ಒಂದಕ್ಕಿಂತ ಜಾಸ್ತಿ ಕ್ರೆಡಿಟ್ ಕಾರ್ಡ್ ಗಳು ಇದ್ದು ಬಳಸದೆ ಇದ್ದರೆ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ

Credit Card

ಸಾಮಾನ್ಯವಾಗಿ ಈಗ ಹಲವು ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಇಟ್ಟುಕೊಂಡು ಇರುತ್ತಾರೆ. ಆದರೆ ಒಂದೇ ಕಾರ್ಡ್ ಉಪಯೋಗ ಮಾಡುತ್ತಿದ್ದು ಉಳಿದ ಕಾರ್ಡ್ ಗಳನ್ನು ಉಪಯೋಗಿಸುವುದಿಲ್ಲ. ಹಾಗೆ ಮಾಡಿದರೆ ಏನಾಗುತ್ತದೆ. ಕ್ರೆಡಿಟ್ ಕಾರ್ಡ್ ರದ್ದು ಆಗುತ್ತದೆಯೇ ಎಂಬ ಪ್ರಶ್ನೆ ನಿಮಗೆ ಬರಬಹುದು. ಕ್ರೆಡಿಟ್ ಕಾರ್ಡ್ ಬಳಸದೆ ಇದ್ದರೆ ನಿಮ್ಮ ಕಾರ್ಡ್ ಪರಿಸ್ಥಿತಿ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಕ್ರೆಡಿಟ್ ಕಾರ್ಡ್ ಯಾವ ಸಮಯದಲ್ಲಿ ಹೆಚ್ಚು ಉಪಯೋಗಕ್ಕ್ಕೆ ಬರುತ್ತದೆ?: ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಪಡೆಯಲು ಅನುಕೂಲಕರ ಆಗಿದೆ. ನಿಮ್ಮ ಬಳಿ ಸಾಕಷ್ಟು ನಗದು ಇಲ್ಲದಿದ್ದರೆ ಅಥವಾ ನಿಮ್ಮ ಕಾರ್ ದುರಸ್ತಿ ಅಥವಾ ನಿಮಗೆ ಯಾವುದೇ ವೈದ್ಯಕೀಯ ಅನಿರೀಕ್ಷಿತ ಖರ್ಚುಗಳನ್ನು ಭರಿಸಲು ಕ್ರೆಡಿಟ್ ಕಾರ್ಡ್ ಉತ್ತಮ ಮಾರ್ಗವಾಗಿದೆ. ಈಗ ಹೆಚ್ಚಿನ ಸಮಯ ಹಣ ಇಲ್ಲದೆ ಇದ್ದರೂ ಕ್ರೆಡಿಟ್ ಕಾರ್ಡ್ ಬಳಸುವದು ಸಾಮಾನ್ಯ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಜೀವಮಾನದ ಕ್ರೆಡಿಟ್ ಕಾರ್ಡ್ ಬಳಸದೆ ಇದ್ದರೂ ನಡೆಯುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬನ್ನಿ:-

ಕೆಲವು ಬ್ಯಾಂಕುಗಳು ಉತ್ತಮ ಸಿಬಿಲ್ ಸ್ಕೋರ್ ಮತ್ತು ಸಂಬಳ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಉಚಿತ ಕ್ರೆಡಿಟ್ ಕಾರ್ಡ್ಗಳನ್ನು ನೀಡುತ್ತವೆ. ಮೊದಲಿಗೆ ಇದು ಲಾಭದಾಯಕ ಕೊಡುಗೆ ಎಂದು ತಿಳಿದುಬಯುತ್ತದೆ ಏಕೆಂದರೆ ಜೀವಮಾನದ ಉಚಿತ ಕಾರ್ಡ್ ಬಳಸದಿದ್ದರೂ ಸಹ ಯಾವುದೇ ಹಣಕಾಸು ಹೊಣೆಗಾರಿಕೆ ಇರುವುದಿಲ್ಲ ಎಂದು ತಪ್ಪಾಗಿ ಭಾವಿಸಬೇಡಿ. ನೀವು ಜೀವಮಾನದ ಕ್ರೆಡಿಟ್ ಕಾರ್ಡ್ ಹೊಂದಿದ್ದರೂ ಸಹ ನಿಮ್ಮ ಕಾರ್ಡ್ ಬಳಸದೆ ಇದ್ದರೆ ರದ್ದಾಗಬಹುದು ಅಥವಾ ದಂಡ ನೀಡಬೇಕಾದ ಸಂದರ್ಭ ಬರಬಹುದು. ಆದ್ದರಿಂದ ಬ್ಯಾಂಕ್ ಗಳು ನೀಡುವ ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಕಾರ್ಡ್ ಬಳಸದೆ ಇದ್ದರೆ ನಿಮಗೆ ಯಾವ ರೀತಿಯ ತಿಂದರೆ ಆಗಬಹುದು ಎಂಬ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದಿರುವುದು ಉತ್ತಮ.

ಕ್ರೆಡಿಟ್ ಕಾರ್ಡ್ ಬಳಸದೆ ಇದ್ದರೆ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು :- ಕ್ರೆಡಿಟ್ ಕಾರ್ಡ್ ಅನ್ನು ಸಮರ್ಪಕವಾಗಿ ಬಳಸದೆ ಇದ್ದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೇರವಾಗಿ ಪರಿಣಾಮ ಬಿರುವ ಸಾಧ್ಯತೆ ಇರುತ್ತದೆ. ಇದು ನೀವು ಸಾಲ ಪಡೆಯುವ ಸಮಯ ಬಂದಾಗ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಚಿತ ಕ್ರೆಡಿಟ್ ಕಾರ್ಡ್ ಅಥವಾ ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ಎಂದು ಬಳಸದೆ ಇರಬಾರದು. ಪ್ರತಿ ಬ್ಯಾಂಕ್ ನಲ್ಲಿ ಸಹ ಯಾವುದೇ ಕ್ರೆಡಿಟ್ ಕಾರ್ಡ್ ಬಳಸಲು ಕಾಲಾವಧಿ ಇರುತ್ತದೆ. ಸಾಮಾನ್ಯವಾಗಿ ಆರು ತಿಂಗಳಿಗೆ ಅಥವಾ ಒಂದು ವರುಷಕ್ಕೆ ಒಮ್ಮೆ ಆದರೂ ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಬಳಸಬೇಕು. ಇದರ ಬಗ್ಗೆ ನೀವು ನಿಮ್ಮ ಬ್ಯಾಂಕ್ ನಲ್ಲಿ ವಿಚಾರಿಸಬೇಕು.

ಸಾಲ ನೀಡುವಾಗ ನಿಮಗೆ ಇದು ನಕಾರಾತ್ಮಕ ಪರಿಣಾಮ ಬೀರಬಹುದು :- ನಿಮ್ಮ ಆದಾಯಕ್ಕೆ ಹಾಗೂ ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಗಳ ಸಂಖ್ಯೆ ಯಾವುದೇ ನೇರ ಸಂಬಂಧ ಇಲ್ಲ. ಆದರೆ ಹೆಚ್ಚಿನ ಕ್ರೆಡಿಟ್ ಇಟ್ಟುಕೊಂಡು ಸಮರ್ಪಕವಾಗಿ ಬಳಕೆ ಮಾಡದೇ ಇರುವುದು ಕಂಡುಬಂದರೆ ಭವಿಷ್ಯದಲ್ಲಿ ನಿಮಗೆ ಯಾವುದೇ ರೀತಿಯ ಲೋನ್ ಪಡೆಯಬೇಕು ಎಂದುಕೊಂಡಾಗ ಸಾಲ ನೀಡುವ ಬ್ಯಾಂಕ್ ಅಥವಾ ಯಾವುದೇ ಕಂಪನಿ ಕ್ರೆಡಿಟ್ ಕಾರ್ಡ್ ನಿರ್ವಹಣೆಯನ್ನು ಚೆಕ್ ಮಾಡುತ್ತದೆ.

ಇದನ್ನೂ ಓದಿ: ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಹೇಗೆ ಬೆಳೆಸಬಹುದು?