ಯಾವುದೇ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡಿದರೂ ತಿಂಗಳಿಗೆ ಬರುವ ಸಂಬಳದಲ್ಲಿ ಸ್ವಲ್ಪ ಹಣ ಪಿಎಫ್ ಖಾತೆಗೆ ಕಡಿತವಾಗಿ ನಿಮ್ಮ ಕೈಯಲ್ಲಿ ಉಳಿದ ಹಣ ಸಿಗುತ್ತದೆ. ಮುಂದಿನ ಭವಿಷ್ಯಕ್ಕೆ ಸಹಾಯ ಆಗಲು ಈ ಹಣವೂ ಬಹಳ ಉಪಯೋಗ ಆಗಲಿದೆ. ಪ್ರತಿ ತಿಂಗಳು 1,000 ಅಥವಾ 2,000 ಹೀಗೆ ಕಡಿತವಾಗುವ ಹಣ ನಿಜವಾಗಿಯೂ ಪಿಎಫ್ ಖಾತೆಗೆ ಹೋಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ನೀವು ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಇಂದ ತಿಳಿಯಬಹುದು. ನಿಮ್ಮ ಪಿಎಫ್ ಖಾತೆಯ balance ಸಹ ನೀವು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪಿಎಫ್ ಖಾತೆಯ ಪೂರ್ಣ ವಿವರ ನೋಡುವುದು ಹೇಗೆ?: ನೀವು ಅಪ್ಲಿಕೇಶನ್ ಮೂಲಕ ಹಾಗೂ ಸಂದೇಶ ಕಳಿಸುವ ಮೂಲಕ ಹಾಗೂ EPFO portal ನಿಂದ ಪಿಎಫ್ ಖಾತೆಯ ವಿವರಗಳನ್ನು ಪಡೆಯಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಎಫ್ ವಿವರ ಪಡೆಯುವ ಹಂತಗಳು:-
- ಸ್ಟೆಪ್ 1. ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಉಮಾಂಗ್(UMANG) ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ನಿಮ್ಮ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆ ಹಾಗೂ password ಹಾಕಿ ಲಾಗ್ ಇನ್ ಆಗಿ.
- ಸ್ಟೆಪ್ 2:- ನಿಮ್ಮ UAN ನಂಬರ್ ಹಾಕಬೇಕು. ನಿಮ್ಮ ಖಾತೆಗೆ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿ.
- ಸ್ಟೆಪ್ 3:- ಅಪ್ಲಿಕೇಶನ್ ಬಲಭಾಗದಲ್ಲಿ ಸದಸ್ಯರ ಐಡಿ ಎಂಬ option ಕ್ಲಿಕ್ ಮಾಡಬೇಕು. ನಿಮ್ಮ ಇ ಪಾಸ್ಬುಕ್ ಡೌನ್ಲೋಡ್ ಮಾಡಿಕೊಳ್ಳಿ.
ಸಂದೇಶದ ಮೂಲಕ ಪಿಎಫ್ ಖಾತೆಯ ಮಾಹಿತಿ ಪಡೆಯಿರಿ
“EPFO UAN” ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ SMS ಕಳುಹಿಸಿ. ನಿಮಗೆ ಯಾವ ಭಾಷೆಯಲ್ಲಿ SMS ಪಡೆಯಬಹುದು. ನಿಮ್ಮ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಟೈಪ್ ಮಾಡಿ SMS ಕಳುಹಿಸಬೇಕು. ಉದಾಹರಣೆಗೆ ನಿಮಗೆ ಕನ್ನಡ ಭಾಷೆಯಲ್ಲಿ ವಿವರ ಬೇಕು ಎಂದರೆ “EPFO UAN KAN” ಎಂದು ಟೈಪ್ ಮಾಡಿ SMS ಕಳುಹಿಸಿ. ನೀವು ವಿವರಗಳನ್ನು ಪಡೆಯಲು UAN ಸಂಖ್ಯೆಯನ್ನು ನಿಮ್ಮ KYC ಗೆ ಲಿಂಕ್ ಮಾಡಬೇಕಾಗಿ ಇರುತ್ತದೆ.
ಪಿಎಫ್ ಖಾತೆಯ ಮಾಹಿತಿ ಪಡೆಯುವ ಮೂರನೇ ವಿಧಾನ: EPFO ಪೋರ್ಟಲ್ ಗೆ ಹೋಗಿ ಲಾಗಿನ್ ಮಾಡಿ. ನಮ್ಮ ಸೇವಾಗಳು ಎಂಬ ಆಪ್ಷನ್ ಕ್ಲಿಕ್ ಮಾಡಿ. drop-down menu ಗೆ ಹೋಗಿ “ಉದ್ಯೋಗಗಳಿಗಾಗಿ” ಎಂಬ ಆಯ್ಕೆ ಒತ್ತಿ. ನಂತರ ಸದಸ್ಯ PassBook ಎಂಬಲ್ಲಿ ಹೋಗಿ UAN ಸಂಖ್ಯೆ ಮತ್ತು pasaword ಹಾಕಿ. ನಂತರ ಅಲ್ಲಿ ಕೇಳುವ ಮಾಹಿತಿಗಳನ್ನು ಸರಿಯಾದ ಕ್ರಮದಲ್ಲಿ ತುಂಬಬೇಕು. ನಂತರ ನಿಮಗೆ ಪಿಎಫ್ ಖಾತೆಯ ಪೂರ್ಣ ದೊರೆಯುತ್ತದೆ.
UAN ಸಂಖ್ಯೆ ಎಂದರೇನು?
ಯುಎಎನ್ ಸಂಖ್ಯೆ ಉದ್ಯೋಗಿಗಳ ಭವಿಷ್ಯ ನಿಧಿಗೆ ಒದಗಿಸುವ 12 ಅಂಕೆಗಳ ವಿಶಿಷ್ಟ ನಂಬರ್ ಆಗಿದೆ. ಈ ವಿಶಿಷ್ಟ ನಂಬರ್ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು UAN ಅನ್ನು ದೃಢೀಕರಣ ಮಾಡುತ್ತದೆ. 12 ಅಂಕೆಗಳ ವಿಶಿಷ್ಟ ನಂಬರ್ ಪ್ರತಿ ಉದ್ಯೋಗಿಗೆ ಅವರು ಉದ್ಯೋಗಕ್ಕೆ ಸೇರಿದ ತಕ್ಷಣದಿಂದ ಅವರ ಜೀವನದುದ್ದಕ್ಕೂ ಒಂದೇ ಆಗಿರುತ್ತದೆ, ಅವರು ಹೊಸ ಕಂಪನಿ ಅಥವಾ ಬೇರೆ ಬಗೆಯ ಉದ್ಯೋಗಕ್ಕೆ ಹೋದರು ಈ ಸಂಖ್ಯೆ ಮಾತ್ರ ಬದಲಾಗುವುದಿಲ್ಲ. ಈ ಹಣವನ್ನು ನಿಮ್ಮ ಅಗತ್ಯಗಳಿಗೆ ತೆಗೆದುಕೊಳ್ಳುವ ಹಕ್ಕು ಇರುತ್ತದೆ.
ಇದನ್ನೂ ಓದಿ: ಇನ್ನು 13 ದಿನ ಮಾತ್ರವೇ ಬಾಕಿ, HSRP ನಂಬರ್ ಪ್ಲೇಟ್ ಅನ್ನು ತ್ವರಿತವಾಗಿ ಹಾಕಿಸಿ
ಇದನ್ನೂ ಓದಿ: ರೂ.4000 ರಿಯಾಯಿತಿಯೊಂದಿಗೆ 8GB RAM ಮತ್ತು 128GB ಸ್ಟೋರೇಜ್ ನ ಈ ಮೋಟೋ ಸ್ಮಾರ್ಟ್ಫೋನ್ ವಿವರಗಳನ್ನು ತಿಳಿಯಿರಿ