ಹಿಂದಿನ ಕಾಲದಲ್ಲಿ ಅಡುಗೆ ಮಾಡಲು ಕಟ್ಟಿಗೆ ಒಲೆಯನ್ನು ಬಳಸುತ್ತಿದ್ದರು. ಈಗ ಎಲ್ಲರ ಮನೆಯಲ್ಲಿ LPG ಸಿಲೆಂಡರ್ ಗ್ಯಾಸ್ ಇದೆ. ಸುಲಭವಾಗಿ ಹೋಗೆ ರಹಿತವಾಗಿ ಅಡುಗೆ ಮಾಡಲು ಬಹಳ ಉಪಯೋಗ ಆಗುತ್ತದೆ. ನೀವು ಪ್ರತಿ ತಿಂಗಳು ಅಥವಾ ನಿಮ್ಮ ಮನೆಯಲ್ಲಿ ಸಿಲೆಂಡರ್ ಖಾಲಿ ಅದ ತಕ್ಷಣ ಮತ್ತೊಂದು ಸಿಲೆಂಡರ್ ಬುಕ್ ಮಾಡುತ್ತೀರಿ. ಆದರೆ ನೀವು ಸಿಲೆಂಡರ್ ಬುಕ್ ಮಾಡುವಾಗ ವರ್ಷಕ್ಕೆ ಏಷ್ಟು ಸಿಲೆಂಡರ್ ಬುಕ್ ಮಾಡಬಹುದು ಅಥವಾ ನಾವು ಏಷ್ಟು ಸಿಲೆಂಡರ್ ಬಳಸಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ. ಇಂಧನ ಇಲಾಖೆಯು ಸಿಲೆಂಡರ್ ಬಳಕೆಗೆ ಮಿತಿಯನ್ನು ತಿಳಿಸಿದೆ. ವರ್ಷಕ್ಕೆ ಏಷ್ಟು ಸಿಲೆಂಡರ್ ಬಳಸಬಹುದು ಹಾಗೂ ಹೆಚ್ಚುವರಿ ಸಿಲೆಂಡರ್ ಬೇಕಾದಲ್ಲಿ ಏನು ಮಾಡಬೇಕು ಎಂದು ನೋಡೋಣ.
ವರ್ಷಕ್ಕೆ ಒಂದು ಖಾತೆಗೆ ಏಷ್ಟು ಸಿಲೆಂಡರ್ ಸಿಗುತ್ತದೆ?
ಪ್ರತಿ ಮನೆಯಲ್ಲಿ ಹೊಸದಾಗಿ LPG ಗ್ಯಾಸ್ ಬುಕ್ ಮಾಡುವಾಗ ನಿಮಗೆ ಪಾಸ್ ಬುಕ್ ನೀಡಲಾಗುತ್ತದೆ. ಅದರಲ್ಲಿ ನಿಮ್ಮ ಹೆಸರು ವಿಳಾಸ ಹಾಗೂ ಪ್ರತಿ ತಿಂಗಳು ನೀವು ಸಿಲೆಂಡರ್ ತೆಗೆದುಕೊಂಡ ದಿನಾಂಕ ಹಾಗೂ ಬೆಲೆಯೂ ಇರುತ್ತದೆ. 2022 ನೇ ಸಾಲಿನಲ್ಲಿ ಒಂದು LPG connection ಗೆ ಗರಿಷ್ಠ ಸಿಲೆಂಡರ್ ಬುಕಿಂಗ್ ಮಾಡುವ ಮಿತಿಯನ್ನು ಕೇಂದ್ರ ಸರ್ಕಾರವು ತಿಳಿಸಿದೆ. ಅದರ ಪ್ರಕಾರ ಒಂದು ಮನೆಗೆ ವರುಷಕ್ಕೆ ಗರಿಷ್ಠ 15 ಗ್ಯಾಸ್ ಸಿಲೆಂಡರ್ ಸಿಗುತ್ತದೆ. ಸಬ್ಸಿಡಿ ಪಡೆಯುವ ಫಲಾನುಭವಿಗಳು 12 ಸಿಲೆಂಡರ್ ಗೆ ಮಾತ್ರ ಸಬ್ಸಿಡಿ ಪಡೆಯುತ್ತಾರೆ.
ಹೆಚ್ಚುವರಿ ಸಿಲೆಂಡರ್ ಬೇಕಾದರೆ ಅನುಸರಿಸುವ ಕ್ರಮಗಳು ಏನು?: ಮನೆಯಲ್ಲಿ ಮದುವೆ, ಗೃಹ ಪ್ರವೇಶ, ಅಥವಾ ಪಾರ್ಟಿ ಗಳು ಇದ್ದರೆ ಹೆಚ್ಚಿನ ಸಿಲೆಂಡರ್ ಅವಶ್ಯಕತೆ ಇರುತ್ತದೆ. ಹಾಗಿದ್ದಾಗ ಏನು ಮಾಡಬೇಕು ಎಂಬ ಬಗ್ಗೆ ಸಚಿವಾಲಯವು ತಿಳಿಸಿರುವ ಮಾಹಿತಿಯ ಪ್ರಕಾರ ಸಿಲೆಂಡರ್ ಅವಶ್ಯಕತೆಗೆ ಸರಿಯಾದ ಕಾರಣವನ್ನು ಗ್ಯಾಸ್ ಏಜೆಂಟ್ ಗೆ ತಿಳಿಸಬೇಕು. ನೀವು ನೀಡಿದ ಮಾಹಿತಿಯನ್ನು ಪರಿಶೀಲಿಸಿ ನಿಮಗೆ ಹೆಚ್ಚುವರಿ ಸಿಲೆಂಡರ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ LPG ಸಿಲಿಂಡರ್ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ
ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿಯನ್ನು 2025 ರ ವರೆಗೆ ಘೋಷಿಸಿದ ಸರ್ಕಾರ :-
ಉಜ್ವಲ ಯೋಜನೆಯಲ್ಲಿ 200 ರೂಪಾಯಿ ನೀಡುತ್ತಿದ್ದ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಅಕ್ಟೋಬರ್ 2023 ನಲ್ಲಿ 100 ರೂಪಾಯಿ ಹೆಚ್ಚುವರಿಯಾಗಿ ನೀಡಿ ಒಟ್ಟು 300 ರೂಪಾಯಿ ಸಬ್ಸಿಡಿ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಇತ್ತೀಚಿಗೆ ಪತ್ರಿಕೆ ಪ್ರಕಟಣೆಯಲ್ಲಿ ಸಚಿವ ಪಿಯೂಷ್ ಗೋಯೆಲ್ ಹೇಳಿರುವ ಮಾಹಿತಿಯ ಪ್ರಕಾರ 14.2 ಕೆಜಿ LPG ಸಿಲಿಂಡರ್‌ಗೆ ನೀಡುತ್ತಿದ್ದ 300 ರೂಪಾಯಿ ದರವನ್ನು ಮಾರ್ಚ್ 2025 ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಈ ಯೋಜನೆಯಿಂದ ಸಾವಿರಾರು ಬಡ ಕುಟುಂಬದ ಮನೆಗಳಲ್ಲಿ LPG ಸಿಲೆಂಡರ್ ಕಡಿಮೆ ದರದಲ್ಲಿ ದೊರೆಯುವಂತೆ ಆಗಿದೆ. ಮಹಿಳೆಯರ ಆರೋಗ್ಯ ಮತ್ತು ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆಯು ಬಹಳ ಕೊಡುಗೆ ನೀಡಿದೆ. ಪರಿಸರ ರಕ್ಷಣೆಯ ಜೊತೆಗೆ ಮಹಿಳೆಯರ ಸಮಯ ಉಳಿತಾಯ ಆಗುತ್ತದೆ. ಇದರಿಂದ ಮಹಿಳೆಯರು ಅಡುಗೆ ಮನೆಯಿಂದ ಹೊರಗಿನ ಪ್ರಪಂಚದ ಜ್ಞಾನವನ್ನು ಪಡೆಯಲು ಸಾಧ್ಯ. ಪ್ರತಿ ಕುಟುಂಬದ ಆರ್ಥಿಕವಾಗಿ ಸಹಾಯ ನೀಡುವ ಜೊತೆಗೆ ದೇಶದ ಪ್ರಗತಿಗೆ ಇನ್ನೊಂದು ಹೆಜ್ಜೆಯಿಟ್ಟು ದೇಶವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ.
ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ 300 ರೂ ಸಬ್ಸಿಡಿ ಹಾಗೂ ಯೋಜನೆಯನ್ನು 2025 ರ ವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ