ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಪ್ರೀತಿಗೆ ಅಧಿಕೃತ ಮುದ್ರೆ ಬಿದಿದ್ದು ಲಂಡನ್‌ನಲ್ಲಿ ಓದುವಾಗಲೆ ಇಬ್ಬರ ನಡುವೆ ಚಿಗುರಿದ ಪ್ರೀತಿ ಇಂದು ಹೆಮ್ಮರವಾಗಿ ಬೆಳೆದು ಇದೀಗ ಹಸಮಣೆ ಏರಿ ಹೊಸ ಬಾಳಿಗೆ ನಾಂದಿ ಹಾಡಿದ್ದಾರೆ. ಹೌದು ಓದುವಾಗ ಆದ ಪರಿಚಯ ನಂತರ ಪ್ರೀತಿಗೆ ತಿರುಗಿ ಇಂದು ವೈವಾಹಿಕ ಬದುಕಿಗೆ ಮುನ್ನುಡಿಯಾಗಿದೆ. ಹೌದು ಮೊನ್ನೆಯಷ್ಟೇ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಿದೆ. ಅಕ್ಕ ಪಕ್ಕದ ಸಿನಿ ಇಂಡಸ್ಟ್ರಿ ಸೂಪರ್ ಸ್ಟಾರ್ಸ್ ಕೂಡ ಮದುವೆಗೆ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ಕಲ್ಯಾಣ ಮಹೋತ್ಸವಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ವೆಂಕಯ್ಯ ನಾಯ್ಡು, ಸುಹಾಸಿನಿ, ಯಶ್ ದಂಪತಿ, ಸುದೀಪ್ ಪರಿವಾರ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಅಭಿ- ಅವಿವಾ ವಿವಾಹ ಮಹೋತ್ಸವಕ್ಕೆ ಹಾಜರಾಗಿದ್ದರು. ಅತಿಥಿಗಳಿಂದ ವಧು, ವರರಿಗೆ ಭರ್ಜರಿ ಉಡುಗೊರೆಗಳು ಸಿಕ್ಕಿದೆ. ಹೌದು ರೆಬಲ್ ಸ್ಟಾರ್ ಅಂಬರೀಶ್ ಕನಸಿನಂತೆ ಪುತ್ರನ ಕಲ್ಯಾಣ ನೆರವೇರಿದೆ. ಪ್ಯಾಲೇಸ್ ಗ್ರೌಂಡ್‌ನಲ್ಲಿರುವ ಮಾಣಿಕ್ಯ ಚಾಮರವಜ್ರ ಹಾಲ್‌ನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಮದುವೆ ನೆರವೇರಿದೆ. ಇನ್ನು ಬುಧವಾರ ಅದ್ಧೂರಿ ಆರತಕ್ಷತೆ, ಜೂನ್ 16ಕ್ಕೆ ಮಂಡ್ಯದಲ್ಲಿ ಬೀಗರೂಟ ಕಾರ್ಯಕ್ರಮಗಳಿಗಾಗಿ ತಯಾರಿ ನಡೀತಿದೆ. ಇದರ ಮಧ್ಯೆ ಇದೀಗ ಎರಡೂ ಕುಟುಂಬಗಳ ನಡುವೆ ದುಬಾರಿ ಉಡುಗೊರೆಗಳು ಎಕ್ಸ್ಚೇಂಜ್ ಆಗಿವೆ ಅಂದ್ರೆ ಸಂಪ್ರದಾಯದಂತೆ ಕೊಟ್ಟು ತೆಗೆದುಕೊಳ್ಳುವ ಶಾಸ್ತ್ರ ನಡೆದಿದೆ. ಈ ಗಿಫ್ಟ್ ಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ ಅದರ ಜೊತೆಗೆ ಅಭಿ ಅವಿವಾ ಮದುವೆಗೆ ಖರ್ಚುಗಿರೋದು ಎಷ್ಟು ಕೋಟಿ ಗೊತ್ತಾ?
ಇದನ್ನೂ ಓದಿ: ಅಭಿಷೇಕ್ ಮದುವೆಗೆ ದರ್ಶನ್ ಯಾಕೆ ಬರಲಿಲ್ಲ!? ಮದುವೆಯ ಯಾವ ಕಾರ್ಯಕ್ಕೂ ದಚ್ಚು ನೋ ಎಂಟ್ರಿ?!
ಮಾವನಿಂದ ಅಭಿಷೇಕ್ ಗೆ ಸಿಕ್ತು ಭರ್ಜರಿ ಗಿಫ್ಟ್
ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. ಇನ್ನು ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಕೂಡ ಫ್ಯಾಷನ್ ಡಿಸೈನರ್. ಜೊತೆಗೆ ಮಾಡೆಲ್ ಹಾಗೂ ನಟಿ ಅನ್ನೋದು ವಿಶೇಷ. ಅಲ್ಲದೇ ಬ್ಯುಸಿನೆಸ್ ವುಮೆನ್ ಕೂಡ ಆಗಿದ್ದು ಅಂತರಾಷ್ಟ್ರೀಯ ಕಂಪನಿಗಳ ಜೊತೆ ಟೈ ಅಪ್ ಆಗಿ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ಇದರ ಜೊತೆ ಜೊತೆಗೆ ತಮ್ಮದೇ ಸ್ವಂತ ಸ್ವಿಮ್‌ವೇರ್ ಬ್ರ್ಯಾಂಡ್ ಕೂಡ ಇದೆ, ಇದನ್ನು ಕೂಡ ಇವ್ರೇ ನೋಡಿ ಕೊಂಡು ಹೋಗ್ತಿದ್ದಾರೆ. ಇದೀಗ ತಮ್ಮ ಪತಿ ತಮ್ಮ ತವರು ಮನೆ ಕಡೆಯಿಂದ ಭರ್ಜರಿ ಉಡುಗೊರೆಯನ್ನೇ ಕೊಡಿಸಿದ್ದಾರೆ. ಹೌದು 1ವರೆ ಕೋಟಿ ಮೌಲ್ಯದ ಉಡುಗೊರೆಗೆ ಅಭಿಗೆ ಮಾವನ ಮನೆ ಕಡೆಯಿಂದ ಸಿಕ್ಕಿದೆ.
ಇನ್ನು ಮದುವೆ ಸಮಯದಲ್ಲೇ ಪತಿಗೆ ಅವಿವಾ ಮನೆಯಿಂದ BMW X 7 ಕಾರು ಉಡುಗೊರೆಯಾಗಿ ಸಿಕ್ಕಿದೆ. ಹೌದು ಅವಿವಾ ಮನೆಯವರ ಕಡೆಯಿಂದ ಸಿಕ್ಕಿದ ಈ ಕಾರಿನ ಬೆಲೆ ಅಂದಾಜು 1ವರೆ ಕೋಟಿ ರೂಪಾಯಿ ಎನ್ನಲಾಗ್ತಿದೆ. ಜೊತೆಗೆ ಇದೇ ಬಿಳಿ ಬಣ್ಣದ BMW ಕಾರ್ ಏರಿ ಅಭಿಷೇಕ್ ಮದುವೆ ಮನೆಗೆ ಆಗಮಿಸಿದ್ರು ಅನ್ನೋದು ಮತ್ತೊಂದು ವಿಶೇಷ. ಇನ್ನು ಮನೆಗೆ ಮಹಾಲಕ್ಷ್ಮೀಯಂತೆ ಬಂದಂತಹ ಸೊಸೆಗೂ ಕೂಡ ಸುಮಲತಾ ಯಾವುದರಲ್ಲೂ ಕಡಿಮೆ ಮಾಡಿಲ್ಲ. ಅವಿವಾಗು ಅತ್ತೆ ಕಡೆಯಿಂದ ಅಷ್ಟೇ ಭರ್ಜರಿ ಹಾಗೂ ದುಬಾರಿ ಉಡುಗೊರೆ ಸಿಕ್ಕಿದೆ. ಹೌದು ಸುಮಲತಾ ಅಂಬರೀಶ್ ತಮ್ಮ ಸೊಸೆ ಅವಿವಾಗೆ ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಎರಡು ಮನೆಯವರ ಮಧ್ಯೆ ಕೊಟ್ಟು ತೆಗೆದುಕೊಳ್ಳುವುದು ಸಾಮಾನ್ಯ ಆದ್ರೆ ಕೋಟಿ ಲೆಕ್ಕದಲ್ಲಿ ಇಲ್ಲಿ ಉಡುಗೊರೆ ಎಕ್ಸ್ಚೇಂಜ್ ಆಗಿರೋದು ವಿಶೇಷ.
ಅದ್ದೂರಿ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ?
ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವಾ ಅವರು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಸ್ಟಾರ್ ಗಳು ಸೆಲೆಬ್ರೇಟಿಗಳು ಅಂದ್ರೆ ಅವ್ರ ಮದುವೆ ಕಾರ್ಯಕ್ರಮಗಳು, ವರ್ಣರಂಜಿತ ಲೈಟಿಂಗ್ಸ್, ಅದ್ದೂರಿಯಾಗಿ ಡೆಕೋರೇಷನ್, ಸಖತ್ ಕ್ಯಾಮರಾ ವರ್ಕ್, ಡಿಫರೆಂಟ್ ಕ್ಯಾಸ್ಟ್ಯುಂ, ಬೆಲೆ ಬಾಳುವ ವಜ್ರಭರಣ, ಭರ್ಜರಿ ಭೋಜನ ಇದೆಲ್ಲವೂ ಇದ್ದೆ ಇರುತ್ತೆ. ಅದು ಅಭಿ ಹಾಗೂ ಅವಿವಾ ಮದುವೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ ಕಾರಣ ಇದು ಅಂಬಿ ಕನಸಿನ ಮದುವೆ. ಇಂತಹ ಭರ್ಜರೀ ಗೌಡ್ರ ಮನೆಯ ಮದುವೆಗೆ 8 ಕೋಟಿ ಖರ್ಚು ಅಗಿದ್ಯಂತೆ. ಇದರ ಜೊತೆ ಜೊತೆಗೆ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ರಾಜಕೀಯ ಗಣ್ಯರಿಗೆ ಮದುವೆಯ ಆಹ್ವಾನ ನೀಡಿದ್ದರು. ಇದರ ಜೊತೆಗೆ ಸುಮಲತಾ ಕುಟುಂಬವು ಟಾಲಿವುಡ್, ಬಾಲಿವುಡ್, ಕಾಲಿವುಡ್ ಜೊತೆಗೆ ಉತ್ತಮ ನಂಟು ಹೊಂದಿದ್ದು, ಅವರೆಲ್ಲ ಕೂಡ ಆರತಕ್ಷತೆಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಬುಧವಾರ ನಡೆಯುವ ಆರತಕ್ಷತೆ ಮತ್ತು ಜೂನ್ 16ರಂದು ನಡೆಯುವ ಬೀಗರುಟಕ್ಕೆ ಮತ್ತು ಮದುವೆ ಎಲ್ಲಾ ಸೇರಿ ಬರೋಬ್ಬರಿ 14-15 ಕೋಟಿ ಖರ್ಚಾಗುತ್ತದೆ ಅಂತ ಅಭಿಷೇಕ್ ಆಪ್ತ ಮೂಲಗಳೇ ತಿಳಿಸಿವೆ.
ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಫಿನಾಲೆ ವೇದಿಕೆ ಮೇಲೆ ಎಂಗೇಜ್ಮೆಂಟ್ ಮಾಡಿಕೊಂಡ ಜಗಪ್ಪ ಹಾಗೂ ಸುಶ್ಮಿತಾ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram