ಎಚ್‌ಎಸ್‌ಆರ್‌ಪಿ ಯ ಫುಲ್ ಫಾರ್ಮ್ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂದು ಈ ಪ್ಲಾಟ್ ಅಲ್ಯುಮಿನಿಯಂ ಲೋಹದಿಂದ ತಯಾರಿಸಿದ್ದಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ವಾಹನ ಸವಾರರಿಗೆ HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ಈಗಾಗಲೇ ಕೇಂದ್ರ ಸರ್ಕಾರವು ಎರಡು ಬಾರಿ ಗಡುವು ವಿಸ್ತರಿಸಿದ್ದರೂ ಸಹ ಅನೇಕ ಜನರು ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ. ಅದೇ ಕಾರಣಕ್ಕೆ ಈಗ ನಿಯಮಗಳನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ.
ಸಾರಿಗೆ ಇಲಾಖೆ ನೀಡಿದ ಸಮಯ ಏಷ್ಟು?: ಸಾರಿಗೆ ಇಲಾಖೆಯು ಹೊಸದಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಇದೆ ಬರುವ ಮೇ 31 2024ರ ವರೆಗೆ ಸಮಯವನ್ನು ನೀಡಿದೆ. ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸುವುದರಿಂದ ಈ ಬಾರಿ ಕಠಿಣ ಕ್ರಮಕ್ಕೆ ಇಲಾಖೆ ಮುಂದಾಗಿದೆ.
ಜೂನ್ ಒಂದರ ನಂತರ ಎಷ್ಟು ದಂಡ ಕಟ್ಟಬೇಕು:- ಜೂನ್ ಒಂದರ ನಂತರ HSRP ನಂಬರ್ ಪ್ಲೇಟ್ ಅಳವಡಿಸದೇ ಇರುವ ವಾಹನಗಳಿಗೆ 500 ರೂಪಾಯಿಯಿಂದ 1000 ರೂಪಾಯಿಯ ವರೆಗೆ ದಂಡ ವಿಧಿಸುವ ಬಗ್ಗೆ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಷ್ಟು ಗಾಡಿಗಳಿಗೆ ನಂಬರ್ ಪ್ಲಾಟ್ ಅಳವಡಿಸುವ ಗುರಿ ರಾಜ್ಯ ಸರ್ಕಾರಕ್ಕೆ ಇದೆ?: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ತಿಳಿಸಿರುವ ಪ್ರಕಾರ ಬರುವ ಜೂನ್ ಒಂದರ ಒಳಗೆ ರಾಜ್ಯದಲ್ಲಿ 2 ಕೋಟಿಗೂ ಅಧಿಕ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವ ಗುರಿ ಹೊಂದಿದೆ.
ಯಾವ ಯಾವ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಲಾಗಿದೆ?: ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರದ ವಾಹನವು ಮತ್ತು ಭಾರಿ ವಾಹನಗಳಿಗೆ ನಂಬರ್ ಪ್ಲಾಟ್ ಅಳವಡಿಸುವುದು ಕಡ್ಡಾಯ ಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ನೀವು ಸುಲಭವಾಗಿ ಸಾಲ ಪಡೆಯಲು ಸಾಧ್ಯವಿದೆ
ಯಾವ ಯಾವ ದಾಖಲಾತಿಗಳನ್ನು ನೀಡಬೇಕು :-
- ವಾಹನದ ನೋಂದಣಿ ಪ್ರಮಾಣಪತ್ರ (RC)
- ಪಾನ್ ಕಾರ್ಡ್
- ವಿಳಾಸ ಪುರಾವೆ (ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಫೋನ್ ಬಿಲ್ ಇತ್ಯಾದಿ)
- ಪಾಸ್ಪೋರ್ಟ್ ಗಾತ್ರದ ಚಿತ್ರ
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವದು ಹೇಗೆ?
- ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ
- ಬುಕ್ ಹೆಚ್‌ಎಸ್‌ಆರ್‌ಪಿ ಎಂಬ ಬಟನ್ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯ ಹೆಸರನ್ನು ಆಯ್ಕೆ ಮಾಡಿ.
- ನಂತರ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳುತ್ತದೆ. ಅಡ್ಮನು ಭರ್ತಿ ಮಾಡಿ.
- ನಂತರ ನಿಮ್ಮ ಹತ್ತಿರದ ಡೀಲರ್ ಲೊಕೇಶನ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟ್ ಮಾಡಬೇಕು.
- ನಂತರ ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
HSRP ಯ ಪ್ರಮುಖ ಲಕ್ಷಣಗಳು:
- ಟೆಂಪರ್ ಪ್ರೂಫ್: ಈ ಪ್ಲೇಟ್ ಅನ್ನು ಒಮ್ಮೆ ಅಳವಡಿಸಿದ ನಂತರ ಅವುಗಳನ್ನು ಸುಲಭವಾಗಿ ತೆಗೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. ಯಾವುದೇ ಟ್ಯಾಂಪರಿಂಗ್ ಪ್ರಯತ್ನದ ಗುರುತುಗಳು ಕಂಡುಬರುತ್ತವೆ.
- ನಂಬರ್ ಲಾಕ್: ಪ್ಲಾಟ್‌ನಲ್ಲಿ ಒಂದು ವಿಶೇಷ ಲಾಕ್ ವ್ಯವಸ್ಥೆ ಇದೆ ಅದು ನಂಬರ್ ಅನ್ನು ಬದಲಾಯಿಸುವುದನ್ನು ತಡೆಯುತ್ತದೆ.
- ನಿರ್ದಿಷ್ಟ ವಿನ್ಯಾಸ: ಎಲ್ಲಾ HSRP ಪ್ಲೇಟ್‌ಗಳು ಒಂದೇ ರೀತಿಯ ಫ್ಯಾಂಟ್ ಮತ್ತು ವಿನ್ಯಾಸವನ್ನು ಹೊಂದಿದೆ. ಎಡಭಾಗದಲ್ಲಿ ನೀಲಿ ಬಣ್ಣದ ಚಕ್ರ ಇರುತ್ತದೆ.
- ವಾಹನ ಪ್ರಕಾರದ ಆಧಾರದ ಮೇಲೆ ಬಣ್ಣ: ಖಾಸಗಿ ವಾಹನಗಳಿಗೆ ಕಪ್ಪು ಬಿಳಿ ಅಕ್ಷರಗಳು ಮತ್ತು ಸಂಖ್ಯೆಗಳಿರುತ್ತವೆ. ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಗ್ರೀನ್ ಕಲರ್ ನಂಬರ್ ಪ್ಲೇಟ್ ಇರುತ್ತದೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ