ಸರ್ಕಾರದ ಯಾವುದೇ ಯೋಜನೆ ಆಗಿರಲಿ ನಿಮ್ಮ ಅಕೌಂಟ್ ಗೆ ಹಣ ಬರಬೇಕೆಂದರೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್(Bank Account To Aadhaar Card Link) ಆಗುವುದು ಕಡ್ಡಾಯ ಸರ್ಕಾರ ತಂದಿರುವ ಹೊಸ ಗ್ಯಾರಂಟಿ ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆಯಿಂದ ನಿಮ್ಮ ಖಾತೆಗೆ ಹಣ ಬರಲು ನೀವು ಆಧಾರ್ ಕಾರ್ಡ್ ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಲೇಬೇಕು. ನೀವಿನ್ನು ಲಿಂಕ್ ಮಾಡದೆ ಇದ್ದಲ್ಲಿ ತಕ್ಷಣವೇ ಬ್ಯಾಂಕ್ ಗೆ ಹೋಗಿ ಲಿಂಕ್ ಮಾಡಿಸಿ. ಇನ್ನು ಈ ಲೇಖನದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಹೇಗೆ ಮಾಡುವುದನ್ನು ತಿಳಿಸುತ್ತೇವೆ ಹಾಗೂ ಯಾವ ಬ್ಯಾಂಕ್ ಗೆ ಲಿಂಕ್ ಆಗಿದೆ ಎಂದು ನೋಡಬಹುದು. ಇನ್ನು ಈ ಪ್ರಕ್ರಿಯೆಯನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೇಗೆ ಚೆಕ್ ಮಾಡುವುದು?
ಇನ್ನು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್(Bank Account To Aadhaar Card Link)ಮಾಡಲು ಕೊನೆ ದಿನಾಂಕವು ಬಂದಿದ್ದು ಜುಲೈ 20ನೇ ತಾರೀಕಿನ ಒಳಗೆ ಲಿಂಕ್ ಮಾಡಿಸಬೇಕು.
ಹಂತ1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://resident.uidai.gov.in/bank-mapper
ಹಂತ2: ನೀವು ವೆಬ್ ಸೈಟ್ ಗೆ ಭೇಟಿ ನೀಡಿದ ಬಳಿಕ ಆಧಾರ್ ಕಾರ್ಡ್ ನ 12 ಸಂಖ್ಯೆಯನ್ನು ನಮೂದಿಸಬೇಕು, ಅದರ ಕೆಳಗೆ ಬರುವ Captcha Code ನ್ನೂ ಟೈಪ್ ಮಾಡಿ.
ಹಂತ3: ನಂತರ Send OTP ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ OTP ಬರುತ್ತೆ, ಅದನ್ನು ವೆಬ್ ಸೈಟ್ ನಲ್ಲಿ ಟೈಪ್ ಮಾಡಿ, ಬಳಿಕ Submit ಬಟನ್ ಮೇಲೆ ಕ್ಲಿಕ್ ಮಾಡಿ.
ನೀವು Submit ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಯು ಲಿಂಕ್ ಆಗಿದೆಯೋ ಇಲ್ಲವೋ ಎಂಬ ಸ್ಟೇಟಸ್ ಬರುತ್ತೆ ಅಲ್ಲಿ ನೀವು ಯಾವ ಬ್ಯಾಂಕ್ ಗೆ ಆಧಾರ್ ಲಿಂಕ್ ಮಾಡಿದ್ದಿರೋ ಎಂದು ನೋಡಬಹುದು. ಜುಲೈ 20 ಕೊನೆಯ ದಿನಾಂಕ ಆಗಿರುವುದರಿಂದ ನೀವು ಬೇಗ ಆಧಾರ್ ಕಾರ್ಡ್ ನ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿಸಿ.
ಇದನ್ನೂ ಓದಿ: ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!
ಇದನ್ನೂ ಓದಿ: ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram