ಕಾಂಗ್ರೆಸ್ ಸರಕಾರ ಅಧಿಕಾರ ಬರುವ ಮುಂಚೆ 5 ಯೋಜನೆಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಿತ್ತು . ಅದರಂತೆಯೇ ಈಗ ಅನ್ನಭಾಗ್ಯ , ಗೃಹಲಕ್ಷ್ಮಿ ,ಹಾಗೂ ಮಹಿಳೆಯರು ಉಚಿತ ಬಸ್ ಪ್ರಯಾಣ ಈಗಾಗಲೇ ಜಾರಿಯಲ್ಲಿ ಇದೆ. ಈಗ ಯುವನಿಧಿ ಯೋಜನೆಗೆ ಅಪ್ಲೈ ಮಾಡಲು ಸೂಚಿಸಿದೆ.
ಏನಿದು ಯುವನಿಧಿ ಯೋಜನೆ?: ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಯುವಜನರಿಗೆ ಉದ್ಯೋಗ ಸಿಗುವಲ್ಲಿಯವರೆಗೆ ಅವರ ವಿದ್ಯಾರ್ಹತೆಯ ಮೇಲೆ ಅವರಿಗೆ ಸರಕಾರ ಪ್ರತಿ ತಿಂಗಳು ಹಣವನ್ನು ನೀಡುತ್ತದೆ. ಡಿಪ್ಲೊಮಾ ಓದಿದವರಿಗೆ 1500 ರೂಪಾಯಿ ಹಾಗೂ ಡಿಗ್ರಿ ಪಾಸ್ ಆದವರಿಗೆ 3000 ರೂಪಾಯಿಗಳನ್ನು ನೀಡುತ್ತದೆ.
ಏಷ್ಟು ಅಪ್ಲಿಕೇಶನ್ ರಿಜೆಕ್ಟ್ (application reject) ಆಗಿದೆ?: ಈಗಾಗಲೇ ರಾಜ್ಯದ ಯುವಕರು ಈ ಯೋಜನೆಗೆ ಅರ್ಜಿ ಹಾಕುತ್ತಾ ಇದ್ದಾರೆ. ಕೆಲ ಮೂಲಗಳ ಪ್ರಕಾರ 80,000 ಜನರು ಅಪ್ಲಿಕೇಶನ್ ಹಾಕಿದ್ದಾರೆ. ಆದರೆ ಯೋಜನೆಗೆ ಇರುವ ಮಾನದಂಡಗಳನ್ನು ಆಧರಿಸಿ ಕೇವಲ 3,000 ಜನರಿಗೆ ಮಾತ್ರ ಹಣ ನೀಡುತ್ತದೆ ಎಂಬ ಸುದ್ದಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಹಾಕಲು ಇರುವ ಮಾನದಂಡಗಳು :-
- 2023 ನೇ ಸಾಲಿನಲ್ಲಿ ಪದವಿ (Degree) ಅಥವಾ ಡಿಪ್ಲೊಮಾ (diploma) ಪದವಿ ಪೂರ್ಣಗೋಳಿಸಿರಬೇಕು.
- ತೇರ್ಗಡೆ ಹೊಂದಿದ ಆರು ತಿಂಗಳುಗಳ ಕಾಲ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ( goverment or private company ) ಉದ್ಯೋಗ ದೊರಕದೆ ಇದ್ದರೆ ನೀವು ಅಪ್ಲಿಕೇಶನ್ ಹಾಕಬಹುದು.
- ಯಾವುದೇ ಬ್ಯುಸಿನೆಸ್ ( business ) ಮಾಡದೆ ಇದ್ದವರು.
- ವಿದ್ಯಾಭ್ಯಾಸ ಮುಂದುವರೆಸದೆ ಇದ್ದವರು. ಅಂದರೆ ಮಾಸ್ಟರ್ಸ್ ( masters ) ಅಥವಾ ಯಾವುದೇ ಶಾರ್ಟ್ ಟರ್ಮ್ ಕೋರ್ಸ್ ( short term cource) ಗೆ ಜಾಯಿನ್ ( join ) ಆಗದೆ ಇದ್ದವರು.
- ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ಕರ್ನಾಟಕದ ನಿವಾಸಿ ಎಂಬ ದಾಖಲೆ ಹೊಂದಿರಬೇಕು.
- ತೇರ್ಗಡೆ ಹೊಂದಿರುವ ಬಗ್ಗೆ ನಿಖರವಾದ ದಾಖಲೆಗಳನ್ನು ನೀಡಬೇಕು ಅಂದರೆ ನಿಮ್ಮ ಪ್ರಮಾಣಪತ್ರದ ಮೂಲಪ್ರತಿಯನ್ನು ಸ್ಕ್ಯಾನ್ ಮಾಡಿ ಹಾಕಬೇಕು.
- ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕು. ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಯ ಇ-ಕೆ ವೈ ಸಿ (ekyc) ಆಗಿರಬೇಕು.
- ವಿಶ್ವವಿದ್ಯಾಲಯಗಳಿಂದ ನೀಡಿದ ಪ್ರಮಾಣ ಪತ್ರ ಆಗಿರಬೇಕು . ಯಾವುದೇ ಸುಳ್ಳು ಪ್ರಮಾಣಪತ್ರ ಆಗಿದ್ದಲ್ಲಿ ಪರಿಗಣಿಸುವುದಿಲ್ಲ.
- ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಅಂಕಪಟ್ಟಿ ಲಗತ್ತಿಸಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ( apply ) ಮಾಡುವ ವಿಧಾನ ಹೇಗೆ?
ನೀವು ಅಪ್ಲಿಕೇಶನ್ ( application ) ಹಾಕಲು https://sevasindhu.karnataka.gov.in ಗೆ ಹೋಗಿ ಹತ್ತಿರದ ಗ್ರಾಮ್ ಒನ್ ( ಗ್ರಾಮ್ ಒನ್ ) ಕೇಂದ್ರ ಅಥವಾ ಬೆಂಗಳೂರು ಕೇಂದ್ರಗಳಿಗೆ ಹೋಗಿ ಅಗತ್ಯ ಪ್ರಮಾಣಪತ್ರಗಳನ್ನು ನೀಡಿ, ನಿಮ್ಮ ಆಧಾರ್ ಕಾರ್ಡ್, ರೇಶನ್ ಕಾರ್ಡ್, ನಿಮ್ಮ ಬ್ಯಾಂಕ್ ಖಾತೆಯ ವಿವರ, ನಿಮ್ಮ ಎಜುಕೇಷನ್ ಸರ್ಟಿಫಿಕೇಟ್ (education certificate ) ಗಳನ್ನು ತೆಗೆದು ಕೊಂಡು ಹೋಗಿ ಅಪ್ಲಿಕೇಶನ್ ಹಾಕಬಹುದು. ನೀವು ನಿರುದ್ಯೋಗಿ ಎಂಬ ಬಗ್ಗೆ ಯಾವುದೇ ದಾಖಲೆ ನೀಡಬೇಕಾಗಿಲ್ಲ. ನೀವು ಪದವಿ ಪಡೆದು 6 ತಿಂಗಳಿನ ಅವಧಿಯಲ್ಲಿ ನಿಮಗೆ ಯಾವುದೇ ಉದ್ಯೋಗ ಸಿಗದೇ ಇದ್ದರೆ ನೀವು ಅರ್ಜಿ ಹಾಕಬಹುದು. ಅದಕ್ಕಾಗಿಯೇ ನಿಮ್ಮ ಆಧಾರ್ ಕಾರ್ಡ್ ( aadhar card ) ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು.
ಇದನ್ನೂ ಓದಿ: ಉಜ್ವಲ 2.0 ಯೋಜನೆಯಲ್ಲಿ ಉಚಿತ ಸಿಲೆಂಡರ್ ಮತ್ತು ಗ್ಯಾಸ್ ಒಲೆಯನ್ನು ಪಡೆಯಲು ಈಗಲೇ ಅಪ್ಲೈ ಮಾಡಿ