ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡಬೇಕು ಎಂದರೆ ನಾವು ವೋಟರ್ ಕಾರ್ಡ್ ಜೊತೆ ವೋಟರ್ ಸ್ಲಿಪ್ ಸಹ ಬೇಕು. ಈಗಾಗಲೇ BLO ಅವರು ಮನೆ ಮನೆಗೆ ಭೇಟಿ ನೀಡಿ ನಮಗೆ ವೋಟರ್ ಸ್ಲಿಪ್ ನೀಡುತ್ತಿದ್ದಾರೆ. ಆದರೆ ಕೆಲವು ಸಲ ನಮಗೆ ವೋಟರ್ ಸ್ಲಿಪ್ ಸಿಗದೇ ಇದ್ದರೆ ನಮ್ಮ ಹತ್ತಿರ ಇರುವ ಮೊಬೈಲ್ ನಲ್ಲಿಯೇ ನಾವು ವೋಟರ್ ಸ್ಲೀಪ್ ತೆಗೆದುಕೊಳ್ಳಬಹುದು. ಹಾಗಾದರೆ ಮೊಬೈಲ್ ನಲ್ಲಿ ವೋಟರ್ ಸ್ಲಿಪ್ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯೋಣ.
ಮೊಬೈಲ್ ಅಪ್ಲಿಕೇಶನ್ ಮೂಲಕ ಮತದಾರರ ವೋಟರ್ ಸ್ಲಿಪ್ ಡೌನ್ಲೋಡ್ ಮಾಡುವುದು ಹೇಗೆ?: ಮೊದಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ ಮತದಾರರ ಸಹಾಯವಾಣಿ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ನಂತರ ಐ-ಎಪಿಕ್ ಬಟನ್ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಬೇಕು. ನಂತರ ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ವೋಟರ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ವೆಬ್ಸೈಟ್ ಮೂಲಕ ಮತದಾರರ ವೋಟರ್ ಸ್ಲಿಪ್ ಡೌನ್ಲೋಡ್ ಮಾಡುವುದು ಹೇಗೆ?: ವೆಬ್ಸೈಟ್ ಮೂಲಕ ಮತದಾರರ ವೋಟರ್ ಸ್ಲಿಪ್ ಡೌನ್ಲೋಡ್ ಮಾಡಲು www.voters.eco.giv.in ಗೆ ಭೇಟಿನೀಡಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು password ನಮೂದಿಸಿ ಲಾಗ್ ಇನ್ ಆಗಬೇಕು. ಐ-ಎಪಿಕ್ ಬಟನ್ ಕ್ಲಿಕ್ ಮಾಡಿ ನಂತರ ನಿಮ್ಮ ಗುರುತಿನ ಚೀಟಿಯ ವಿವರಗಳನ್ನು ನಮೂದಿಸಿ ವೋಟರ್ ಸ್ಲಿಪ್ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ಚುನಾವಣೆ ಯಾವಾಗ?
ಏಪ್ರಿಲ್ 26 ರಂದು ಈಗಾಗಲೇ ಮೊದಲ ಹಂತದ ಚುನಾವನೆ ಆಗಿದ್ದು, ಎರಡನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ. ಬಳ್ಳಾರಿ , ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಚಿಕ್ಕೋಡಿ, ಬೆಳಗಾವಿ, ರಾಯಚೂರು, ಬೀದರ್, ಕೊಪ್ಪಳ, ಶಿವಮೊಗ್ಗ ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ.
ವೋಟರ್ ಸ್ಲಿಪ್ ನಲ್ಲಿ ಏನೇನು ಮಾಹಿತಿ ಇರಲಿದೆ?: ವೋಟರ್ ಸ್ಲಿಪ್ ನಲ್ಲಿ ನಮ್ಮ ವೋಟರ್ ಕಾರ್ಡ್ ನಂಬರ್, ಲಿಂಗ, ವಯಸ್ಸಿನ ಬಗ್ಗೆ ಮಾಹಿತಿ, ವಿಧಾನ ಸಭಾ ಕ್ಷೇತ್ರ ದ ವಿವರ, ವೋಟಿಂಗ್ ಬೂತ್ ಹೆಸರು, ಮತ್ತು ವೋಟಿಂಗ್ ನಡೆಯುವ ಸಮಯದ ವಿವರಗಳು ಇರುತ್ತದೆ.
ಇದನ್ನೂ ಓದಿ: ರೈತರಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ ಸೌತ್ ಇಂಡಸ್ಟ್ರಿಯ ಖ್ಯಾತ ನಟ. ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.
ಮತದಾನ ಕೇಂದ್ರಕ್ಕೆ ಹೋದಾಗ ಕೆಲವು ಅಂಶಗಳನ್ನು ನೆನಪಿಟ್ಟುಕೊಳ್ಳಿ :-
- ಮತದಾನದ ಅಧಿಕಾರಿಗಳಿಗೆ ನಿಮ್ಮ EPIC ಚೀಟಿಯನ್ನು ತೋರಿಸಿ ಮತ್ತು ನಿಮ್ಮ ಗುರುತನ್ನು ಪರಿಶೀಲಿಸಲು ನಿಮಗೆ ಅನುಮತಿಸಿ.
- ನಿಮಗೆ ಮತದಾನ ಯಂತ್ರದ ಬಳಕೆಯ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ, ಮತದಾನ ಅಧಿಕಾರಿಗಳಿಗೆ ಕೇಳಲು ಹಿಂಜರಿಯಬೇಡಿ.
- ನಿಮ್ಮ ಮತವನ್ನು ಚಲಾಯಿಸಿದ ನಂತರ, ರಸೀದಿ ಪಡೆಯಲು ಮರೆಯದಿರಿ.
- ಮೊಬೈಲ್ ಫೋನ್ ಅಥವಾ ಇತರ ಸಾಧನಗಳನ್ನು ಮತದಾನ ಕೇಂದ್ರಕ್ಕೆ ತೆಗೆದುಕೊಂಡು ಹೋಗಬಾರದು.
- ಶಾಂತಿಯುತವಾಗಿ ಮತ್ತು ಗೌರವಯುತವಾಗಿ ಮತದಾನ ಚಲಾಯಿಸಿ.
ವೋಟರ್ id ಇಲ್ಲದೆ ಇದ್ದರೂ ಸಹ ನೀವು ವೋಟಿಂಗ್ ಮಾಡಬಹುದು. ನಿಮ್ಮ ಬಳಿ ಇರುವ ಬೇರೆ ಯಾವುದೇ ರೀತಿಯ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಅಂತಹ ಸರ್ಕಾರಿ ಕಾರ್ಡ್ ಗಳು ಇದ್ದರೆ ನೀವು ವೋಟ್ ಮಾಡಬಹುದು. ಬಿಸಿಲು ಜಾಸ್ತಿ ಇರುವ ಕಾರಣ ಕಪ್ಪು ಬಟ್ಟೆ ಧರಿಸಿ ಹೋಗಬೇಡಿ. ಬಿಸಿಲು ಜಾಸ್ತಿ ಆಗುವ ಮೊದಲು ವೋಟ್ ಮಾಡಿ.
ಇದನ್ನೂ ಓದಿ: ಮನೆ ಸಾಲವನ್ನು ಮುಂಚಿತವಾಗಿ ಮರುಪಾವತಿ ಮಾಡುವಾಗ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಿ