ಅದ್ಭುತ ಉಡುಗೊರೆ ನೀಡಲು ನಿರ್ಧರಿಸಿ, ಕಾರ್ ಗಿಫ್ಟ್ ಮಾಡಿದ್ದೀನಿ.

ಇನ್ನು ಕೆಲ ಸಮಯದ ಹಿಂದೆ ಉದ್ಯೋಗಿಗಳಿಗೆ ಕಾರ್ ಕೊಡಿಸುವುದಾಗಿ ಹೇಳಿದ್ದೇ, ಈಗ ಆ ಭರವಸೆ ಈಡೇರಿಸಿದ್ದೇನೆ. ಅಲ್ದೇ ಕೆಲವು ವರ್ಷಗಳ ಹಿಂದೆ ನಾನು ಕಂಪನಿ ಆರಂಭಿಸಿದಾಗ ಅಷ್ಟೇನೂ ಲಾಭ ಇರಲಿಲ್ಲ. ಆದರೆ, ನಮ್ಮ ಕಂಪನಿಯ ಪರಿಶ್ರಮ ಹಾಗೂ ಬದ್ಧತೆಯಿಂದಾಗಿ ಇಂದು ಲಾಭದತ್ತ ಸಾಗುತ್ತಿದ್ದೇವೆ. ಹಾಗಾಗಿ, ಹೆಚ್ಚು ಶ್ರಮ ವಹಿಸಿದ, ಬದ್ಧತೆಯಿಂದ ಕೆಲಸ ಮಾಡಿದ 12 ನೌಕರರಿಗೆ ಟಾಟಾ ಪಂಚ್‌ ಕಾರುಗಳನ್ನು ಉಡುಗೊರೆ ನೀಡಿದ್ದೇವೆ. 12 ನೌಕರರಲ್ಲಿ ಕಂಪನಿಯ ಆಫೀಸ್‌ ಸಹಾಯಕ ಕೂಡ ಇದ್ದಾರೆ. ಮುಂದಿನ ದಿನಗಳಲ್ಲಿ 12 ಉದ್ಯೋಗಿಗಳಲ್ಲ 50 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡುವ ಯೋಜನೆ ಇದೆ ಅಂತ ಬಹಳ ಹರ್ಷ ವ್ಯಕ್ತಪಡಿಸಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹರಿಯಾಣದ ಫಾರ್ಮ ಕಂಪನಿಯ ನೌಕರರಿರಿಗೆ ಹಬ್ಬಕ್ಕೆ ಸ್ಪೆಷಲ್ ಉಡುಗೊರೆ

ಇನ್ನು ದೀಪಾವಳಿ ಉಡುಗೊರೆಯಾಗಿ ತಮ್ಮ 12 ಉದ್ಯೋಗಿಗಳಿಗೆ ಕಾರ್ ಗಳನ್ನು ನೀಡಿದ್ದು, ಶೀಘ್ರದಲ್ಲೇ ಇನ್ನೂ 38 ಉದ್ಯೋಗಿಗಳಿಗೆ ಕಾರುಗಳನ್ನು ನೀಡಲಾಗುವುದು ಅಂತಲೂ ಮಾಲೀಕ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಮಯದಲ್ಲಿ, ಈ ಅದ್ಭುತ ದೀಪಾವಳಿ ಉಡುಗೊರೆಯನ್ನು ಪಡೆದವರಲ್ಲಿ ಕಂಪನಿಯ ಆಫೀಸ್ ಬಾಯ್ ಕೂಡ ಇರೋದು ಮತ್ತೊಂದು ವಿಶೇಷ ಅಂತ ಹೇಳಬಹುದು. ಇನ್ನು ಮಿಟ್ಸ್ ಹೆಲ್ತ್ ಕೇರ್ ಎಂಬ ಕಂಪನಿಯ ಮಾಲೀಕರು ಇಂದು ಈ ಸ್ಥಾನಕ್ಕೆ ತಲುಪಲು ಈ ಉದ್ಯೋಗಿಗಳ ಪರಿಶ್ರಮವೇ ಕಾರಣ ಎನ್ನುತ್ತಾರೆ. ಮೊದಲಿನಿಂದಲೂ ಈ ನೌಕರರು ಜೊತೆಗಿದ್ದಾರೆ. ಅವರ ಶ್ರಮ, ಪ್ರಾಮಾಣಿಕತೆ ಮತ್ತು ನಂಬಿಕೆಗೆ ಸಿಕ್ಕ ಪ್ರತಿಫಲವೇ ಈ ಕಾರ್ ಎಂದಿದ್ದಾರೆ. ಆದ್ರೆ ಇದರಲ್ಲಿ ಮತ್ತೊಂದು ಕುತೂಹಲ ಏನಪ್ಪಾ ಕೆಲವರಿಗೆ ವಾಹನ ಚಲಾಯಿಸುವುದೂ ಗೊತ್ತಿಲ್ಲ. ಇನ್ನು ಕೆಲವು ಉದ್ಯೋಗಿಗಳಿಗೆ ಕಾರ್ ಓಡಿಸಲು ಸಹ ತಿಳಿದಿಲ್ಲ. ಕಂಪನಿಯವರು ಕಾರ್ ಅನ್ನು ಉಡುಗೊರೆಯಾಗಿ ಕೊಡುತ್ತಾರೆಂದು ಯಾರೂ ಕನಸಿನಲ್ಲೂ ಊಹಿಸಿರಲಿಲ್ಲ.

ಈ ಉಡುಗೊರೆಯನ್ನು ಸ್ವೀಕರಿಸಿದ ಅವರ ಉದ್ಯೋಗಿಗಳು ಆಶ್ಚರ್ಯಚಕಿತರಾದರು. ಜೊತೆಗೆ ಕಂಪನಿಯು ಆಫೀಸ್ ಬಾಯ್ ಮೋಹಿತ್‌ಗೆ ಕಾರನ್ನು ಉಡುಗೊರೆಯಾಗಿ ನೀಡಿದೆ. ಮೋಹಿತ್ ಮೊದಲಿನಿಂದಲೂ ಕಂಪನಿಯಲ್ಲಿದ್ದಾರೆ ಮತ್ತು ಸಂಪೂರ್ಣ ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಭಾಟಿಯಾ ಹೇಳುತ್ತಾರೆ. ಇನ್ನು ಟಾಟಾ ಪಂಚ್‌ನ ಕಾರುಗಳ ಬೆಲೆಯು 6 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಒಟ್ಟಿನಲ್ಲಿ ಕಂಪನಿ ಬಾಸ್‌ಗಳು ಎಂದರೆ ಯಾವಾಗಲೂ ಸಿಡುಕು ಮೂತಿಯವರು, ಉದ್ಯೋಗಿಗಳಿಗೆ ಹಚ್ಚಿನ ಕೆಲಸ ನೀಡಿ, ತಾವು ಚೆನ್ನಾಗಿ ಇರುವವರು, ಹೆಚ್ಚು ಸಂಬಳ ನೀಡದೆ, ವೇತನ ಹೆಚ್ಚಿಸದೆ ಲಾಭವನ್ನಷ್ಟೇ ನೋಡುವವರು ಎಂಬ ಬೇಸರದ ಮಾತುಗಳು ಕೇಳಿಬರುವ ಸಂದರ್ಭದಲ್ಲಿ ಹರಿಯಾಣದ ಕಂಪನಿ ಚೇರ್ಮನ್‌ ಎಂ.ಕೆ. ಭಾಟಿಯಾ ಅವರು ಉದ್ಯೋಗಿಗಳಿಗೆ ಕಾರುಗಳನ್ನೇ ಉಡುಗೊರೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅನುಮತಿ ಆರಂಭ; ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಕೆ.ಎಚ್ ಮುನಿಯಪ್ಪ

ಇದನ್ನೂ ಓದಿ: ಹೊಸ ಐಷಾರಾಮಿ ವಿನ್ಯಾಸದೊಂದಿಗೆ ಹೊಸ ಸ್ಕೊಡಾ, ಹಲವು ವೈಶಿಷ್ಟ್ಯಗಳ ಇಂಜಿನ್ ನೊಂದಿಗೆ ಮಾರುಕಟ್ಟೆಯಲ್ಲಿ ಮಿನುಗಲಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram