ಪಿಎಫ್ ಖಾತೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ವಿಧಾನ ಮತ್ತು ವಿಪಿಎಫ್ ಖಾತೆಯ ಬಗ್ಗೆ ಮಾಹಿತಿ..

How Increase pf contribution

ಖಾಸಗಿ ಕಂಪನಿ ಉದ್ಯೋಗಿಗಳಿಗೆ ರಿಟೈರ್ಮೆಂಟ್ ನಂತರ ಪೆನ್ಷನ್ ಹಣ ಸಿಗುವುದಿಲ್ಲ. ಅಥವಾ ಯಾವುದೇ ರೀತಿಯಲ್ಲಿ ಕಂಪನಿ ಅವರಿಗೆ ಆರ್ಥಿಕ ಸಹಾಯ ನೀಡುವುದಿಲ್ಲ. ಆದರಿಂದ ಪಿಎಫ್ ( ಪ್ರೊವಿಡೆಂಟ್ ಫಂಡ್ ) ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡುತ್ತಾರೆ. ಸಾಮಾನ್ಯವಾಗಿ ಕಂಪನಿಯಲ್ಲಿ ಈ ಯೋಜನೆ ಲಭ್ಯವಿರುತ್ತದೆ. ಆದರೆ ಕೆಲವು ಕಂಪೆನಿಗಳು ಉದ್ಯೋಗಿಯ ಹಣವನ್ನು ಪಿಎಫ್ ಖಾತೆಗೆ ಜಮಾ ಮಾಡದೆಯೇ ಪೂರ್ಣ ಹಣವನ್ನು Salary ರೂಪದಲ್ಲಿ ನೀಡುತ್ತದೆ. ಆದರೆ ಪಿಎಫ್ ಎಂಬುದು ಪ್ರತಿಯೊಬ್ಬ ಉದ್ಯೋಗಿಯ ಭವಿಷ್ಯದ ದೃಷ್ಟಿಯಿಂದ ಉಪಯೋಗ. ಮಕ್ಕಳ ಎಜುಕೇಷನ್ ಮಕ್ಕಳ ಮದುವೆ ಅಥವಾ ಅನಾರೋಗ್ಯದ ಸಮಸ್ಯೆಗೆ ಈ ಪಿಎಫ್ ಹಣವೇ ಉಪಯೋಗ ಆಗುತ್ತದೆ.

WhatsApp Group Join Now
Telegram Group Join Now

ನಾವು ಉಳಿತಾಯ ಮಾಡಿದ ಹಣಕ್ಕೆ ಹೆಚ್ಚಿನ ಬಡ್ಡಿದರ ಸಿಗುತ್ತದೆ ಅಂದರೆ ಯಾರಿಗೆ ತಾನೇ ಸಂತಸ ಆಗುವುದಿಲ್ಲ. ನೀವು ಖಾಸಗಿ ಕಂಪನಿ ಉದ್ಯೋಗಿ ಆಗಿದ್ದು ನಿಮಗೂ ಸಹ ನಿಮ್ಮ salary ಇಂದ ಪಿಎಫ್ ಹಣ ಕಡಿತವಾಗುತ್ತಿದ್ರೆ ನೀವು ಸಹ ಹೆಚ್ಚಿನ ಬಡ್ಡಿದರ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪಿಎಫ್ ಹಣವನ್ನು ಹೆಚ್ಚಿಸುವ ವಿಧಾನ

ಕಂಪನಿಯ ರೂಲ್ಸ್ ಪ್ರಕಾರ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬನಿಗೂ ಒಂದೇ ರೀತಿಯ ಮೊತ್ತ ಅಂದರೆ ನಿಮ್ಮ salary ಯಲ್ಲಿ ಇಂತಿಷ್ಟು ಪ್ರತಿಶತ ಹಣ ಪ್ರತಿ ತಿಂಗಳು ಸಂಬಳದಿಂದ ಕಡಿತ ಆಗಿ ಪಿಎಫ್ ಖಾತೆಗೆ ಜಮಾ ಆಗುತ್ತದೆ. ಆದರೆ ವೈಯಕ್ತಿಕವಾಗಿ ನೀವು ಹೆಚ್ಚಿನ ಉಳಿತಾಯ ಮಾಡಬೇಕು ಎಂದು ಬಯಸಿದ್ದಲ್ಲಿ ನಿಮ್ಮ ಪಿಎಫ್ ಖಾತೆಗೆ ಹೆಚ್ಚಿನ ಹಣ ಹಾಕಲು ನಿಮ್ಮ ಕಂಪನಿಯ HR ಬಳಿ ಮನವಿ ಮಾಡಿ ಹೆಚ್ಚಿನ ಪಿಎಫ್ ಹಣವನ್ನು ನೀಡಲು ಸಾಧ್ಯವೇ ಎಂದು ವಿಚಾರಿಸಿ. ಆದರೆ ನಿಮ್ಮ ಪಿಎಫ್ ಖಾತೆಗೆ ಹಣ ಹೆಚ್ಚಿಗೆ ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು ಸಿಗುವ ಸಂಬಳ ಕಡಿಮೆ ಆಗುತ್ತದೆ. ನಿಮ್ಮ ಸಂಬಳ ಹಾಗೂ ನಿಮ್ಮ ತಿಂಗಳ ಖರ್ಚು ಹಾಗೂ ನಿಮ್ಮ ಭವಿಷ್ಯಕ್ಕೆ ಏಷ್ಟು ಹಣ ಬೇಕು ಎಂದು ನಿರ್ಧರಿಸಿ ನೀವು ಪಿಎಫ್ ಖಾತೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಿಪಿಎಫ್ ಎಂದರೇನು ? ಹೂಡಿಕೆ ಮಾಡುವುದು ಹೇಗೆ.

ವಿಪಿಎಫ್(VPF) ಎಂದರೆ ಪಿಎಫ್(PF) ಯೋಜನೆ ಅಂತೆಯೇ ಇರುವ ಉಳಿತಾಯ ಖಾತೆ. ಈ ವಿಪಿಎಫ್ ಖಾತೆಯನ್ನು ಯಾವುದೇ ಕಂಪನಿ ನೌಕರನ ಅನುಮತಿ ಇಲ್ಲದೆ ಓಪನ್ ಮಾಡಲು ಸಾಧ್ಯವಿಲ್ಲ. ಪಿಎಫ್ ಹಣ ದ ರೀತಿಯಲ್ಲಿ ಇರುವ ವಿಪಿಎಫ್ ಹೆಚ್ಚಿನ ಉಳಿತಾಯ ಬಯಸುವ ನೌಕರಿಗೆ ಹೆಚ್ಚಿನ ಬಡ್ಡಿದರ ಮತ್ತು ಹೆಚ್ಚಿನ ಉಳಿತಾಯ ಮಾಡಲು ಇರುವ ಒಂದು ಯೋಜನೆ. ಇದರಲ್ಲಿ ಹಣವನ್ನು ಏಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ನಿಮ್ಮ ಶಕ್ತಿಯ ಅನುಸಾರವಾಗಿ ನೀವು ಪ್ರತಿ ತಿಂಗಳ ಸಂಬಳದಲ್ಲಿ ವಿಪಿಎಫ್ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯ. ವಿಪಿಎಫ್ ಖಾತೆಯನ್ನು ತೆರೆಯಲು ನೀವು ನಿಮ್ಮ ಕಂಪನಿಯ HR ಹತ್ತಿರ ಮಾತನಾಡಬೇಕು. ವಿಪಿಎಫ್ ಖಾತೆಯನ್ನು ತೆರೆಯುವಾಗ ನೀವು ತಿಂಗಳಿಗೆ ಕಡಿತವಾಗುವ ಹಣ ಶೇಕಡಾವಾರು ಎಲ್ಲಾ ಮಾಹಿತಿಯನ್ನು ನೀಡಬೇಕು. ಹಾಗೂ ಹೂಡಿಕೆಯ ಹಾಗೂ ತೆರಿಗೆಯ ನಿಯಮಗಳ ಬಗ್ಗೆ ಕಂಪನಿಯಲ್ಲಿ ಮಾಹಿತಿ ಪಡೆಯಬೇಕು.

ವಿಪಿಎಫ್ ನಿಂದ ನೀವು ವರ್ಷಕ್ಕೆ 8.10 % ಆದಾಯವನ್ನು ಪಡೆಯಬಹುದು. ವಿಪಿಎಫ್ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಮೆಚ್ಯೂರಿಟಿಯ ಮೇಲಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ, ಪಿಎಫ್ ಮತ್ತು ವಿಪಿಎಫ್‌ನಲ್ಲಿ ವಾರ್ಷಿಕವಾಗಿ ರೂ 2,50,000 ರೂಪಾಯಿ ಗಳಿಗಿಂತ ಹೆಚ್ಚು ಹಣ ಹೂಡಿಕೆ ಮಾಡಿದರೆ, ನೀವು ತೆರಿಗೆ ನೀಡಬೇಕು. 1,50,000 ರೂಪಾಯಿಗಳ ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: ಜೂನಿಯರ್ ಅಸಿಸ್ಟೆಂಟ್ ಹುದ್ದೆ ಗೆ IDBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ. ಫೆಬ್ರುವರಿ 12 ರಿಂದ ಅರ್ಜಿ ನಮೂನೆ ಬಿಡುಗಡೆ ಆಗಲಿದೆ.