ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ಎಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ SSLC ಫಲಿತಾಂಶ ಬರುವ ಬಗ್ಗೆ ವರದಿ ಆಗಿದೆ. ವೆಬ್ಸೈಟ್ ಮೂಲಕ ಮನೆಯಲ್ಲಿ ಕುಳಿತು ಫಲಿತಾಂಶ ನೋಡುವುದು ಹೇಗೆ ಎಂಬ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ವೆಬ್ಸೈಟ್ ಮೂಲಕ ಫಲಿತಾಂಶ ನೋಡುವುದು ಹೇಗೆ?
- ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಣೆ ಮಾಡಲು ಮೊದಲು ಕೆಳಗಿನ ಮೂರು ವೆಬ್ಸೈಟ್ ಗಳಲ್ಲಿ ಯಾವುದೇ ಒಂದು ಲಿಂಕ್ ಓಪನ್ ಮಾಡಿ.
- ಫಲಿತಾಂಶಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ SSLC Exam 1 2024 Result ‘ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
- ನಂತರ ಫಲಿತಾಂಶ ವೀಕ್ಷಣೆ ಮಾಡಲು ನಿಮ್ಮ ಹಾಲ್ ಟಿಕೆಟ್ ನಂಬರ್ ಹಾಕಿ submit ಬಟನ್ ಕ್ಲಿಕ್ ಮಾಡಿದರೆ ನಿಮ್ಮ SSLC ಅಂಕಪಟ್ಟಿ ಓಪನ್ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SSLC ಅಂಕಪಟ್ಟಿಯನ್ನು downoad ಅಥವಾ ಪ್ರಿಂಟ್ ಕಾಪಿ ತೆಗೆದಿಟ್ಟುಕೊಳ್ಳಿ. ಉನ್ನತ ಶಿಕ್ಷಣದ ಅಡ್ಮಿಷನ್ ಮಾಡಿಸಲು ಅಥವಾ ನಿಮಗೆ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಬರುವ ಬರೆಗೆ ಯಾವುದೇ ದಾಖಲೆಗೆ ಇದು ಬಹಳ ಮುಖ್ಯ. ಹಾಗೆಯೇ ನೀವು revaluation ಗೆ ಹಾಕಬೇಕು ಎಂದರು ಸಹ ನೀವು ಈ ಅಂಕಪಟ್ಟಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SMS ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ?: ವೆಬ್ಸೈಟ್ ಮೂಲಕ ಫಲಿತಾಂಶ ನೋಡಲು ಸಾಧ್ಯವಿದೆ ಹಾಗೆ ನಿಮ್ಮ ಮೊಬೈಲ್ ಇಂದ KB10 ಎಂದು ಟೈಪ್ ಮಾಡಿ ನಿಮ್ಮ ಹಾಲ್ ಟಿಕೆಟ್ ನಂಬರ್ ನಮೂದಿಸಿ 56263 ಗೆ SMS ಕಳುಹಿಸಿದರೆ ನಿಮ್ಮ ಮೊಬೈಲ್ ನಿಮ್ಮ SSLC ಫಲಿತಾಂಶದ ಸಂಪೂರ್ಣ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ಪಡೆಯಲು ಸಾಧ್ಯವಿದೆ. ಈ ಸೌಲಭ್ಯವೂ ಹಳ್ಳಿ ಯಲ್ಲಿ ಇರುವ ಮಕ್ಕಳಿಗೆ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದೆ ಇರುವವರಿಗೆ ಈ ಸೇವೆ ಉಪಯೋಗ ಆಗುತ್ತದೆ.
ಇದನ್ನೂ ಓದಿ: SSLC ಫಲಿತಾಂಶದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.
ಶಾಲೆಯ ನೋಟಿಸ್ ಬೋರ್ಡ್ ನಲ್ಲಿ ಸಹ ಫಲಿತಾಂಶ ಪ್ರಕಟ ಆಗಲಿದೆ.
ವಿದ್ಯಾರ್ಥಿಗಳು ತಮ್ಮ ತಮ್ಮ ಹೈಸ್ಕೂಲ್ ಗೆ ತೆರಳಿ ಶಾಲಾ ನೋಟಿಸ್ ಬೋರ್ಡ್‌ನಲ್ಲಿ ರಿಸಲ್ಟ್ ವೀಕ್ಷಣೆ ಮಾಡಲು ಸಾಧ್ಯವಿದೆ. ನೀವು ಫಲಿತಾಂಶ ದಿನಾಂಕದಂದು ಮಧ್ಯಾಹ್ನದ ವೇಳೆಗೆ ಅಥವಾ ಮರುದಿನ ಬೆಳಗ್ಗೆ ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಫಲಿತಾಂಶ ನೀಡಲು ಅವಕಾಶ ಇರುತ್ತದೆ. ನಿಮ್ಮ ಶಾಲೆಯ ಪ್ರತಿಯೊಬ್ಬರ ಫಲಿತಾಂಶ ನೋಟಿಸ್ ಬೋರ್ಡ್ ನಲ್ಲಿ ಲಭ್ಯ ಇರುತ್ತದೆ.
2023-24 ಅನೇ ಸಾಲಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಿ ಸಂಖ್ಯೆ ಎಷ್ಟು? ರಾಜ್ಯದಲ್ಲಿ ಈ ವರ್ಷ ಒಟ್ಟು 8.9 ಲಕ್ಷ ವಿದ್ಯಾರ್ಥಿಗಳು 2023-24ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಬರೆದಿದದ್ದಾರೆ.
SSLC ಫಲಿತಾಂಶ ಬಿಡುಗಡೆ ಆದ ತಕ್ಷಣ ಕೆಲಮೊಮ್ಮೆ ವೆಬ್ಸೈಟ್ ಗಳು ನಿಧಾನ ಆಗುತ್ತವೆ . ಅಂತಹ ಸಮಯದಲ್ಲಿ ಹೆದರುವ ಅವಶ್ಯಕತೆ ಇಲ್ಲ. ನೀವು ಮೆಸೇಜ್ ಮಾಡಿ ಫಲಿತಾಂಶ ವೀಕ್ಷಣೆ ಮಾಡಬಹುದು. ಇಲ್ಲವೇ ಸ್ವಲ್ಪ ಸಮಯದ ವರೆಗೆ ಕಾದು ನಿಮ್ಮ ಫಲಿತಾಂಶ ನೋಡಲು ಸಾಧ್ಯವಿದೆ. ಫಲಿತಾಂಶ ಬಂದ ಕೂಡಲೇ ನೀವು ಕಡಿಮೆ ಅಂಕ ಬಂದಿದೆ ಅಥವಾ ಫೇಲ್ ಆದೆ ಎಂದು ನೊಂದುಕೊಳ್ಳಬೇಡಿ. ಯಾಕೆಂದರೆ ನಿಮಗೆ ಹೆಚ್ಚಿನ ಮಾರ್ಕ್ಸ್ ನಿರೀಕ್ಷೆ ಇದ್ದರೆ ನೀವು ಮತ್ತೆ ಮರು ಮೌಲ್ಯಮಾಪನ ಹಾಕಲು ಅವಕಾಶ ಇದೆ. ಹಾಗೆಯೇ ಮತ್ತೆ ಪರೀಕ್ಷೆ ಬರೆದು ಪಾಸ್ ಆಗಬಹುದು.
ಇದನ್ನೂ ಓದಿ: ಬರೋಬ್ಬರಿ 323KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಆಗಮಿಸುತ್ತಿದೆ; ಅದು ಕಡಿಮೆ ಬೆಲೆಯಲ್ಲಿ