ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್ ಮೂಲಕ ಈಗಲೇ ಚೆಕ್ ಮಾಡಿ

voters List

ಇಂದಿನಿಂದ ಲೋಕಸಭಾ ಎಲೆಕ್ಷನ್ ಆರಂಭ ಆಗಿದೆ. ಭಾರತದಾದ್ಯಂತ ಇಂದಿನಿಂದ ಜೂನ್ ಒಂದನೇ ತಾರೀಖಿನ ವರೆಗೆ ಎಲೆಕ್ಷನ್ ನಡೆಯಲಿದ್ದು, 18ವರ್ಷ ಮೇಲ್ಪಟ್ಟ ಭಾರತದ ಪ್ರಜೆಗಳ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಭಾರತದ ಭವಿಷ್ಯಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು. ಮತದಾನ ಮಾಡುವ ಮುನ್ನ ಮತದಾನ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಎಂಬುದನ್ನು ತಿಳಿದಿಯುವುದು ಬಹಳ ಮುಖ್ಯ ಆಗಿದೆ. ನಮ್ಮ ಬಳಿ ವೋಟರ್ ಕಾರ್ಡ್ ಇದ್ದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಇದ್ದಾರೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ನಾವು ಮತದಾನಕ್ಕೆ ತೆರಳುವ ಮೊದಲು ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು.

WhatsApp Group Join Now
Telegram Group Join Now

ಆನ್ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಣಿ ತಿಳಿಯುವ ವಿಧಾನ :-

  • ಹಂತ 1:- ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಲು ಇಲಾಖೆಯ ಅಧಿಕೃತ ವೆಬ್ಸೈಟ್ https://electoralsearch.eci.gov.in/ ಭೇಟಿ ನೀಡಿ.
  • ಹಂತ 2:- ನಿಮ್ಮ ಹೆಸರು ನೋಂದಣಿಯನ್ನ ತಿಳಿಯಲು ನೀವು ಮೂರು ವಿಧಾನಗಳನ್ನು ಅನುಸರಿಸುವ ಆಯ್ಕೆ ಕಾಣುತ್ತದೆ. ಮೊದಲನೆಯದಾಗಿ EPIC ಮೂಲಕ ಹುಡುಕಿ, ವಿವರಗಳ ಮೂಲಕ ಹುಡುಕಿ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಹುಡುಕಿ ಎಂದು. ನೀವು ಯಾವ ಮಾರ್ಗ ಅನುಸರಿಸುತ್ತಿರಿ ಎಂದು ಯೋಚಿಸಿ ಆಯ್ಕೆ ಮಾಡಿ.
  • ಹಂತ 3:- ಆಯ್ಕೆ ಮಾಡಿದ ನಂತರ ನೀವು ಆಯ್ಕೆ ಮಾಡಿದ ಆಪ್ಷನ್ ಅನುಸಾರವಾಗಿ ನಿಮ್ಮ ಹೆಸರು ನಿಮ್ಮ ಊರು, ನಿಮ್ಮ ತಂದೆ ತಾಯಿಯ ಹೆಸರು, ನಿಮ್ಮ ಹುಟ್ಟಿದ ದಿನಾಂಕದ, ನಿಮ್ಮ ಗಂಡನ ಹೆಸರು ನಿಮ್ಮ ಜಿಲ್ಲೆ ಹಾಗೂ ತಾಲೂಕು ಹಾಗೂ ರಾಜ್ಯ, ಮತ್ತು ನಿಮ್ಮ EPIC ಮಾಹಿತಿಯನ್ನು ನಮೂದಿಸಿ.
  • ಹಂತ 4:- ಮಾಹಿತಿಗಳನ್ನು ನಮೂದಿಸಿದ ನಂತರ ಕ್ಯಾಪ್ಟ ಸಂಖ್ಯೆಯನ್ನು ನಮೂದಿಸಬೇಕು.
  • ಹಂತ 5:- serach ಬಟನ್ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೇಲಿನ ಎಲ್ಲಾ ವಿಧಾನಗಳನ್ನು ಅನುಸರಿಸಿದ ನಂತರ ನಿಮಗೆ ನಿಮ್ಮ ಹೆಸರು ಫೋಟೋ ಹಾಗೂ ನಿಮ್ಮ ವಿವರಗಳು ಮೊಬೈಲ್ ಅಥವಾ ಲ್ಯಾಪ್ಟಾಪ್ ಪರದೆಯ ಮೇಲೆ ಕಾಣಿಸಿದರೆ ನಿಮ್ಮ ಹೆಸರು ಮತದಾರರ ಪಟ್ಟಿಯನ್ನು ಇದೆ ಎಂದು ತಿಳಿಯಬೇಕು. ಒಂದು ವೇಳೆ ನಿಮ್ಮ ಹೆಸರು ಕಾಣಿಸದೆ ಇದ್ದರೆ ನೀವು ಮತದಾರರ ಪಟ್ಟಿಯನ್ನು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. 

ಮತದಾರರ ಪಟ್ಟಿಯಲ್ಲಿ ನೋಂದಣಿ ಆಗದೆ ಇದ್ದಲ್ಲಿ ಏನು ಮಾಡಬೇಕು?

ಆನ್ಲೈನ್ ಮೂಲಕ ನಿಮಗೆ ಮಾಹಿತಿ ಸಿಗದೇ ಇದ್ದರೆ ಅಥವಾ ನಿಮ್ಮ ಹೆಸರು ನೋಂದಣಿ ಆಗದೆ ಇದ್ದರೆ ನೀವು ನಿಮ್ಮ ಹತ್ತಿರದ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಅವರು ನಿಮಗೆ ಮುಂದಿನ ಹಂತದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುತ್ತಾರೆ. ಹಾಗೂ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಸಹಾಯ ಮಾಡುತ್ತಾರೆ.

ಮತದಾನಕ್ಕೆ ತೆರಳುವಾಗ ಕೊಂಡೊಯ್ಯಬೇಕಾದಾಗ ದಾಖಲೆಗಳು :- ಮತದಾನಕ್ಕೆ ತೆರಳುವಾಗ ನೀವು ನಿಮ್ಮ ಯಾವುದೇ ಒಂದು ಗುರುತಿನ ಚೀಟಿ ಎಂದರೆ ವೋಟಿಂಗ್ ಕಾರ್ಡ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದು ಮೂಲ ಪ್ರತಿಯನ್ನು ಮತದಾನ ಮಾಡುವಾಗ ಕೊಂಡೊಯ್ಯಬೇಕು. ಹಾಗೂ ನಿಮ್ಮ ಮತದಾನ ಪಟ್ಟಿಯ ಚೀಟಿಯನ್ನು ನಿಮಗೆ ಚುನಾವಣಾ ಅಧಿಕಾರಿಗಳು ನೀಡಿರುತ್ತಾರೆ ಅದನ್ನು ಸಹ ನೀವು ತೆಗೆದುಕೊಂಡು ಹೋಗಬೇಕು.

ಇದನ್ನೂ ಓದಿ: ಟಿಕೆಟ್ ವಿಷಯದಲ್ಲಿ ಎಂದಿಗೂ ಈ ತಪ್ಪು ಮಾಡಬೇಡಿ, ದಂಡ ತೆರಬೇಕಾದೀತು ಹುಷಾರ್! 

ಇದನ್ನೂ ಓದಿ: ವೈದ್ಯಕೀಯ ವೆಚ್ಚ ಭರಿಸುವುದು ಇನ್ನು ಮುಂದೆ ಸುಲಭ, ನಿಮ್ಮ EPF ನಿಂದ ರೂ.1 ಲಕ್ಷದವರೆಗೆ ಹಿಂಪಡೆಯಬಹುದು!