FID ನಂಬರ್ ಪಡೆಯೋದು ಹೇಗೆ? ಏನ್ ಮಾಡ್ಬೇಕು? ಮನೆಯಲ್ಲೇ ಕೂತು FID ನಂಬರ್ ತಗೋಬಹುದಾ?

ಎಫ್ ಐ ಡಿ ಅಂತ ಕರೆಯುವ ಈ ತಂತ್ರಾಂಶಕ್ಕೆ ಫ್ರೂಟ್ಸ್ ಅಂತನು ಕರಿತಾರೆ. ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯುನಿಫೈಡ್ ಬೆನಿಫಿಶಿಯರಿ ಇನ್ಫಾರ್ಮಶನ್ ಸಿಸ್ಟಮ್ ಅಂತಾನೂ ಕರೀತಾರೆ.. ಅಂದ್ರೆ ಈ ಒಂದು ತಂತ್ರಾಂಶದಿಂದ ರೈತರ ಹೆಸರಿನಲ್ಲಿರುವ ಎಲ್ಲ ಜಮೀನಿನ ಸರ್ವೆ ನಂಬರ್ ವಿವರ ಮತ್ತು ಅವರ ಬ್ಯಾಂಕ್ ಖಾತೆಯ ವಿವರವನ್ನ ದಾಖಲಾತಿ ಮಾಡಿದಾಗ ಎಫ್ಐಡಿ ನಂಬರ್ ಬರುತ್ತದೆ. ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಬೆಳೆ ಸಾಲ ಪಡಿಯಲು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು FID ನಂಬರ್ ಅಗತ್ಯವಾಗಿರುತ್ತದೆ. ಹೌದು ರಾಜ್ಯದ ರೈತನ ಜಮೀನಿನ ವಿವರ ಮತ್ತು ಬ್ಯಾಂಕ್ ಖಾತೆ ವಿವರವನ್ನು ರಾಜ್ಯದ ಕೃಷಿ ಇಲಾಖೆಯು ಡಿಜಿಟಲ್ ತಂತ್ರಾಂಶದ ಮೂಲಕ ಸಂಗ್ರಹಣೆ ಮಾಡಿ ಪ್ರತಿಯೊಬ್ಬ ರೈತನಿಗೂ ಒಂದು ರೀತಿಯ ಗುರುತಿನ ನಂಬರನ್ನು ನೀಡಿರುತ್ತದೆ ಇದನ್ನ ಎಫ್ ಐ ಡಿ ನಂಬರ್ ಅಂತ ಕರೀತಾರೆ. ಈ ಒಂದು ತಂತ್ರಾಂಶಕ್ಕೆ ಫ್ರೂಟ್ಸ್ ಅಂತಾನೂ ಕರೀತಾರೆ.

WhatsApp Group Join Now
Telegram Group Join Now

ಈಗಾಗಲೇ ನಮ್ಮ ರಾಜ್ಯದಲ್ಲಿ 90ರಷ್ಟು ರೈತರು ಈ ಒಂದು ತಂತ್ರಾಂಶದ ಸಹಾಯವನ್ನು ಪಡೆದು ತಮ್ಮದೇ ಎಫ್.ಐ.ಡಿ ನಂಬರ್ ಅನ್ನು ಹೊಂದಿದ್ದಾರೆ ಹಾಗಾದ್ರೆ ಏನಿದು ಎಫ್ ಐ ಡಿ ನಂಬರ್ ಅದನ್ನು ಪಡೆದುಕೊಳ್ಳುವುದು ಹೇಗೆ? ಎಲ್ಲಿ ಹೋಗಿ ಎಫ್ ಐ ಡಿ ನಂಬರನ್ನು ಪಡೆದುಕೊಳ್ಳಬೇಕು? ಅದರಿಂದಾಗುವ ಉಪಯೋಗಗಳು ಏನು? ಎಲ್ಲವನ್ನ ನೋಡ್ತಾ ಹೋಗೋಣ ಬನ್ನಿ.,

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ನವೆಂಬರ್ ನಂತರದಿಂದ ಈ ಮೂರು ರಾಶಿಯವರಿಗೆ ಅಮೃತ ಸಿದ್ದಿ ಯೋಗ ಪ್ರಾರಂಭವಾಗಲಿದೆ ನಿಮ್ಮ ರಾಶಿಗೂ ಕೂಡ ಇದೆಯಾ ಅಂತ ನೋಡಿಕೊಳ್ಳಿ. 

ಕೇವಲ ಆಧಾರ್ ನಂಬರ್ ಹಾಕಿ ಈ ಕೆಲಸ ಮಾಡಿ ಸಾಕು

ಹೌದು ಈ ಒಂದು FID ನಂಬರ್ ರೈತರಿಗೆ ಬಹಳಷ್ಟು ಅನುಕೂಲ ಕಾರ್ಯ ಅಂತ ಹೇಳಬಹುದು ರೈತರಿಗೆ ಬೆಳೆವಿಮೆ ಇರಬಹುದು ಅಥವಾ ಬೆಳೆ ಸಾಲ ಇರಬಹುದು ಇಲ್ಲವೇ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಸಿಕ್ತಕಂತ ಸರ್ಕಾರಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಅಂತ ಹೇಳಿದ್ರೆ ಪ್ರತಿಯೊಬ್ಬ ರೈತರು ಕೂಡ ಪಡೆದುಕೊಂಡಿರಬೇಕಾಗುತ್ತದೆ. ಈ ಎಫ್ ಐ ಡಿ ನಂಬರ್ ಇದ್ರೆ ಸರ್ಕಾರದಿಂದ ರೈತರಿಗೆ ಸಿಗ್ಬೇಕಾದ ಪ್ರತಿಯೊಂದು ಸೌಲಭ್ಯವನ್ನು ಬಹಳ ಸುಲಭವಾಗಿ ರೈತರು ಪಡೆದುಕೊಳ್ಳಬಹುದು. ಹೀಗಾಗಿ ರಾಜ್ಯ ಸರ್ಕಾರ ಪ್ರತಿಯೊಬ್ಬ ರೈತನಿಗೂ ಕೂಡ ಎಫ್ ಐ ಡಿ ನಂಬರನ್ನು ಮಾಡಿಸಿಕೊಳ್ಳಬೇಕು ಅಂತ ಆಗಾಗ ಕರೆ ಕೊಡ್ತಲೆ ಇರುತ್ತದೆ. ಇನ್ನು ಈಗಾಗಲೇ 90ರಷ್ಟು ರೈತರು ಎಫ್ ಐ ಡಿ ನಂಬರ್ ಅನ್ನು ಪಡೆದುಕೊಂಡಿದ್ದಾರೆ.

ಇನ್ನುಳಿದಿರ್ತಕ್ಕಂತ ರೈತ್ರು ಎಫ್ ಐ ಡಿ ನಂಬರನ್ನು ಪಡೆದುಕೊಂಡರೆ ಸರ್ಕಾರದಿಂದ ಸಾಕಷ್ಟು ಸೌಲಭ್ಯವನ್ನು ಪಡೆದುಕೊಳ್ಳಬಹುದು ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಒಂದಿದ್ದರೆ ಸಾಕು ನೀವು ಬಹಳ ಸುಲಭವಾಗಿ ಎಫ್ ಐಡಿ ನಂಬರ್ ಅನ್ನು ಪಡೆದುಕೊಳ್ಳಬಹುದು. ಇದಕ್ಕೆ ನೀವು ಮೊದಲಿಗೆ ಮಾಡಬೇಕಾಗಿರೋದು ಇಷ್ಟೇ FRIUTS ಈ ಒಂದು ವೆಬ್ಸೈಟ್ ಗೆ ನೀವು ಹೋಗಿ ಕ್ಲಿಕ್ ಮಾಡಬೇಕು ಅಲ್ಲಿ ನೀವು ಎಫ್ ಐ ಡಿ ನಂಬರ್ ತೆಗೆದುಕೊಳ್ಳೋಕೆ ಒಂದು ಆಪ್ಶನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಆಧಾರ್ ಕಾರ್ಡ್ ನಂಬರನ್ನ ಕೇಳುತ್ತೆ ಆಗ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಿ ಅಲ್ಲಿ ಕೇಳುವ ಕೆಲವೊಂದಷ್ಟು ಮಾಹಿತಿಯನ್ನು ಕೊಟ್ಟರೆ ಸಾಕು ನಿಮಗೆ ಎಫ್ ಐ ಡಿ ನಂಬರ್ ಜನರೇಟ್ ಆಗುತ್ತೆ.

ಡೈರೆಕ್ಟ್ ವೆಬ್ ಸೈಟ್ ಲಿಂಕ್: https://fruitspmk.karnataka.gov.in/MISReport/GetDetailsByAadhaar.aspx

ಅದು ಮೊದಲಿಗೆ ನಿಮ್ಮ ರಿಜಿಸ್ಟರ್ ಆಗಿರತಕ್ಕಂತ ಮೊಬೈಲ್ ನಂಬರ್ ಅನ್ನು ಹಾಕಬೇಕು ಆನಂತರ ನಿಮ್ಮ ಆಧಾರ್ ನಂಬರ್ ಅನ್ನು ಕೇಳುತ್ತೆ ಆಧಾರ್ ನಂಬರ್ ನ ಹಾಕಿದ ನಂತರ ಕೆಲವೊಂದು ವೈಯಕ್ತಿಕ ಮಾಹಿತಿಯನ್ನು ನೀವು ಫೀಲ್ ಮಾಡಬೇಕಾಗುತ್ತೆ ಎಲ್ಲವೂ ಆದಮೇಲೆ ನೀವು ಓಕೆ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಎಫ್ ಐಡಿ ನಂಬರ್ ಜನರೇಟ್ ಆದಂಗೆ ಲೆಕ್ಕ. ಈ ಒಂದು fid ನಂಬರ್ ಜೆನೆರೇಟ್ ಆಯ್ತು ಅಂತ ಅಂದ್ರೆ ನೀವು ಸಾಕಷ್ಟು ಸೌಲಭ್ಯವನ್ನು ಪಡೆದುಕೊಳ್ಳಬಹುದು ಬೆಳೆ ವಿಮೆ, ಬೆಳೆ ಸಾಲವನ್ನು ಪಡೆದುಕೊಳ್ಳಬಹುದು ಅಥವಾ ಬಿಟ್ಟು ಹೋಗಿರತಕ್ಕಂತ ನಿಮ್ಮ ಜಮೀನಿನ ನಂಬರನ್ನು ಕೂಡ ನೀವು ಸೇರಿಸಿಕೊಳ್ಳಬಹುದು.

ನೀವು ಯಾವುದೇ ರೀತಿಯ ಮಾಹಿತಿಗಳನ್ನಾದ್ರೂ ಕೂಡ ಇಲ್ಲಿ ಫೀಡ್ ಮಾಡಿಕೊಳ್ಳಬಹುದು ಹೀಗಾಗಿ ಎಫ್ಐಡಿ ನಂಬರ್ ಅನ್ನೋದು ಬಹಳಷ್ಟು ಮುಖ್ಯವಾಗಿರುತ್ತೆ ಹೀಗಾಗಿ ಇನ್ನು ಕೂಡ fid ನಂಬರನ್ನ ಪಡೆದುಕೊಳ್ಳದೆ ತಕ್ಕಂತ ರೈತರು ಈಗಲೇ ಎಫ್ ಐ ಡಿ ನಂಬರನ್ನು ಪಡೆದುಕೊಳ್ಳಬಹುದು ನೀವು ಮನೆಯಲ್ಲಿ ಕುಳಿತು ಮೊಬೈಲ್ ಮೂಲಕವೇ FID ನಂಬರನ್ನು ಈಗ ಕೊಟ್ಟಿರತಕ್ಕಂಥ ವೆಬ್ಸೈಟ್ ಮೂಲಕ ಪಡೆಯಬಹುದು ಅಥವಾ ಸಂಬಂಧಪಟ್ಟ ಇಲಾಖೆಯಲ್ಲಿಯೂ ಹೋಗಿ ನೀವು ಎಫ್ಐ ಡಿ ನಂಬರನ್ನು ಮಾಡಿಸಿಕೊಳ್ಳಬಹುದು.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram