ಬಿಎಂಟಿಸಿ ಯಲ್ಲಿ 2500 ಕಂಡಕ್ಟರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

BMTC conductor posts recruitment

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕರ್ನಾಟಕ ರಾಜ್ಯದ ಬೆಂಗಳೂರು ನಗರಕ್ಕೆ ಸೇವೆ ಸಲ್ಲಿಸುವ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿದ್ದು, ನಗರದಾದ್ಯಂತ ಸಂಚರಿಸಲಿದೆ. ಸಾಮಾನ್ಯ ಬಸ್ ಗಳು ವೋಲ್ವೋ ಬಸ್, ಬೆಂಗಳೂರು ರೌಂಡ್ಸ್, ಹೀಗೆ ಅನೇಕ ಬಸ್ ಗಳನ್ನ ಬಿಎಂಟಿಸಿ ಹೊಂದಿದೆ. ಡ್ರೈವರ್, ಕಂಡಕ್ಟರ್ ಟಿಸಿ, ಹೀಗೆ ಅನೇಕ ಉದ್ಯೋಗಕ್ಕೆ ಅವಕಾಶ ನೀಡುವ ಸಂಸ್ಥೆ ಇದಾಗಿದ್ದು, ಈಗ 2500 ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಹುದ್ದೆಗಳ ಪೂರ್ಣ ವಿವರಗಳು ಇಲ್ಲಿವೆ.

WhatsApp Group Join Now
Telegram Group Join Now

ಹುದ್ದೆಯ ಪೂರ್ಣ ವಿವರ :- 2500 ಕಂಡಕ್ಟರ್ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯು ತಿಳಿಸಿದೆ. 2226 RPC ಹುದ್ದೆ ಹಾಗೂ 214 ಸ್ಥಳೀಯ ವೃಂದ ಹುದ್ದೆ ಜೊತೆಗೆ 825 ಮಹಿಳಾ ಮೀಸಲಾತಿ ಹುದ್ದೆಗಳು ಇವೆ.

ಶೈಕ್ಷಣಿಕ ಅರ್ಹತೆಯ ವಿವರ:- ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಕಲಾ, ವಿಜ್ಞಾನ ಅಥವಾ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಮುಗಿಸಬೇಕು. ಇಲ್ಲವೇ ಸಿಬಿಎಸ್‌ಸಿ 10+2 ಅಥವಾ ಮೂರು ವರ್ಷದ ಡಿಪ್ಲೋಮಾ ಅಥವಾ ಸಮಾನವಾದ ಶೈಕ್ಷಣಿಕ ಅರ್ಹತೆ ಇರಬೇಕು. ಇದರ ಜೊತೆಗೆ ಕಡ್ಡಾಯವಾಗಿ ನಿರ್ವಾಹಕ ಪರವಾನಿಗೆ ಹಾಗೂ ಬ್ಯಾಡ್ಜ್‌ ಹೊಂದಿರಬೇಕು. ಬಾಹ್ಯ ಕೋರ್ಸ್ ಮತ್ತು ಜೆಒಸಿ ಕೋರ್ಸ್ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸುವಂತಿಲ್ಲ ಹಾಗೂ ಈ ವರ್ಷ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವವರು ಅರ್ಜಿ ಸಲ್ಲಿಸಬಾರದು.

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ :-

ಬಿಎಂಟಿಸಿ ಅಧಿಸೂಚನೆಯ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ರಿಂದ 35 ವರ್ಷ. ಸರಕಾರದ ಮೀಸಲಾತಿ ನಿಯಮದ ಅನುಸಾರ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ–1 ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಮಾಜಿ ಸೈನಿಕರಿಗೆ 10 ವರ್ಷ ವಯಸ್ಸಿನ ಸಡಿಲಿಕೆ ಇದೆ.

ಶುಲ್ಕದ ವಿವರ :- ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ ಅಥವಾ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳು 700 ರೂಪಾಯಿ ಹಾಗೂ ಎಸ್‌ಸಿ-ಎಸ್‌ಟಿ, ಪ್ರವರ್ಗ–1 ಹಾಗೂ ಮಾಜಿ ಸೈನಿಕ ಅಥವಾ ಅಂಗವಿಕಲ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕವನ್ನು ಫೋನ್ ಪೇ, ಗೂಗಲ್ ಪೇ ಅಂತಹ ಯುಪಿಐ ಅಪ್ಲಿಕೇಶನ್ ಮೂಲಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

ನೇಮಕಾತಿ ಪ್ರಕ್ರಿಯೆ ನಡೆಯುವ ವಿಧಾನ :-

ಎರಡು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು ನೀವು 100 ಅಂಕಗಳ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಬರೆಯಬೇಕು. ನಾಲ್ಕು ತಪ್ಪು ಉತ್ತರಕ್ಕೆ ಒಂದು ಅಂಕ ಕಡಿತ ಆಗುತ್ತದೆ. ಈ ಪರೀಕ್ಷೆಯಲ್ಲಿ ಕನಿಷ್ಠ ಶೇ 30 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯ ಮಾಡಲಾಗಿದೆ. ಇದರ ನಂತರ PUC cource ಗೆ ಸಂಭಂಧಿಸಿದ ಟೆಸ್ಟ್ ನಲ್ಲಿ ಶೇ.25 ರಷ್ಟು ಅಂಕಗಳನ್ನು ಪಡೆಯಬೇಕು. ಮೆರಿಟ್ ಲಿಸ್ಟ್ ಬಿಡುಗಡೆ ಆದ ನಂತರ 1:5 ಅನುಪಾತದಲ್ಲಿ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆಗೆ ನಡೆಸುತ್ತಾರೆ. ಇದು ಎರಡನೇ ಮತ್ತು ಕೊನೆಯ ಪರೀಕ್ಷಾ ಹಂತವಾಗಿದ್ದು, ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು ಕನಿಷ್ಠ 160 ಸೆಂಟಿ ಮೀಟರ್ ಮತ್ತು ಮಹಿಳಾ ಅಭ್ಯರ್ಥಿಗಳು 150 ಸೆಂಟಿ ಮೀಟರ್ ಎತ್ತರ ಹೊಂದಿರಬೇಕು ಎಂದು ಇಲಾಖೆಯ ಆಯ್ಕೆ ನಿಯಮದಲ್ಲಿ ಇದೆ.

ಎಲ್ಲ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಟ್ರೈನಿಂಗ್ ಪೀರಿಯಡ್ ನಲ್ಲಿ ತಿಂಗಳಿಗೆ 9,100 ರೂಪಾಯಿ ಹಾಗೂ ಟ್ರೈನಿಂಗ್ ಪೀರಿಯಡ್ ಮುಗಿದ ನಂತರ 25,300 ರೂಪಾಯಿ ತಿಂಗಳ ವೇತನ ಪಡೆಯುತ್ತಾರೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಂಟಿಸಿ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ ಇಲಾಖೆಯ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ತುಂಬಬೇಕು. ಮಾರ್ಚ್ 10 2024 ರಿಂದ ಏಪ್ರಿಲ್ 10 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9144 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.