ಈಗಿನ ದಿನಮಾನಗಳಲ್ಲಿ ಫೋನ್ ಇಲ್ಲದೆ ದಿನವೇ ಸಾಗುವುದಿಲ್ಲ ಅದು ಕೂಡ ಸ್ಮಾರ್ಟ್ ಫೋನ್(Smart Phone) ಎಲ್ಲರಿಗೂ ಬೇಕು. ಫೋನ್ ಅನ್ನು ಇಟ್ಟುಕೊಂಡೆ ಊಟ, ತಿಂಡಿಯನ್ನು ಕೂಡ ಮಾಡುತ್ತಾರೆ ನಿದ್ದೆಯನ್ನು ಕೂಡ ಮಾಡುವುದಿಲ್ಲ ಅಷ್ಟೊಂದು ಫೋನ್ಗಳಿಗೆ ತುಂಬಾ ಹಚ್ಚಿಕೊಂಡಿದ್ದಾರೆ. ಕೂತಲ್ಲಿ ನಿಂತಲ್ಲಿ ಎಲ್ಲಾ ಫೋನ್ ಬಳಕೆ ಮಾಡುತ್ತೇವೆ ಊಟ ತಿಂಡಿ ಸಮಯದಲ್ಲಿ ಎಲ್ಲಾ ಸಮಯದಲ್ಲಿಯೂ ಕೂಡ ನಮಗೆ ಸ್ಮಾರ್ಟ್ ಫೋನ್ ಕೈಯಲ್ಲಿ ಇರಬೇಕು ಇಂತಹ ಪರಿಸ್ಥಿತಿ ನಮ್ಮದು.
ಈ ರೀತಿಯಾಗಿ ಅತಿ ಹೆಚ್ಚು ನಾವು ಫೋನ್ ಗಳ ಬಳಕೆಯನ್ನು ಮಾಡುವುದರಿಂದ ಹೊರಗಡೆ ತಿರುಗುವುದಾಗಲಿ ತಿನ್ನಬೇಕಿದ್ದರೆ ಮತ್ತೆ ದಿನದಲ್ಲಿ ಹೆಚ್ಚು ಸಮಯ ಮೊಬೈಲ್ ಫೋನ್ ನಮ್ಮ ಕೈನಲ್ಲಿದ್ದರೆ ಅದು ಕೊಳೆಯಾಗುತ್ತದೆ. ಅದರಲ್ಲಿ ದೂಳುಗಳು ತುಂಬಲು ಸ್ಟಾರ್ಟ್ ಆಗುತ್ತದೆ. ಫೋನನ್ನು ಕ್ಲೀನ್ ಮಾಡಲು ಹೊಸ ಐಡಿಯಾಗಳನ್ನ ತಿಳಿಸಿಕೊಡುತ್ತೇವೆ. ಪೂರ್ತಿ ಲೇಖನವನ್ನು ಓದಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಫೋನಿನಲ್ಲಿರುವ ಧೂಳಿನ ಕಣಗಳನ್ನು ಸ್ವಚ್ಛಗೊಳಿಸಲು ಕೆಲವೊಂದು ಸಲಹೆಗಳು
ಮೊದಲನೆಯದಾಗಿ ನೀವು ಏನು ಮಾಡಬೇಕು ಅಂತ ಅಂದ್ರೆ ಫೋನಿನಲ್ಲಿರುವ ಬ್ಯಾಟರಿ(Battery) ಹಾಗೂ ಫೋನ್(Phone) ಕವರ್ ಗಳನ್ನ ತೆಗೆದಿಡಿ ಗಾಳಿಯಲ್ಲಿ ಸ್ವಲ್ಪ ಹೊತ್ತು ಇರಿಸಬೇಕು ಅಂದರೆ ಮನೆಯೊಳಗೆ ಹೀಗೆ ಸಂಕುಚಿತ ಗಾಳಿಯಲ್ಲಿ ಸ್ವಲ್ಪ ಹೊತ್ತು ಮೊಬೈಲನ್ನು ಇರಿಸಬೇಕು ಈ ರೀತಿ ಮಾಡೋದ್ರಿಂದ ಧೂಳಿನ ಕಣಗಳಿಂದ ಮೊಬೈಲ್(Mobile) ಸ್ವಚ್ಛವಾಗುತ್ತದೆ. ಮೆತ್ತನೆಯ ಬಟ್ಟೆಯನ್ನು ತಗೊಂಡು ಅಥವಾ ಹತ್ತಿಯನ್ನು ತಗೊಂಡು ಹೀಗೆ ಹೊರಗಡೆ ಎಲ್ಲಾ ಮೊಬೈಲ್ ಕವರ್ ಮೇಲೆ ಅಲ್ಲಿ ಇಲ್ಲಿ ಅಂತ ಹೇಳಿ ಫೋನ್ ಗಳನ್ನು ಚೆನ್ನಾಗಿ ಒರೆಸಿಕೊಳ್ಳಬೇಕು.
ಇನ್ನು ಎರಡನೆಯದಾಗಿ ಹೇಳಬೇಕೆಂದರೆ ಫೋನನ್ನು ಸ್ವಚ್ಛ ಮಾಡುವ ಕ್ರಮ ಏನೆಂದರೆ ಟೂತ್ ಪಿಕ್ (Tooth Pick) ಅನ್ನು ತೆಗೆದುಕೊಂಡು ನೋಡಿ ನಾವು ಹಲ್ಲನ್ನು ಸ್ವಚ್ಛ ಮಾಡಲಿಕ್ಕೆ ಇದನ್ನ ಉಪಯೋಗಿಸುತ್ತೇವೆ. ಇದೇ ರೀತಿ ತೆಗೆದುಕೊಂಡು ಎಲ್ಲೆಲ್ಲಿ ಕೊಳೆ ಇರುತ್ತೋ ಅಲ್ಲೆಲ್ಲ ನೀವು ಸ್ವಚ್ಛ ಮಾಡಬೇಕು ಅಂದರೆ ಆ ಕಲೆಯನ್ನು ನೀವು ತೆಗೆಯಬೇಕು ಮತ್ತೆ ಒಣ ಬಟ್ಟೆಯಿಂದ ಸಾಫ್ಟ್ ಬಟ್ಟೆಯಿಂದ ಅಲ್ಲೆಲ್ಲ ಒರೆಸಬೇಕು.
ಮೂರನೆಯದಾಗಿ ಹೇಳಬೇಕೆಂದರೆ ವ್ಯಾಕ್ಯೂಮ್ ಕ್ಲೀನರ್, ಇದನ್ನ ತೆಗೆದುಕೊಂಡು ಫೋನಿನ ಮುಂದೆ ಹಿಡಿಯಬೇಕು ಆಗ ಫೋನಿನಲ್ಲಿರುವ ಧೂಳುಗಳಾಗಲಿ ಕಣಗಳಾಗಲಿ ಯಾವುದೇ ಒಂದು ವಸ್ತು ಇದ್ದರೂನು ಅದು ಹೊರಗಡೆ ಹೋಗುತ್ತೆ ಧೂಳು ಮತ್ತು ಕಸಗಳನ್ನ ಅದರ ಒಳಗಡೆ ಎಳೆದುಕೊಳ್ಳುವುದರಿಂದ ನಿಮ್ಮ ಮೊಬೈಲ್ ಈ ರೀತಿ ಮಾಡೋದ್ರಿಂದ ಸ್ವಚ್ಛವಾಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: ತಲೆ ತಗ್ಗಿಸುವ ಕೆಲಸ ಮಾಡಿಲ್ಲ, ಮಾಡೋದು ಇಲ್ಲ; ತಾಯಿ ಕಾಣಿಕೆ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಧನ್ಯವಾದಗಳು ಎಂದ ಜಗ್ಗೇಶ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram