ಕಳೆದುಹೋದ ವೋಟಿಂಗ್ ಕಾರ್ಡ್ (voting card) ಪಡೆದುಕೊಳ್ಳುವುದು ಹೇಗೆ?

ಮತದಾನ ಮಾಡಬೇಕು ಎಂದರೆ ವೋಟಿಂಗ್ ಕಾರ್ಡ್ (voting card) ಬಹಳ ಮುಖ್ಯ. ಮತದಾನ ಮಾಡುವ ವೇಳೆ ವೋಟಿಂಗ್ ಕಾರ್ಡ್ ಇಲ್ಲದೆಯೇ ನಮಗೆ ವೋಟ್ ಮಾಡಲು ಸಾಧ್ಯ ಇಲ್ಲ. ಅಷ್ಟೇ ಅಲ್ಲದೆ ನಿಮ್ಮ ಹೆಸರಿನಲ್ಲಿ ಯಾವುದೇ ಗಾಡಿ ಅಥವಾ ಇನ್ಸೂರೆನ್ಸ್(insurance) ಬೇಕು ಎಂದರು ನಿಮಗೆ ವೋಟಿಂಗ್ ಕಾರ್ಡ್ ನ ಅಗತ್ಯ ಬಹಳ ಇದೆ. ಯಾವುದಾದರೂ ಕಾರಣದಿಂದ ಅಕಸ್ಮಾತ್ ನಿಮ್ಮ ಬಳಿ ಇರುವ ವೋಟಿಂಗ್ ಕಾರ್ಡ್ ಕಳೆದು ಹೋದರೆ ನೀವು ಅದನ್ನು ಪಡೆಯಬಹುದು. ಈ ಹಿಂದಿನಂತೆ ವೋಟಿಂಗ್ ಕಾರ್ಡ್ ಕಳೆದುಹೋದರೆ ತಿಂಗಳುಗಳ ಕಾಲ ಕಚೇರಿಗೆ ಅಲೆಯಬೇಕು ಎಂಬ ಜಂಜಾಟವಿಲ್ಲ. ಆದರೆ ಈಗಿನ ಮೊಬೈಲ್ ಯುಗದಲ್ಲಿ ನೀವು ಈಗ ಯಾವುದೇ ಕಚೇರಿಗೆ ಹೋಗದೆ ಮನೆಯಲ್ಲಿಯೇ ಕುಳಿತು ನಿಮ್ಮ ವೋಟಿಂಗ್ ಕಾರ್ಡ್ ಪಡೆಯಬಹುದು. ನಿಮ್ಮ ಸ್ಮಾರ್ಟ್ ಫೋನ್ ನಿಂದ ವೋಟಿಂಗ್ ಕಾರ್ಡ್ ಪಡೆಯುವುದು ಬಹಳ ಸುಲಭ. ನೀವು ಹೊಸ ವೋಟಿಂಗ್ ಕಾರ್ಡ್ ಪಡೆಯುವುದು ಹೇಗೆ ಎಂದು ತಿಳಿಯಲು ಈ ಆರ್ಟಿಕಲ್ ಓದಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ವೋಟಿಂಗ್ ಕಾರ್ಡ್(voting card) ಪಡೆಯಲು ನೀವು ಸಲ್ಲಿಸಬೇಕದ ದಾಖಲೆಗಳು:-

  • ನಿಮ್ಮ ಪಾಸ್ಪೋರ್ಟ್ (paasport) ಅಳತೆಯ ಫೋಟೋ.
  • ನಿಮ್ಮ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್.
  • ನಿಮ್ಮ ವಿಳಾಸ ದಾಖಲೆಯ ಬಗ್ಗೆ ಕರೆಂಟ್ ಬಿಲ್, ಲ್ಯಾಂಡ್ ಲೈನ್ ಬಿಲ್, ಬ್ಯಾಂಕ್ ಪಾಸ್ ಬುಕ್.
  • ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.

ವೋಟಿಂಗ್ ಕಾರ್ಡ್(voting card) ಗೆ ಅಪ್ಲೈ ಮಾಡುವುದು ಹೇಗೆ?: ನೀವು ಆನ್ಲೈನ್ ನಲ್ಲಿ ಹೊಸ ವೋಟಿಂಗ್ ಕಾರ್ಡ್(voting card) ಗೆ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂದು ತಿಳಿಯಿರಿ. ನೀವು ಆನ್ಲೈನ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಅರ್ಜಿ ಹಾಕಬಹುದು. ನಿಮ್ಮ ಮೊಬೈಲ್ ನಿಂದಲೇ ಅರ್ಜಿ ಹಾಕಬಹುದು. ಹೇಗೆ ಎಂದು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

  • ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ  ಇಲ್ಲಿ ಕ್ಲಿಕ್ ಮಾಡಿ ಹೋಗಿ.
  • ಆನ್ಲೈನ್ ಸೇವೆಗಳು ಬಟನ್ ಕ್ಲಿಕ್ ಮಾಡಿ.
  • ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಎಂಬ ಆಯ್ಕೆ ಮಾಡಿ.
  • ನಿಮ್ಮ ರಾಜ್ಯದ ಹೆಸರನ್ನು (state name)ಕ್ಲಿಕ್ ಮಾಡಿ.
  • ವೋಟಿಂಗ್ ಕಾರ್ಡ್ ಐ ಡಿ ನಂಬರ್(voting card I’d number) ಹಾಕಿ.
  • ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ otp ನಂಬರ್ ಹಾಕಿ.
  • ನಿಮ್ಮ ಫೋಟೋ ಸ್ಕ್ಯಾನ್(scan) ಮಾಡಿ ಅಪ್ಲೋಡ್ (upload) ಮಾಡಿ.
  • ತುಂಬಿದ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಪ್ಲೈ ಬಟನ್ ಒತ್ತಿ.

ಅಪ್ಲಿಕೇಶನ್ ಫೀಸ್ (application fees) :-  ನೀವು ಹೊಸ ವೋಟಿಂಗ್ ಕಾರ್ಡ್(voting card) ಪಡೆಯಲು ನೀವು ಯಾವುದೇ ರೀತಿಯ ಶುಲ್ಕ ನೀಡಬೇಕಾಗಿಲ್ಲ. ಇದು ಉಚಿತವಾಗಿ ನಿಮ್ಮ ವಿಳಾಸಕ್ಕೆ ಪೋಸ್ಟ್ ಮೂಲಕ ಬರುತ್ತದೆ. ನೀವು ಅರ್ಜಿ ಸಲ್ಲಿಸಿದ 15 ರಿಂದ 20 ದಿನಗಳ ನಂತರ ಬರುತ್ತದೆ. ನೀವು ಅಡ್ರೆಸ್ changes ಮಾಡಿದಲ್ಲಿ ನೀವು ಅದನ್ನು ಸಹ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆಯ ಈ ಹೊಸ ಬದಲಾವಣೆಯನ್ನು ತಿಳಿಯಲೇಬೇಕು… 

ಇದನ್ನೂ ಓದಿ: ನೀವು 10 ನೇ ತರಗತಿ ಪಾಸಾದರೆ ಸಾಕು ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ 93 ಖಾಲಿ ಹುದ್ದೆಗಳು, ಇಂದೇ ಅರ್ಜಿಯನ್ನು ಸಲ್ಲಿಸಿ