ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯು ಭಾರತ ಸರ್ಕಾರದ ಒಂದು ಉತ್ತಮ ಯೋಜನೆಯಾಗಿದ್ದು ಈ ಯೋಜನೆಯ ಉದ್ದೇಶವು ದೇಶದ ಮನೆಗಳ ಮೇಲೆ ಸೌರ ಫಲಕಗಳ ಸ್ಥಾಪನೆಯನ್ನು ಉತ್ತೇಜಿಸುವುದು ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ಸ್ಥಾಪನೆಯ ದಿನ ಸೌರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಲು ಸೂರ್ಯ ಘರ್ ಯೋಜನೆ ಘೋಷಣೆ ಮಾಡಿದರು. ಈಗ ಈ ಯೋಜನೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡಲು ಮುಂದಾಗಿವೆ. ಹಾಗಾದರೆ ಯಾವ ಯಾವ ಬ್ಯಾಂಕ್ ನಲ್ಲಿ ಸೌರ ಫಲಕಗಳ ಸ್ಥಾಪನೆಗೆ ಸಾಲ ಪಡೆಯಬಹುದು ಎಂದು ತಿಳಿಯೋಣ.
ಯಾವ ಯಾವ ಬ್ಯಾಂಕ್ ಗಳು ಸೌರ ಫಲಕ ಅಳವಡಿಕೆಗೆ ಸಾಲ ನೀಡುತ್ತಿವೆ?
1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:- ಸೌರ ಫಲಕ ಅಳವಡಿಕೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವು ಷರತ್ತುಗಳ ಅನ್ವಯ ಸಾಲವನ್ನು ನೀಡುತ್ತಿದೆ. ಅರ್ಜಿ ಸಲ್ಲಿಸಿದವರಿಗೆ ಗರಿಷ್ಠ 2 ಲಕ್ಷ ರೂಪಾಯಿ ಸಾಲವನ್ನು ನೀಡಲಾಗುತ್ತದೆ. ನೀವು ಈ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಕು ಎಂದರೆ ನಿಮ್ಮ ಮನೆಯ ವಿಳಾಸ, ನಿಮ್ಮ ಗುರುತಿನ ಚೀಟಿ, ಆದಾಯದ ಮೂಲದ ಬಗ್ಗೆ ಮಾಹಿತಿ, ಅಸ್ತಿ ಪುರಾವೆಗಳು ಹಾಗೂ ನೀವು ಸೌರ ಫಲಕವನ್ನು ಏಷ್ಟು ಗುಣಮಟ್ಟದ ಮಗು ಇದರ ಉತ್ಪಾದನೆಯ ಪ್ರಮಾಣ ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2)ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ:- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 3 kW ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು ಗರಿಷ್ಠ 6 ಲಕ್ಷ ರೂಪಾಯಿಗಳ ವರೆಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಸಾಲವನ್ನು ನೀಡಲಾಗುತ್ತದೆ.
3) ಪಂಜಾಬ್ ನ್ಯಾಷನಲ್ ಬ್ಯಾಂಕ್:- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 10kw ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು 6 ಲಕ್ಷ ರೂಪಾಯಿ ಸಾಲವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡುತ್ತಿದೆ.
4) ಕೆನರಾ ಬ್ಯಾಂಕ್:- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 3kw ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು 2 ಲಕ್ಷ ರೂಪಾಯಿಯವರೆಗೆ ಸಾಲ ನೀಡಲಾಗುತ್ತದೆ.
ಇದನ್ನೂ ಓದಿ: ಇಪಿಎಫ್ ಖಾತೆಯ ಬಡ್ಡಿ ಹಣವನ್ನು ಲೆಕ್ಕ ಹಾಕುವುದು ಹೇಗೆ ?
ಈ ಯೋಜನೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ಯೋಜನೆಯನ್ನು ಜಾರಿಗೆ ತರಲು ಸಚಿವ ಸಂಪುಟವು ಮಧ್ಯಂತರ ಬಜೆಟ್ ನಲ್ಲಿ ಒಪ್ಪಿಗೆ ನೀಡಿದರೆ. ಇದರ ಪ್ರಕಾರ ದೇಶದ ಒಂದು ಕೋಟಿಗೂ ಅಧಿಕ ಮನೆಗಳ ಮೇಲೆ ಸೌರ ಫಲಕ ಅಳವಡಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದೆ. ಸಚಿವ ಸಂಪುಟದಲ್ಲಿ ಈ ಯೋಜನೆಯ ಸಲುವಾಗಿ ಬರೋಬ್ಬರಿ 75,000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.
ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ಏನು ಲಾಭ?: ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕವನ್ನು ಅಳವಡಿಕೆ ಮಾಡುವುದರಿಂದ ನಿಮಗೆ ಕರೆಂಟ್ ಬಿಲ್ ಕಟ್ಟಿವ ಅಗತ್ಯ ಇರುವುದಿಲ್ಲ. ನೀವು ಬೇರೆಯವರಿಗೆ ಅಥವಾ ಸರ್ಕಾರಕ್ಕೆ ವಿದ್ಯುತ್ ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. ವಿದ್ಯುತ್ ವ್ಯತ್ಯಯ ಅಥವಾ ಬೇರೆಯವರ ಮನೆಯಲ್ಲಿ ಫ್ಯೂಸ್ ಹೋದರೆ ಅಥವಾ ಲೈನ್ ಫಾಲ್ಟ್ ಎಂದು ವಿದ್ಯುತ್ ಸಂಪರ್ಕ ಕಡಿತ ಆಗುವುದಿಲ್ಲ. ಈ ವಿದ್ಯುತ್ ಪ್ಯಾನಲ್ ಅಳವಡಿಸಿಕೊಂಡರೆ ನಿಮಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ.
ಇದನ್ನೂ ಓದಿ: ಎಲ್ಐಸಿಯ ಈ ಹೊಸ ಯೋಜನೆಯಲ್ಲಿ, ಕೇವಲ ರೂ.121 ಹೂಡಿಕೆ ಮಾಡಿ,ಮಗಳ ಮದುವೆಯ ಸಮಯಕ್ಕೆ ಪಡೆಯಿರಿ 27 ಲಕ್ಷ ರೂ.ಗಳು