Helicopter Rent: ರಾಜಕೀಯ ನಾಯಕರು ಬಳಸುವ ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು? ಹೆಲಿಪ್ಯಾಡ್ ಬಾಡಿಗೆ ಹೇಗಿರುತ್ತೆ? ಪೈಲೇಟ್ ಗೆ ನೀಡಬೇಕಾದ ಸೌಲಭ್ಯ ಏನ್ ಗೊತ್ತಾ?

Helicopter Rent: ರಾಜ್ಯ ವಿಧಾನ ಚುನಾವಣೆಯ ಅಬ್ಬರ ಜೋರಾಗಿದ್ದು. ಚುನಾವಣಾ ಕಣದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಸ್ಟಾರ್‌ ಪ್ರಚಾರಕರ ಪ್ರಚಾರ ಗೀಳು ಹೆಚ್ಚಾಗಿದ್ದು ಎಲ್ಲಾ ಪಕ್ಷದವರು ಕೂಡ ತಮ್ಮ ತಮ್ಮ ಪಕ್ಷಗಳ ರಾಷ್ಟ್ರೀಯ ನಾಯಕರನ್ನ, ಸ್ಟಾರ್ ನಟ ನಟಿಯರನ್ನ ಕರೆಸಿ ಮಾಡೋ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಇದರ ಜೊತೆಗೆ ಹೆಲಿಕಾಪ್ಟರ್‌ ಹಾಗೂ ಚಾರ್ಟೆಡ್‌ ಫ್ಲೈಟ್‌ಗಳ ಆರ್ಭಟವೂ ಹೆಚ್ಚಾಗಿದೆ. ರಾಜ್ಯದ ಮುಂಚೂಣಿ ನಾಯಕರ ಜತೆಗೆ ಪ್ರಚಾರಕ್ಕೆ ರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ತಾರಾ ಪ್ರಚಾರಕರು ಆಗಮಿಸಿದ್ದು, ಹೆಲಿಕಾಪ್ಟರ್‌ಗಳಿಗೆ ಹಿಂದೆಂದೂ ಕಾಣದಷ್ಟು ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಆಪರೇಟರ್‌ಗಳು ಹೈದರಾಬಾದ್‌, ಕೊಚ್ಚಿ ಸೇರಿ ದೇಶದ ನಾನಾ ಭಾಗಗಳಿಂದ ಹೆಚ್ಚುವರಿ ಹೆಲಿಕಾಪ್ಟರ್‌ಗಳನ್ನು ತರಿಸಿಕೊಂಡಿದ್ದು, ಎಲ್ಲೆಡೆ ಇದೀಗ ಬಾಡಿಗೆ ತೆಗೆದುಕೊಳ್ಳುವ ಪರಿಪಾಟಾಳು ಹೆಚ್ಚಾಗುತ್ತಿದೆ. ಹಾಗಾದ್ರೆ ಚುನಾವಣೆ ಪ್ರಚಾರಕ್ಕೆ ಅಂತಾನೆ ಕರೆಸಿಕೊಳ್ಳುವ ಹೆಲಿಕ್ಯಾಪ್ಟರ್ ಗಳ ಬಾಡಿಗೆಯನ್ನ ಯಾವ ಲೆಕ್ಕದಲ್ಲಿ ಕೊಡಬೇಕು ಇದನ್ನ ಭರಿಸುವವರು ಯಾರು ಇದೆಲ್ಲವನ್ನ ತಿಳಿಸಿಕೊಡುತ್ತೀನಿ ಬನ್ನಿ.

WhatsApp Group Join Now
Telegram Group Join Now

ಹೌದು ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ರೋಡ್‌ ಶೋ, ಸಮಾವೇಶಗಳು ಫೆಬ್ರವರಿ ತಿಂಗಳಿಂದಲೇ ಶುರುವಾಗಿದ್ದು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪ್ರಚಾರದ ಗೀಳು ಹೆಚ್ಚಿಗೆ ಯಾಗಿದ್ದು, ರಾಷ್ಟ್ರ ರಾಜ್ಯ ನಾಯಕರನ್ನ ಕರೆಸೋದು, ಸ್ಟಾರ್ ನಟ ನಟಿಯರನ್ನ ಪ್ರಚಾರದಲ್ಲಿ ಬಳಸಿಕೊಳ್ಳೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಸಮಯದ ಉಳಿತಾಯಕ್ಕಾಗಿ, ಕೆಲವೊಮ್ಮೆ ಸಮಯದ ಅಭಾವವಿದ್ದಾಗ ಹೆಲಿಕಾಪ್ಟರ್‌ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ. ಇನ್ನು ಈಗಾಗ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು ಬೆರಳೆಣಿಕೆಯ ದಿನಗಳಷ್ಟೇ ಇರೋದ್ರಿಂದ ರಾಜಕೀಯ ನಾಯಕರು ಒಂದೇ ದಿನ ಮೂರ್ನಾಲ್ಕು ಜಿಲ್ಲೆಗಳನ್ನು ಸುತ್ತಿ, ಪ್ರಚಾರ ಮಾಡಬೇಕಾಗಿರುವ ಹಿನ್ನಲೆ ಹೆಚ್ಚಿನವರು ಹೆಲಿಕಾಪ್ಟರ್‌ಗಳನ್ನೇ ಅವಲಂಬಿಸಿದ್ದಾರೆ. ಅಲ್ದೇ ಕಾಂಗ್ರೆಸ್‌ ಮತ್ತು ಬಿಜೆಪಿಯ ತಾರಾ ಪ್ರಚಾರಕರ ಆಗಮನದಿಂದಾಗಿ ಚಾರ್ಟೆಡ್‌ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಗಣ್ಯರ ಪ್ರವಾಸ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಲಾಗಿದೆ. ಬಿಜೆಪಿಯಲ್ಲಿ ಪ್ರತ್ಯೇಕ ತಂಡವೊಂದಕ್ಕೆ ಈ ಜವಾಬ್ದಾರಿ ನೀಡಲಾಗಿದ್ದು, ಕಾಂಗ್ರೆಸ್‌ನಲ್ಲಿ ಶಿಷ್ಟಾಚಾರ ವಿಭಾಗ ಈ ಜವಾಬ್ದಾರಿ ನಿರ್ವಹಿಸುತ್ತದೆ. ಜೆಡಿಎಸ್‌ನಲ್ಲೂ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಹೆಲಿಕಾಪ್ಟರ್‌ ಮತ್ತು ಚಾರ್ಟೆಡ್‌ ಫ್ಲೈಟ್‌ಗಳ ವೆಚ್ಚದ ಮೇಲೂ ಚುನಾವಣಾ ಆಯೋಗ ನಿಗಾ ವಹಿಸಿರುವ ಹಿನ್ನೆಲೆಯಲ್ಲಿ ಆಯಾ ಪಕ್ಷಗಳ ಮೂಲಕವೇ ಕಾಯ್ದಿರಿಸಲಾಗುತ್ತಿದೆ.

ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸೋಶಿಯಲ್ ಮಿಡಿಯಾ ಸ್ಟಾರ್! ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿಯಾದ ಶಶಿರೇಖಾ

ಯಾವ ಪಕ್ಷದವರು ಎಷ್ಟು ಹೆಲಿಕ್ಯಾಪ್ಟರ್ ಬಳಸುತ್ತಾರೆ?

ರಾಜ್ಯದಲ್ಲಿ ಕೆ.ಜೆ.ಜಾರ್ಜ್‌, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಸತೀಶ್‌ ಜಾರಕಿಹೊಳಿ, ರಘು ಆಚಾರ್‌, ಆನಂದ್‌ ಸಿಂಗ್‌ ಸೇರಿ ಇನ್ನು ಹಲವು ನಾಯಕರು ಸ್ವಂತ ಹೆಲಿಕಾಪ್ಟರ್‌ ಹೊಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಹೆಚ್ಚಿನ ಪ್ರಮಾಣದಲ್ಲಿ ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು 100 ಕಿ.ಮೀ.ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಹೆಲಿಕಾಪ್ಟರ್‌ ಅವಲಂಬಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳ ತಾರಾ ಪ್ರಚಾರಕರಿಗೆ ಆಯಾ ಪಕ್ಷಗಳ ಕಡೆಯಿಂದಲೇ ಹೆಲಿಕಾಪ್ಟರ್‌ ವ್ಯವಸ್ಥೆ ಆಗುತ್ತಿದೆ. ಸದ್ಯ ನಾಲ್ಕು ಮತ್ತು ಆರು ಆಸನಗಳ ಹೆಲಿಕಾಪ್ಟರ್‌ಗಳು ಹಾಗೂ ಎಂಟು ಸೀಟುಗಳ ವಿಶೇಷ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೌದು ರಾಜ್ಯದ ನಾನಾ ಭಾಗಗಳಲ್ಲಿ ಪಕ್ಷದ ಚುನಾವಣಾ ಸಭೆ, ಸಮಾವೇಶಗಳಿಗೆ ನಾಯಕರು ತಮ್ಮೊಟ್ಟಿಗೆ ಪ್ರಮುಖರನ್ನು ಕರೆದುಕೊಂಡು ಹೋಗುತ್ತಾರೆ. ಹೀಗಾಗಿ 8 ಸೀಟುಗಳ ವಿಶೇಷ ವಿಮಾನಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ.

ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು? ಹೆಲಿಪ್ಯಾಡ್ ಬಾಡಿಗೆ ಹೇಗಿರುತ್ತೆ?

ಚುನಾವಣಾ ಪ್ರಚಾರ ಹಿನ್ನೆಲೆ ಈಗಾಗ್ಲೇ 150ಹೆಲಿಕ್ಯಾಪ್ಟರ್ ಹಾಗೂ ಕೆಲವೊಂದಿಷ್ಟು ಮಿನಿ ವಿಮಾನಗಳನ್ನ ಬುಕ್ ಮಾಡಿ ರಾಜ್ಯಕ್ಕೆ ತರಲಾಗಿದೆ. ವಿಮಾನಗಳನ್ನ ಕೆಲವೊಂದಿಷ್ಟು ರಾಜಕೀಯ ನಾಯಕರು ಬುಕ್ ಮಾಡಿಕೊಂಡಿದ್ದು, ಗಂಟೆ, ದಿನ ಹಾಗೂ ವಾರದ ಲೆಕ್ಕದಲ್ಲಿ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಇನ್ನು ಹೆಲಿಕ್ಯಾಪ್ಟರ್ ಗಳ ಬಾಡಿಗೆ ಅವುಗಳ ಎಂಜಿನ್ ಮತ್ತು ಸೀಟಿಂಗ್ ಕ್ಯಾಪಾಸಿಟಿ ಮೇಲೆ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಹೆಲಿಕ್ಯಾಪ್ಟರ್ ನಿರ್ವಹಣ ಸಂಸ್ಥೆಗಳು ಬಾಡಿಗೆಯನ್ನ ನಿರ್ಧಾರ ಮಾಡುತ್ತವೆ. ಹೌದು ಒಂದು ಗಂಟೆಗೆ 2ಲಕ್ಷದ 10ಸಾವಿರದಿಂದ 2ಲಕ್ಷದ 30ಸಾವಿರದವರೆಗೂ ಬಾಡಿಗೆ ಇದೆ. ಇನ್ನು ಒಂದು ದಿನಕ್ಕೆ ಸಿಂಗಲ್ ಎಂಜಿನ್ ಹೆಲಿಕ್ಯಾಪ್ಟರ್ ಗೆ 7ಲಕ್ಷ ರೂಪಾಯಿ, ಡಬ್ಬಲ್ ಎಂಜಿನ್ ಹೆಲಿಕ್ಯಾಪ್ಟರ್ ಗೆ 10ಲಕ್ಷದ ವರೆಗೂ ಬಾಡಿಗೆ ಕೊಡಬೇಕಾಗುತ್ತೆ.

ಪ್ರೈವೇಟ್ ಜಟ್ ನ್ನ ಬಾಡಿಗೆಗೆ ಪಡೆದರೆ ಒಂದು ದಿನಕ್ಕೆ ಅದರ ಬಾಡಿಗೆ 12ಲಕ್ಷ ರೂಪಾಯಿ ಇರುತ್ತೆ. ಇನ್ನು ಹೆಲಿಪಾಡ್ ಬಳಕೆಗೂ ಕೂಡ ಬಾಡಿಗೆ ಕಟ್ಟಬೇಕಾಗುತ್ತೆ. ಈ ಹಿಂದೆ ಹೇಳಿದ್ದು ಕೇವಲ ವಿಮಾನದ ಬಾಡಿಗೆ. ಇನ್ನು ವಿಮಾನಗಳನ್ನ ಲ್ಯಾಂಡ್ ಮಾಡುವ ಸ್ಥಳಕ್ಕೂ ಕೂಡ ಇಂತೀಷ್ಟು ಬಾಡಿಗೆ ಕಟ್ಟಬೇಕಾಗುತ್ತೆ. ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಗೆ 50000 ರೂಪಾಯಿ ಕೊಡಬೇಕಾಗುತ್ತೆ. ಕೆಲವೊಂದು ಕಡೆ ಖಾಸಗಿ ಹೆಲಿಪಾಡ್ ಗಳಲ್ಲಿ ಕೂಡ ವಿಮಾನಗಳನ್ನ ಲ್ಯಾಂಡ್ ಮಾಡಲಾಗುತ್ತೆ. ಅದಕ್ಕೆ 25-30 ಸಾವಿರದವರೆಗೆ ಹಣವನ್ನ ನೀಡಬೇಕು. ಇನ್ನು ಯಾವುದು ಇಲ್ಲದ ಕಡೆ ದೊಡ್ಡದಾದ ಗ್ರೌಂಡ್ ಗಳಲ್ಲಿ ನಿಲ್ಲಿಸಬೇಕಾಗುತ್ತೆ ಅಲ್ಲಿ ಯಾವುದೇ ಲ್ಯಾಂಡಿಂಗ್ ಚಾರ್ಜಸ್ ಇರೋದಿಲ್ಲ. ಯಾಕಂದ್ರೆ ಆಯಾ ಪಕ್ಷದವರೇ ಅಲ್ಲಿ ತಾತ್ಕಾಲಿಕ ಹೆಲಿಪಾಡ್ ಗಳನ್ನ ನಿರ್ಮಿಸಿರುತ್ತಾರೆ. ಜೊತೆಗೆ ಪೈಲೇಟ್ ಗೆ ಊಟ ವಸತಿ ಯ ಸೌಲಭ್ಯವನ್ನು ಸಹ ಹೆಲಿಕ್ಯಾಪ್ಟರ್ ಬಾಡಿಗೆಗೆ ಪಡೆದವರೇ ನೋಡಿಕೊಳ್ಳಬೇಕು.

ಒಟ್ಟಿನಲ್ಲಿ 3 ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಪಕ್ಷವು ಅತೀ ಹೆಚ್ಚು ಹೆಲಿಕ್ಯಾಪ್ಟರ್ ಗಳನ್ನ ಬಾಡಿಗೆಗೆ ತೆಗೆದುಕೊಳ್ಳುತ್ತದೆ ಅಂತ ಹೇಳಲಾಗುತ್ತಿದ್ದೂ, ಸುಮಾರು 35-40 ಹೇಳಿಕ್ಯಾಪ್ಟರ್ ಗಳನ್ನ ಬಿಜೆಪಿ ಪಕ್ಷ ಬಾಡಿಗೆಗೆ ತೆಗೆದುಕೊಂಡ್ರೆ ಕಾಂಗ್ರೇಸ್ ಪಕ್ಷ 20-25 ಹೆಲಿಕ್ಯಾಪ್ಟರ್ ಜೆಡಿಎಸ್ ಸುಮಾರು 15 ಹೆಲಿಕ್ಯಾಪ್ಟರ್ ಗಳನ್ನ ಬಾಡಿಗೆಗೆ ತೆಗೆದುಕೊಂಡಿದ್ಯಂತೆ. ಕೆಲವೊಂದು ಬಾರಿ ತಿಂಗಳುಗಳ ಲೆಕ್ಕಕ್ಕೂ ವಿಮಾನಗಳನ್ನ ಬಾಡಿಗೆಗೆ ತೆಗೆದುಕೊಂಡು ಕಾಯ್ದಿರಿಸಿರುವ ಉದಾಹರಣೆಗಳು ಇವೆ.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ Dr Bro.! ಸಿನಿಮಾ ಯಾವುದು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram