20 ವರ್ಷಗಳ ಅವಧಿಗೆ ಹೊಮ್ ಲೋನ್ ತೆಗೆದುಕೊಂಡರೆ EMI ಎಷ್ಟು ಪಾವತಿಸಬೇಕು ಎಂಬುದನ್ನು ತಿಳಿಯೋಣ

Home Loan Emi

ಮನೆ ಕಟ್ಟಬೇಕು ಎನ್ನುವ ಕನಸು ಪ್ರತಿಬ್ಬರಿಗೂ ಇರುತ್ತದೆ. ಮನೆ ಕಟ್ಟುವಾಗ ನಮ್ಮ ಇಷ್ಟದ ಮನೆ ಕಟ್ಟಲು ನಾವು ಕೂಡಿಟ್ಟ ಹಣ ಸಾಕಾಗುವುದಿಲ್ಲ. ಹಾಗಾದಾಗ ನಾವು ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ನಾವು ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಲೋನ್ ಪಡೆಯುವಾಗ ಅವಧಿಯನ್ನು ಆಯ್ಕೆ ಮಾಡಿಕೊಂಡಿರುತ್ತವೆ. ನಮ್ಮ ಆಯ್ಕೆಗೆ ಅನುಗುಣವಾಗಿ EMI ಪಾವತಿಸಬೇಕಾಗುತ್ತದೆ. 75 ಲಕ್ಷ ರೂಪಾಯಿ ಗೃಹ ಸಾಲವನ್ನು 20 ವರ್ಷಗಳ ಅವಧಿಗೆ ಪಡೆದರೆ ಏಷ್ಟು EMI ಪಾವತಿಸಬೇಕಾಗುತ್ತದೆ ಹಾಗೂ ಯಾವ ಬ್ಯಾಂಕ್ ನಲ್ಲಿ ಏಷ್ಟು EMI ಪಾವತಿಸಬೇಕಾಗುತ್ತದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಬ್ಯಾಂಕ್ ಆಫ್ ಬರೋಡಾ ದಲ್ಲಿ ಎಷ್ಟು EMI ಪಾವತಿಸಬೇಕು?:

ಬ್ಯಾಂಕ್ ಆಫ್ ಬರೋಡಾ ದಲ್ಲಿ 75 ಲಕ್ಷ ರೂಪಾಯಿ ಹೊಮ್ ಲೋನ್ ಪಡೆದುಕೊಂಡರೆ ನೀವು ತಿಂಗಳಿಗೆ 64,200 ರೂಪಾಯಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಪೂರ್ಣ ಸಾಲವನ್ನು ಮರುಪಾವತಿ ಮಾಡುವ ಅವಧಿಗೆ 20 ವರ್ಷ ಆಗಿರುತ್ತದೆ. ಇದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ ನಲ್ಲಿ 75 ಲಕ್ಷ ರೂಪಾಯಿ ಹೊಮ್ ಲೋನ್ ಮಾಡಿದರೆ ಸಹ 64,200 ರೂಪಾಯಿ ತಿಂಗಳಿಗೆ EMI ಕಟ್ಟಬೇಕು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಎಷ್ಟು EMI ಪಾವತಿಸಬೇಕು?

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೊಮ್ ಲೋನ್ ಗೆ ಅತಿ ಕಡಿಮೆ ಬಡ್ಡಿದರವನ್ನು ನಿಗದಿ ಮಾಡುತ್ತಿದೆ. ಕೇವಲ ಶೇಕಡಾ 8.35 % ಬಡ್ಡಿದರವನ್ನು ಪಾವತಿಸಬೇಕು. ಈ ಬ್ಯಾಂಕ್ ನಲ್ಲಿ 75 ಲಕ್ಷ ರೂಪಾಯಿ ಗೃಹ ಸಾಲಕ್ಕೆ ಪ್ರತಿ ತಿಂಗಳು EMI ಮೊತ್ತ 63,900 ರೂಪಾಯಿ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೆನರಾ ಬ್ಯಾಂಕ್ ನಲ್ಲಿ 75 ಲಕ್ಷ ಗೃಹ ಸಾಲಕ್ಕೆ ತಿಂಗಳಿಗೆ ಏಷ್ಟು EMI ಪಾವತಿಸಬೇಕು?

ಕೆನರಾ ಬ್ಯಾಂಕ್ ನಲ್ಲಿ ಗೃಹ ಸಾಲದ ಬಡ್ಡಿದರ ಶೇಕಡಾ 8.5% ಆಗಿರುತ್ತದೆ. 20 ವರ್ಷಗಳ ಅವಧಿಗೆ 75 ಲಕ್ಷ ರೂಪಾಯಿ ಸಾಲ ಮಾಡಿದರೆ 64,200 ರೂಪಾಯಿ EMI ಕಟ್ಟಬೇಕು.

ಕೋಟಕ್ ಮಹೀಂದ್ರಾ ಬ್ಯಾಂಕ್ ನ ಗೃಹ ಸಾಲದ ವಿವರ :-

ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ 75 ಲಕ್ಷ ರೂಪಾಯಿ ಮೊತ್ತವನ್ನು 20 ವರ್ಷಗಳ ಅವಧಿಗೆ ಗೃಹ ಸಾಲವನ್ನು ಪಡೆದರೆ ಪ್ರತಿ ತಿಂಗಳು 64,550 ರೂಪಾಯಿ ಪಾವತಿಸಬೇಕಾಗುತ್ತದೆ.

ಆಕ್ಸಿಸ್ ಬ್ಯಾಂಕ್ ನ ಗೃಹಸಾಲದ ವಿವರ :-

ಆಕ್ಸಿಸ್ ಬ್ಯಾಂಕ್ ನಲ್ಲಿ 75 ಲಕ್ಷ ರೂಪಾಯಿಯನ್ನು 20 ವರ್ಷಗಳ ಅವಧಿಗೆ ಗೃಹ ಸಲ ಪಡೆದರೆ ತಿಂಗಳಿಗೆ 65,7750 ರೂಪಾಯಿ ಪಾವತಿಸಬೇಕು.

ಐಸಿಐಸಿಐ ಬ್ಯಾಂಕ್ ಗೃಹ ಸಾಲದ ವಿವರ :-

ಐಸಿಐಸಿಐ ಬ್ಯಾಂಕ್ ನಲ್ಲಿ ಹೊಮ್ ಲೋನ್ ಗೆ ಶೇಕಡಾ 9 % ಬಡ್ಡಿದರ ನೋಡ್ಬೇಕು. 75 ಲಕ್ಷ ರೂಪಾಯಿ ಮೊತ್ತವನ್ನು 20 ವರ್ಷಗಳ ಅವಧಿಯ ಸಾಲಕ್ಕೆ ತಿಂಗಳಿಗೆ ನಾವು ಕಟ್ಟಬೇಕಾದ EMI ಮೊತ್ತ 66,975 ರೂಪಾಯಿ ಆಗಿರುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ HDFC ಬ್ಯಾಂಕ್ ನಲ್ಲಿ ಹೊಮ್ ಲೋನ್ ಪಡೆದರೆ ಏಷ್ಟು EMI ಪಾವತಿಸಬೇಕು?

75 ಲಕ್ಷ ರೂಪಾಯಿ ಮೊತ್ತವನ್ನು 20 ವರ್ಷಗಳ ಅವಧಿಯ ಗೃಹ ಸಾಲಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ತಿಂಗಳ EMI ಮೊತ್ತ 67,775 ರೂಪಾಯಿ ಹಾಗೂ HDFC bank ನಲ್ಲಿ 68,850 ರೂಪಾಯಿ ಆಗಿರುತ್ತದೆ. ಜೊತೆಗೆ ಯಸ್ ಬ್ಯಾಂಕ್ ನಲ್ಲಿ 75 ಲಕ್ಷ ರೂಪಾಯಿ ಹೊಮ್ ಲೋನ್ ಪಡೆದರೆ 9.4% ಬಡ್ಡಿದರ ವಿಧಿಸಲಾಗುತ್ತದೆ. ತಿಂಗಳಿಗೆ 68,850 ರೂಪಾಯಿ EMI ಪಾವತಿಸಬೇಕು.

ಇದನ್ನೂ ಓದಿ: ಆದಾಯ ತೆರಿಗೆ ನಿಯಮದ ಪ್ರಕಾರ ಉಳಿತಾಯ ಖಾತೆಯಲ್ಲಿ ಏಷ್ಟು ಹಣ ಠೇವಣಿ ಮಾಡಬಹುದು?

ಇದನ್ನೂ ಓದಿ: ಹೆಚ್ಚು ಹಣವನ್ನು ಗಳಿಸುತ್ತಿದ್ದರು ಆದರೆ ಉಳಿತಾಯ ಮಾಡುವುದಕ್ಕೆ ಆಗುತ್ತಿಲ್ವಾ; ಈ ಸೂತ್ರವನ್ನು ಅನುಸರಿಸಿ ಹೆಚ್ಚು ಹಣ ಉಳಿತಾಯ ಮಾಡಿ