ಇಂದು ಬೆಳಗ್ಗೆ 11 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಆಗಿದೆ. ರಾಜ್ಯದಲ್ಲಿ ಒಟ್ಟು 5,52,690 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಿದ್ಯಾರ್ಥಿಗಳು ಏನಾದರೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಆಗಿದ್ದರೆ ಮಂಡಳಿಯು ಅಧಿಸೂಚನೆಯನ್ನು ಹೊರಡಿಸಿದೆ.
ಮರು ಮೌಲ್ಯಾಮಾಪನಕ್ಕೆ ಅರ್ಜಿ ಸಲ್ಲಿಸುವ ಅವಧಿ :- ಮರು ಮೌಲ್ಯಾಮಾಪನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಏಪ್ರಿಲ್ 10 ರಿಂದ ಏಪ್ರಿಲ್ 20 ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಮರು ಮೌಲ್ಯಾಮಾಪನಕ್ಕೆ ಅರ್ಜಿ ಸಲ್ಲಿಸುವುದೂ ಏಕೆ?:
ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಹಾಗೂ ಕೀ ಉತ್ತರ ಪತ್ರಿಕೆಯನ್ನು ನೋಡಿ ನನಗೆ ಇಷ್ಟು ಅಂಕ ಬರುತ್ತದೆ ಎಂದು ಒಂದು ಅಂದಾಜು ಮಾಡಿರುತ್ತಾರೆ. ಅವರ ಅಂದಾಜಿನ ಪ್ರಕಾರ ಮಾರ್ಕ್ಸ್ ಬಾರದೆ ವಿದ್ಯಾರ್ಥಿ ಫೇಲ್ ಆಗಿದ್ದರೆ ಅಥವಾ ಅತೀ ಕಡಿಮೆ ಅಂಕ ಬಂದಿದ್ದರೆ ಇಲ್ಲವೇ ಒಂದು ಪರ್ಸಂಟೇಜ್ ಗಿಂತ ಹೆಚ್ಚಿನ ಮಾರ್ಕ್ಸ್ ಗಳಿಸುತ್ತಿರಿ ಎಂಬ ನಂಬಿಕೆ ನಿಮಗೆ ಇದ್ದರೆ ನೀವು ಮರು ಮೌಲ್ಯಾಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಸ್ಟೆಪ್ 1:- scan ಪ್ರತಿ ತರಿಸಿಕೊಳ್ಳಿ :- ಮೊದಲು ನೀವು ಸ್ಕ್ಯಾನ್ ಪ್ರತಿಯನ್ನು ತರಿಸಿಕೊಳ್ಳಬೇಕು. ಸ್ಕ್ಯಾನ್ ಪ್ರತಿ ಬೇಕು ಎಂದು ನೀವು ಅರ್ಜಿ ಸಲ್ಲಿಸಬೇಕು.
- ಸ್ಟೆಪ್ 2:- ನೀವು ನಿಮ್ಮ ಸ್ಕ್ಯಾನ್ ಉತ್ತರ ಪತ್ರಿಕೆಯನ್ನು ಪಡೆದುಕೊಂಡ ನಂತರ ನೀವು ನಿಮ್ಮ ಅಂಕಗಳನ್ನು ಯಾವುದಾದರೂ ಉತ್ತರಕ್ಕೆ ಹೆಚ್ಚು ಮಾರ್ಕ್ಸ್ ಬರುತ್ತದೆಯೇ ಎಂದು ಯೋಚಿಸಬೇಕು.
- ಸ್ಟೆಪ್ 3:- ನಿಮಗೆ ಹೆಚ್ಚು ಅಂಕ ಬರುವ ನಿರೀಕ್ಷೆ ಇದ್ದರೆ ನೀವು ಆನ್ಲೈನ್ ಮೂಲಕ ಅಥವಾ ಶಾಲಾ ಶಿಕ್ಷಕರ ಸಹಾಯದ ಮೂಲಕ ನೀವು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.
ಸ್ಕ್ಯಾನ್ ಪ್ರತಿ ಪಡೆಯಲು ಕೊನೆಯ ದಿನಾಂಕ ಹಾಗೂ ಶುಲ್ಕದ ವಿವರ :- ಸ್ಕ್ಯಾನ್ ಪ್ರತಿ ಪಡೆಯಲು ನೀವು ಏಪ್ರಿಲ್ 16 ರ ವರೆಗೆ ಅವಕಾಶ ಇರುತ್ತದೆ. ನಿಗದಿತ ಸಮಯದ ಒಳಗೆ ನೀವು ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ತರಿಸಿಕೊಳ್ಳಿ. ಸ್ಕ್ಯಾನ್ ಪ್ರತಿ ಪಡೆಯಲು ಅರ್ಜಿ ಶುಲ್ಕವನ್ನು ಕಟ್ಟಬೇಕು. ನೀವು ಒಂದು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಲು 530 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಶುಲ್ಕವನ್ನು ಆನ್ಲೈನ್ ಅಥವಾ ಆಫ್ಲೈನ್ ಚಲನ್ ಮೂಲಕ ಪಾವತಿಸಬೇಕು.
ಮರು ಮೌಲ್ಯಮಾಪನದ ವಿವರಗಳು :-
ಸ್ಕ್ಯಾನ್ ಪ್ರತಿ ಪಡೆದ ನಂತರ ನಿಮಗೆ ಹೆಚ್ಚಿಗೆ ಅಂಕ ಬರಬೇಕು ಎಂದರೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತಿರಿ. ನೀವು ಒಂದು ವಿಷಯದ ಮರು ಮೌಲ್ಯಮಾಪನ ಮಾಡಿಸಬೇಕು ಎಂದರೆ 1670 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ನೀವು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ನಂತರ ನಿಮಗೆ ಬರುವ ಅಂಕಗಳೇ ನಿಮ್ಮ ಮಾರ್ಕ್ಸ್ ಕಾರ್ಡ್ ನಲ್ಲಿ ಬರುತ್ತದೆ. ನೀವು ಅರ್ಜಿ ಸಲ್ಲಿಸುವ ಮೊದಲು ಹೆಚ್ಚು ಅಂಕಗಳು ಬಂದಿದ್ದು ಮರು ಮೌಲ್ಯಮಾಪನದ ನಂತರ ಕಡಿಮೆ ಅಂಕ ಬಂದರೆ ಅದಕ್ಕೆ ಮಂಡಳಿಯು ಜವಾಬ್ದಾರಿ ಆಗಿರುವುದಿಲ್ಲ. ಅದರಿಂದ ಮೌಲ್ಯಮಾಪನದ ಅರ್ಜಿ ಸಲ್ಲಿಸುವ ಮೊದಲು ಬಹಳ ಯೋಚಿಸಬೇಕು. ಮೌಲ್ಯಮಾಪನದ ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಮರು ಮೌಲ್ಯಮಾಪನ ಅಥವಾ ಮರು ಅಂಕ ಎಣಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆ ಹೊರಡಿಸಿದ ಅಧಿಸೂಚನೆ ನೋಡಿ ಅಥವಾ ನಿಮ್ಮ ಶಿಕ್ಷಕರ ಬಳಿ ಹೆಚ್ಚಿನ ಮಾಹಿತಿ ಪಡೆಯಿರಿ.
ಇದನ್ನೂ ಓದಿ: ಕೇವಲ 9,499 ಕ್ಕೆ Redmi 5G ಫೋನ್, ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ!
ಇದನ್ನೂ ಓದಿ: ಮಹಿಳೆಯರು ಈ ಯೋಜನೆಯಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ 30,000 ಲಾಭ ಪಡೆಯಬಹುದು.