2023 ರಲ್ಲಿ ರಾಜ್ಯಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ನಮ್ಮನು ಗೆಲ್ಲಿಸಿ ಎಂದು ಹೇಳಿತ್ತು. ಇದರಂತೆಯೇ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲಿಯೇ ಅವರು ತಾವು ಹೇಳಿದಂತೆಯೇ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದರು. ಮುಂಬರುವ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವ ಎಲ್ಲ ಪಕ್ಷಗಳೂ ತಮ್ಮದೇ ರೀತಿಯಲ್ಲಿ ಜನರನ್ನು ಸೆಳೆಯುವ ತಂತ್ರ ಮಾಡುತ್ತಲಿವೆ.
ಶಾಸಕ ಬಾಲಕೃಷ್ಣ ಅವರ ಹೇಳಿಕೆ ಏನು?
ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಶಾಸಕ ಏಚ್.ಸಿ. ಬಾಲಕೃಷ್ಣ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಮತ ನೀಡಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕು. ಇಲ್ಲವಾದರೆ ನಿಮಗೆ ನೀಡಿರುವ 5 ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವ ಸಾಧ್ಯತೆಗಳು ಇವೆ. ರಾಜ್ಯದ ಒಳಿತಿಗಾಗಿ 5 ಗ್ಯಾರೆಂಟಿ ಯೋಜನೆಗಳನ್ನು ಕಾಂಗ್ರೆಸ್ ಜಾರಿಮಾಡಿದೆ. ನೀವು ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ಹಾಕದೇ ಇದ್ದಲ್ಲಿ ನೀವು ಗ್ಯಾರೆಂಟಿ ಯೋಜನೆಯನ್ನು ಒಪ್ಪಲಿಲ್ಲ ಎಂಬ ಅರ್ಥ ಬರುತ್ತದೆ. ಆದರಿಂದ ನಾವು ಈ ಯೋಜನೆಯನ್ನು ವಾಪಸ್ ಪಡೆಯುವ ಸಂಭವ ಇದೆ ಎಂದು ಹೇಳಿದರು.
ಇವರ ಹೇಳಿಕೆಯು ಈಗ ಹಲವರು ಚರ್ಚೆಗಳಿಗೆ ಕಾರಣವಾಗಿದೆ. ಕೆಲವರು ಇವರ ಹೇಳಿಕೆಯ ಪರವಾಗಿ ಇದು ಸರಿಯಾಗಿದೆ ಎಂದು ಹೇಳಿದರೆ , ಹಲವಾರು ಜನರು ಬಾಲಕೃಷ್ಣ ಅವರ ಹೇಳಿಕೆಗೆ ನಮಗೆ ಇದರ ಅರಿವು ಮುಂಚೆನೇ ಇದೆ. ನೀವು ಅಧಿಕಾರಕ್ಕೆ ಬರಲಿ ಬಾರದೆ ಇರಲಿ ಗ್ಯಾರೆಂಟಿ ಯೋಜನೆ ಲೋಕಸಭಾ ಚುನಾವಣೆಯ ನಂತರ ಬಂದ್ ಆಗುತ್ತವೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಜನರಿಗೆ ನೀಡಿದ 5 ಗ್ಯಾರೆಂಟಿ ಯೋಜನೆಗಳು
ಶಕ್ತಿ ಯೋಜನೆ:- ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಹೋಗಬೇಕು ಎಂದರು ಬಸ್ ಟಿಕೆಟ್ ದರವು ಝೀರೋ ಆಗಿರುತ್ತದೆ. ನಿಮ್ಮ ಆಧಾರ್ ಕಾರ್ಡ್ ಅಥವಾ ವಿಳಾಸ ಇರುವ ಯಾವುದೇ ಐಡಿ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡಬಹುದು. ಈಗಾಗಲೇ ಪ್ರತಿ ದಿನ ಲಕ್ಷಾಂತರ ಹೆಣ್ಣು ಮಕ್ಕಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಅನ್ನಭಾಗ್ಯ :- ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆ ಇದಾಗಿದ್ದು, ಅಕ್ಕಿಯ ಅಭಾವದ ಕಾರಣ 5 ಕೆ. ಜಿ ಕೇಂದ್ರ ನೀಡುವ ಅಕ್ಕಿಯ ಜೊತೆಗೆ 5 ಕೆ ಜಿ ಅಕ್ಕಿಯ ಹಣವನ್ನು ಯಜಮಾನನ/ಯಜಮಾನಿಯ ಖಾತೆಗೆ ವರ್ಗಾವಣೆ ಮಾಡುತ್ತಾ ಇದ್ದಾರೆ.
ಗೃಹ ಲಕ್ಷ್ಮಿ:- ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಹೆಣ್ಣು ಮಗಳಿಗೆ ಪ್ರತಿ ತಿಂಗಳು 2,000 ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತಾ ಇದ್ದರೆ. ಇದು ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಸಹಾಯವಾಗಲಿದೆ ಎಂದು ಸರ್ಕಾರದ ಅಭಿಪ್ರಾಯ. ಈಗಾಗಲೇ ರಾಜ್ಯದ 60% ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಕೆಲವು ತಾಂತ್ರಿಕ ದೋಷಗಳಿಂದ ಕೆಲವರಿಗೆ ಹಣ ವರ್ಗಾವಣೆ ಆಗಲಿಲ್ಲ.
ಗೃಹಜ್ಯೋತಿ:- ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ಕರೆಂಟ್ ಫ್ರೀ ಕೊಡುವುದಾಗಿ ಚುನಾವಣೆಗೂ ಮೊದಲು ಘೋಷಣೆ ಮಾಡಿತ್ತು. ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಹಿಂದೆ ಬಳಸುವ ಯೂನಿಟ್ ಕಿಂತ 10 ಯೂನಿಟ್ ಹೆಚ್ಚಿನ ಕರೆಂಟ್ ಬಳಕೆಗೆ ಸರ್ಕಾರ ಹಣ ನೀಡುತ್ತದೆ. ಉಳಿದ ಯೂನಿಟ್ ಹಣವನ್ನು ಪಾವತಿಸಬೇಕು ಎಂಬ ನಿಯಮ ಜಾರಿ ಮಾಡಿತು.
ಯುವನಿಧಿ :- ನಿರುದ್ಯೋಗ ಸಂಖ್ಯೆ ಕಡಿಮೆ ಮಾಡಬೇಕು ಎಂಬ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಸಹಾಯವಾಗಲೆಂದು ಡಿಗ್ರೀ ಪಾಸ್ ಆದವರಿಗೆ 3,000 ಹಾಗೂ ಡಿಪ್ಲೊಮಾ ಪಾಸ್ ಆದವರಿಗೆ 1,500 ರೂಪಾಯಿಗಳನ್ನು ಸರ್ಕಾರ ನೀಡುತ್ತದೆ. ಇದು ಕೊನೆಯದಾಗಿ ಜಾರಿ ಆದ ಯೋಜನೆ ಆಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: 6 ಲಕ್ಷದ ಘಟಕದೊಂದಿಗೆ ನೆಕ್ಸನ್ ಹೊಸ ವೈಶಿಷ್ಟ್ಯಗಳನ್ನು ಕೇಳಿದರೆ ಆಶ್ಚರ್ಯಗೊಳ್ಳುತ್ತೀರ!