ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಏಷ್ಟು ಉಪಯೋಗ?

Health Benefits Of Blood Donation

ರಕ್ತದಾನ ಮಾಡುವಾಗ ಹಲವರಿಗೆ ಭಯ ಇರುತ್ತದೆ. ನಾನು ಈಗ ರಕ್ತ ನೀಡಿದರೆ ನನಗೆ ಏನಾದರೂ ಆಗಬಹುದೇ ಅಥವಾ ಯಾವುದೇ ರೀತಿಯ ರೋಗಗಳು ಬರಬಹುದೇ? ಅಥವಾ ನನ್ನ ದೇಹದಲ್ಲಿ ರಕ್ತ ಕಡಿಮೆ ಆಗುವುದೇ ಎಂಬೆಲ್ಲ ಪ್ರಶ್ನೆ ಉಂಟಾಗುತ್ತದೆ. ಆದರೆ ನೀವು ರಕ್ತವನ್ನು ನೀಡುವುದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಪರಿಣಾಮ ಆಗುತ್ತದೆ. ಹಲವು ರೋಗಗಳನ್ನು ತಡೆಯಲು ರಕ್ತದಾನ ಸಹಾಯಕವಾಗಿದೆ. ರಕ್ತ ನೀಡಿ ಇನ್ನೊಬ್ಬರ ಪ್ರಾಣವನ್ನು ಉಳಿಸುವ ಜೊತೆ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತದಾನ ಮಾಡಬೇಕು. ಹಾಗಾದರೆ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಏನೇನು ಉಪಯೋಗ ಆಗಲಿದೆ ಎಂಬುದನ್ನು ತಿಳಿಯೋಣ.

WhatsApp Group Join Now
Telegram Group Join Now

ರಕ್ತದಾನ ಏಕೆ ಮಾಡಬೇಕು?: ರಕ್ತದಾನದಿಂದ ಇನ್ನೊಂದು ಜೀವ ಉಳಿಸಲು ಸಾಧ್ಯ.. ಅಪಘಾತ, ಶಸ್ತ್ರಚಿಕಿತ್ಸೆ, ಪ್ರಸವ, ಕ್ಯಾನ್ಸರ್ ಚಿಕಿತ್ಸೆ, ರಕ್ತಹೀನತೆ ಮುಂತಾದವುಗಳ ರಕ್ತದ ಪ್ರಮಾಣ ಕಡಿಮೆ ಆಗುತ್ತದೆ ಅಂತಹ ಸಮಯದಲ್ಲಿ ಬೇರೆಯವರ ರಕ್ತ ನೀಡಿ ಜೀವಿಯ ಪ್ರಾಣ ಉಳಿಸಲು ವೈದ್ಯರು ಬೇರೆಯವರ ಪ್ರಾಣ ಉಳಿಸುತ್ತಾರೆ. ಇದರ ಜೊತೆ ನಮ್ಮ ದೇಹದ ಆರೋಗ್ಯಕ್ಕೂ ರಕ್ತದಾನ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಏನೇನು ಲಾಭ ಇದೆ?

  • ಹೃದ್ರೋಗದ ಅಪಾಯ ಕಡಿಮೆ: ರಕ್ತದಾನ ಮಾಡುವುದರಿಂದ ನಮ್ಮ ಹೃದಯದ ಮೇಲೆ ಒತ್ತಡ ಕಡಿಮೆಯಾಗಿ ಹೃದಯ ಸಂಬಂಧಿ ಖಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಇದರಿಂದ ಹೃದಯ ಬಡಿತ ಆರಾಮದಾಯಕವಾಗಿ ಆಗುತ್ತದೆ.
  • ಕ್ಯಾನ್ಸರ್ ಅಪಾಯ ಕಡಿಮೆ: ರಕ್ತದಾನದಿಂದ ಕ್ಯಾನ್ಸರ್ ಅಂತಹ ರೋಗವನ್ನು ಬರದಂತೆ ನಿಯಂತ್ರಿಸಬಹುದಾಗಿದೆ.
  • ಮಧುಮೇಹದ ಅಪಾಯ ಕಡಿಮೆ: ರಕ್ತದಾನದಿಂದ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಇದರಿಂದ ಸಕ್ಕರೆ ಕಾಯಿಲೆಯ ನಿಯಂತ್ರಣ ಮಾಡಲು ಸಾಧ್ಯ.
  • ನಿಯಂತ್ರಣ: ರಕ್ತದಾನದಿಂದ ದೇಹದ ರಕ್ತದ ಹರಿವು ಸುಧಾರಿಸುತ್ತದೆ. ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು: ರಕ್ತದಾನದಿಂದ ಇದರಿಂದ ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ.
  • ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು: ರಕ್ತದಾನ ಮಾಡುವುದರಿಂದ ಒಳ್ಳೆಯ ಭಾವನೆ ಮೂಡುತ್ತದೆ. ಹಾಗೂ ದೇಹದಲ್ಲಿ ಹೊಸ ರಕ್ತ ಕಣಗಳ ಪ್ರಭಾವದಿಂದ ನಿಮ್ಮ ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. .
  • ತೂಕ ನಿಯಂತ್ರಣ: ರಕ್ತದಾನದಿಂದ ದೇಹದಲ್ಲಿ ಶಕ್ತಿಯ ವ್ಯಯವಾಗುತ್ತದೆ. ಇದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ಬೊಜ್ಜು ಮೈ ಉಂಟಾಗುವುದಿಲ್ಲ. ರಕ್ತದಾನ ಮಾಡುವುದು ದೇಹದ ತೂಕ ಕಡಿಮೆ ಮಾಡಲು ಬಯಸುವ ಜನರಿಗೆ ಉತ್ತಮ ಮಾರ್ಗವಾಗಿದೆ. ಇದರಿಂದ ಇನ್ನೊಂದು ಜೀವದ ಉಳಿವಿನ ಜೊತೆಗೆ ನಿಮ್ಮ ದೇಹದ ಕೆಟ್ಟ ಬೊಜ್ಜನ್ನು ಕರಗಿಸಲು ಸಾಧ್ಯವಿದೆ.

ಇದನ್ನೂ ಓದಿ: CNG SUV ಗಳು: ನಿಮ್ಮ ಮುಂದಿನ ಕಾರು ಖರೀದಿಗೆ ಉತ್ತಮ ಆಯ್ಕೆಯಾಗಿದೆ!

ರಕ್ತದಾನ ಮಾಡಲು ಕೆಲವು ಅರ್ಹತೆಗಳು ಇವೆ:

  1. ರಕ್ತದಾನ ಮಾಡಲು ಬಯಸುವ ವ್ಯಕ್ತಿಗಳಿಗೆ 18-65 ವರ್ಷ ವಯಸ್ಸಾಗಿರಬೇಕು.
  2. ರಕ್ತದಾನಿಗಳ ತೂಕ 50 ಕೆಜಿಗಿಂತ ಹೆಚ್ಚಿರಬೇಕು.
  3. ರಕ್ತದಾನಿಗಳ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದರೆ ನೀವು ರಕ್ತದಾನ ಮಾಡಬಾರದು.
  4. ರಕ್ತದಾನ ಮಾಡುವವರಿಗೆ ಯಾವುದೇ ರೀತಿಯ ಗಂಭೀರ ಕಾಯಿಲೆಗಳು ಇರಬಾರದು.
  5. ಗರ್ಭಿಣಿ ಸ್ತ್ರೀಯರು, ಯಾವುದೇ ಅಪಘಾತದಿಂದ ಗಾಯಗೊಂಡ ವ್ಯಕ್ತಿಗಳಿಗೆ ರಕ್ತದಾನ ಮಾಡಬಾರದು.

ರಕ್ತದಾನ ಮಾಡುವ ಮುನ್ನ ನಿಮ್ಮ ರಕ್ತದ ಗುಂಪು ಮತ್ತು ನಿಮ್ಮ ಆರೋಗ್ಯ ತಪಾಸಣೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ರಕ್ತದಾನ ಮಾಡುವುದು ತುಂಬಾ ಸುರಕ್ಷಿತವಾದ ಪ್ರಕ್ರಿಯೆ. ರಕ್ತದಾನ ಮಾಡುವಾಗ ಯಾವುದೇ ನೋವು ಇರುವುದಿಲ್ಲ. ರಕ್ತದಾನದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.

ಇದನ್ನೂ ಓದಿ: ನಿಮ್ಮ ಸಿಬಿಲ್ ಸ್ಕೋರ್ ಹಾಳಾಗಿದ್ದರೆ ಕೆಲವೇ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದು, ಈ ಸಲಹೆಗಳನ್ನು ತಪ್ಪದೇ ಪಾಲಿಸಿ