ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕಾಟೇರ 29ನೇ ತಾರೀಕು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಆನ್ಲೈನ್ ನಲ್ಲಿ ಟಿಕೆಟ್ ಗಳು ಬುಕಿಂಗ್ ಶುರುವಾಗಿದ್ದು, ಮೊದಲ 48 ಗಂಟೆಗಳಲ್ಲಿ 30 ಸಾವಿರ ಟಿಕೆಟ್ ಬುಕ್ ಆಗಿದ್ದು, ಬಳಿಕ ಕಳೆದ 72 ಗಂಟೆಗಳಲ್ಲಿ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಟಿಕೆಟ್ ಗಳು ಬುಕ್ ಆಗಿದ್ದು. ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿ 48 ಗಂಟೆಗಳಲ್ಲಿ ಒಂದು ಕೋಟಿ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ಕಾಟೇರ ಸೃಷ್ಟಿಸಿದೆ. ಇಂದು ರಾಕ್ ಲೈನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಕಾಟೇರ ಸಿನಿಮಾ ರಾಜ್ಯಾದ್ಯಂತ ಯಾವ ಯಾವ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಎಂಬ ಪಟ್ಟಿ ಕೂಡ ಹಂಚಿಕೊಂಡಿದ್ದಾರೆ ಕೆಳಗೆ ನೀಡಿರುವ ಫೋಟೋದಲ್ಲಿ ಯಾವೆಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ನೋಡಬಹುದು..
ಒಂದು ಕಡೆ ಬುಕ್ಕಿಂಗ್ ನಿಂದ ಸಿನಿಮಾ ಸುದ್ದಿ ಮಾಡುತ್ತಿದ್ದಾರೆ ಇನ್ನೊಂದು ಕಡೆ ಸಿನಿಮಾದ ಕಥೆಯ ಬಗ್ಗೆಯೂ ಕೂಡ ಹಲವು ಚರ್ಚೆಗಳು ನಡೆಯುತ್ತಿವೆ. ದರ್ಶನ್ ಅವರು ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಸಿನಿಮಾದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದು. ಈ ಚಿತ್ರ ನೈಜ ಘಟನೆ ಆಧಾರಿತವಾಗಿದ್ದು. ಅದು ಇಂದಿರಾ ಗಾಂಧಿ ಕಾಲದ ಕಥೆಯಾಗಿದೆ ಎಂದು ಹೇಳಿದರು. ಕಾಟೇರ ಟ್ರೈಲರ್ 17 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಕ್ರಾಂತಿ ಸಿನಿಮಾ ಬಳಿಕ ಇದೇ ವರ್ಷದಲ್ಲಿ ದರ್ಶನ್ ಅವರ ಎರಡನೇ ಸಿನಿಮಾ ಕಾಟೇರ ಒಂದೇ ವರ್ಷದಲ್ಲಿ ಎರಡು ಸಿನಿಮಾಗಳನ್ನು ಕೊಟ್ಟಿರುವ ದರ್ಶನ್ ತಮ್ಮ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್ ಆಗಿದ್ದೆ.
View this post on Instagram
ಕಾಟೇರ ಸಿನಿಮಾದ ಬುಕ್ಕಿಂಗ್ ವಿಚಾರ ನೋಡುವುದಾದರೆ ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಮೊದಲ ದಿನದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು. ಸಿನಿಮಾ ರಿಲೀಸ್ ಗೂ ಮುನ್ನವೇ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಮಗಳ ನಟನೆಗೆ ಮಾಲಾಶ್ರೀ ಸಾಥ್ ಕೊಟ್ಟಿದ್ದಾರೆ. ಹಲವು ವಿಷಯಗಳಿಗೆ ಸಿನಿಮಾ ನೋಡಲು ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ ಹಾಗೂ ಮೊದಲ ದಿನ ಕಾಟೇರ ಸಿನಿಮಾವು ಎಷ್ಟು ಕಲೆಕ್ಷನ್ ಮಾಡುತ್ತಿದೆ ಕಾದು ನೋಡಬೇಕಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪ್ರಮುಖ ಜಿಲ್ಲೆಗಳಲ್ಲಿ ಕಾಟೇರ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಪಟ್ಟಿ
ಚಿಕ್ಕಮಗಳೂರು – ನಾಗಲಕ್ಷ್ಮಿ, ಶಿವಮೊಗ್ಗ – ವೀರಭದ್ರೇಶ್ವರ, ಬೀದರ್-ಸ್ವಪ್ನ, ಗಂಗಾವತಿ – ಪೂರ್ಣಿಮಾ, ಗದಗ – ಕೃಷ್ಣ, ಹಾವೇರಿ – ಮಾಘವಿ, ಸರಸ್ವತಿ, ರಾಯಚೂರು – ಪೂರ್ಣಿಮಾ, ಬಾಗಲಕೋಟೆ – ವಾಸವಿ, ಬಿಜಾಪುರ – ಜಯಶ್ರೀ, ಡ್ರೀಮ್ ಲ್ಯಾಂಡ್, ಬೆಳಗಾವಿ – ಪ್ರಕಾಶ್, ನಿರ್ಮಲ, ಹುಬ್ಬಳ್ಳಿ – ಶೃಂಗಾರ್, ಹೊಸಪೇಟೆ – ಲಕ್ಷ್ಮೀ, ಚಿತ್ರದುರ್ಗ – ಬಸವೇಶ್ವರ, ವೆಂಕಟೇಶ್ವರ, ಬಳ್ಳಾರಿ – ಗಂಗಾ, ದಾವಣಗೆರೆ – ಗೀತಾಂಜಲಿ, ಚಾಮರಾಜನಗರ – ಗುರುರಾಘವೇಂದ್ರ, ಹಾಸನ – ಎಸ್.ಬಿ.ಜಿ, ಮಂಡ್ಯ – ಸಂಜಯ್, ಮಹಾವೀರ, ಮೈಸೂರು – ರಾಜ್ ಮಹಲ್, ಗಾಯತ್ರಿ, ವುಡ್ ಲ್ಯಾಂಡ್, ಕೋಲಾರ – ನಾರಾಯಣಿ, ತುಮಕೂರು – ಮಾರುತಿ, ರಾಮನಗರ – ಶ್ರೀರಾಮ, ದೊಡ್ಡಬಳ್ಳಾಪುರ – ವೈಭವ್, ಚಿಕ್ಕಬಳ್ಳಾಪುರ – ಬಾಲಾಜಿ..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಶುರುವಾಗಿದೆ ಕಾಟೇರಾ ಟಿಕೆಟ್ ಅಬ್ಬರ; ಡಿ. ಬಾಸ್ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಫುಲ್ ವೈಟಿಂಗ್
ಇದನ್ನೂ ಓದಿ: ಇಂದಿನಿಂದ ನಿಮ್ಮ ಗ್ರಾಮದಲ್ಲಿ ಗೃಹಲಕ್ಷ್ಮಿ ಶಿಬಿರ; ಸ್ಥಳದಲ್ಲೇ ಸಿಗುತ್ತದೆ ಸಮಸ್ಯೆಗಳಿಗೆ ಪರಿಹಾರ