ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ..

Haveri Anganwadi Recruitment 2024

ಹಾವೇರಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಕಾರ್ಯಕರ್ತೆಯ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಆನ್ಲೈನ್ ಅಪ್ಲಿಕೇಶನ್(online apllication) ಬಿಡುಗಡೆ ಮಾಡಿದೆ. ಹತ್ತನೇ ತರಗತಿ(sslc ) ಪೂರ್ಣಗೊಳಿಸಿದ ಮಹಿಳೆಯರು ಈ ಹುದ್ದೆಗೆ ಅರ್ಹರಾಗಿರುತ್ತಾರೆ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಅಧ್ಯಯನ ಮಾಡಿರಬೇಕು. ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಿರಿ. 

WhatsApp Group Join Now
Telegram Group Join Now

ಖಾಲಿ ಇರುವ ಜಾಬ್ ಗಳ ಅಂಕಿಅಂಶ :- ಹಾವೇರಿ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆ ಖಾಲಿ ಇದೆ. ಈಗ ಒಟ್ಟು 152 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. 39 ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಹಾಗೂ 113 ಅಂಗನವಾಡಿ ಸಹಾಯಕಿ ಹುದ್ದೆಗೆ ಇಲಾಖೆಯು ಅರ್ಜಿ ಆಹ್ವಾನ ಮಾಡಿದೆ.

ಕೆಲಸ ಮಾಡಬೇಕಾದ ಸ್ಥಳಗಳು(work places):- ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಳ್ಳಿಗಳಲ್ಲಿ ಹುದ್ದೆ ಖಾಲಿ ಇದೆ. ಶಿಗ್ಗಾಂ, ಹಾನಗಲ್, ಹಾವೇರಿ, ಬ್ಯಾಡಗಿ, ಹಿರೇಕೆರೂರು, ರಾಣೇಬೆನ್ನೂರು, ಸವನೂರು ಈ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ (education qualification):- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಮೇಲೆ ತಿಳಿಸಿದಂತೆ ಹತ್ತನೇ ತರಗತಿಯನ್ನು(SSLC)ಕನ್ನಡ ಮಾಧ್ಯಮದಲ್ಲಿ ಅಥವಾ ಪ್ರಥಮ ಭಾಷೆ ಕನ್ನಡದಲ್ಲಿ ಪೂರ್ಣಗೊಳಿಸಿರಬೇಕು. ಹಾಗೆಯೇ ಸಹಾಯಕಿ ಹುದ್ದೆಗೆ ಸಹ ಹತ್ತನೇ ತರಗತಿ(sslc)ಪೂರ್ಣಗೊಳಿಸಿರಬೇಕು. 

ವಯಸ್ಸಿನ ಮಿತಿ (age limitation):- ಇಲಾಖೆಯ ನಿಯಮದ ಪ್ರಕಾರ ಅರ್ಜಿ ಸಲ್ಲಿಸಲು ಅರ್ಜಿದಾರರ ವಾಯ್ಯಸಿನ ಮಿತಿ 19ರಿಂದ 39 ವರ್ಷ ಆಗಿದೆ. ಹಾಗೆಯೇ ವಿಕಲಚೇತನ ಹೆಣ್ಣುಮಕ್ಕಳಿಗೆ 10 ವರ್ಷಗಳ ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಫೀ(fee) ವಿವರ :- ಈ ಜಾಬ್ ಗೆ ಅಪ್ಲೈ ಮಾಡಲು ನೀವು ಯಾವುದೇ ರೀತಿಯ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ.

ಅಪ್ಲಿಕೇಶನ್ ಹಾಕುವ ವಿಧಾನ:-

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ತೆರಳಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.
  • ನಿಮಗೆ ಜಿಲ್ಲೆಯ ಉದ್ಯೋಗದ ಅರ್ಜಿಯು ದೊರೆಯುತ್ತದೆ.
  • ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಆಧಾರ್ ಸಂಖ್ಯೆ, ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಫಿಲ್ ಮಾಡಿ.
  • ನಂತರ ನಿಮ್ಮ ಅಂಕಪಟ್ಟಿಯನ್ನು ಸ್ಕ್ಯಾನ್ ಮಾಡಿ ಹಾಕಿ.
  • ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ ಹಾಕಿ.
  • ಫಾರ್ಮ್ ಫುಲ್ ಮಾಡಿದ ನಂತರ ಅಪ್ಲೈ ಬಟನ್ ಒತ್ತಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗಿರುವ ಡಾಕ್ಯುಮೆಂಟ್ಸ್ ವಿವರ:-

  • S.S.L.C ಮಾರ್ಕ್ಸ್ ಕಾರ್ಡ್.
  • ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದಾರೆ ಅದರ ಮಾರ್ಕ್ಸ್ ಕಾರ್ಡ್.
  • ಆಧಾರ್ ಕಾರ್ಡ್ ಜೆರಾಕ್ಸ್.
  • ಜಾತಿ ಪ್ರಮಾಣ ಪತ್ರ.
  • ವಿಧವೆ ಮಹಿಳೆ ಆಗಿದ್ದರೆ ಪತಿಯ ಡೆತ್ ಸರ್ಟಿಫಿಕೇಟ್.
  • ಡೈವೋರ್ಸ್ ಆದ ಮಹಿಳೆ ಆಗಿದ್ದಲ್ಲಿ ಅದರ ಬಗ್ಗೆ ಸರಿಯಾದ ದಾಖಲೆ.
  • ಮೊಬೈಲ್ ಸಂಖ್ಯೆ.

ಅಪ್ಲಿಕೇಶನ್ ಓಪನ್ ಆದ ದಿನಾಂಕ ಮತ್ತು ಕೊನೆಯ ದಿನಾಂಕ :- ಜನವರಿ 16 2024 ರಿಂದ ಫೆಬ್ರುವರಿ 15 2024 ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ; ಖಾಲಿ ಇವೆ 1,500 ಹುದ್ದೆಗಳು

ಇದನ್ನೂ ಓದಿ: ಮಹಿಳಾ ರೈತರಿಗೆ ಬಂಪರ್ ಗಿಫ್ಟ್; ಪಿ.ಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಹಣ ಡಬಲ್..