HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಾರಿಗೆ ಇಲಾಖೆ

hsrp number plate

ಎಲ್ಲ ವಾಹನ ಸವಾರರಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎಂಬುದು ಗೊತ್ತೇ ಇದೆ. ಈಗಾಗಲೇ ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವು ನೀಡಲಾಗಿತ್ತು ಆದರೆ ತುಂಬಾ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡದ ಕಾರಣ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಈಗ ಮೇ 31 ಕೊನೆಯ ದಿನ ಎಂದು ಸಾರಿಗೆ ಇಲಾಖೆ ತಿಳಿಯದೆ. ಆದರೆ ಕೆಲವರು ಈ ಸಮಯವೂ ಮತ್ತೆ ವಿಸ್ತರಣೆ ಆಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ . ಆದರೆ ಈ ಸುದ್ದಿಯೂ ಸುಳ್ಳು ಎಂದು ಸಾರಿಗೆ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

WhatsApp Group Join Now
Telegram Group Join Now

ಈಗಾಗಲೇ ಎರಡು ಬಾರಿ ಗಡುವು ವಿಸ್ತರಣೆ ಮಾಡಿರುವ ಸಾರಿಗೆ ಇಲಾಖೆ :- ಅಧಿಕ ಸಂಖ್ಯೆಯಲ್ಲಿ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ಮುಂದಾಗಲಿಲ್ಲ ಎಂಬ ಕಾರಣದಿಂದ ಈ ಹಿಂದೆ ಎರಡು ಸಲ ಗಡುವು ವಿಸ್ತರಣೆ ಮಾಡಲಾಗಿತ್ತು. ಮೊದಲನೇ ಸಲ 2023 ನವೆಂಬರ್ 17 ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ಇಲಾಖೆ ತಿಳಿಸಿತ್ತು ಆಗ ಕೇವಲ 30,000 ವಾಹನಗಳಿಗೆ ಮಾತ್ರ ನಂಬರ್ ಪ್ಲಾಟ್ ಅವಳಾಡಿಕೆ ಆಗಿತ್ತು . ಕಡಿಮೆ ಸಂಖ್ಯೆಯಲ್ಲಿ ನಂಬರ್ ಪ್ಲಾಟ್ ಚೇಂಜ್ ಆಗಿರುವ ಕಾರಣ ಫೆಬ್ರುವರಿ 17 2024 ರ ವರೆಗೆ ಗಡುವು ವಿಸ್ತರಣೆ ಮಾಡಿದ್ದರು. ಆಗಲೂ ಸಹ ಕೇವಲ 18 ಲಕ್ಷ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾವಣೆ ಆಗಿತ್ತು. ಇದಾದ ನಂತರ ಕಠಿಣ ಕ್ರಮವನ್ನು ತೆಗೆದುಕೊಂಡು ಮೇ 31 ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ಸಾರಿಗೆ ಇಲಾಖೆ ನಿಯಮ ರೂಪಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸದೆ ಇದ್ದರೆ ದಂಡ ನೀಡಬೇಕು :-

ಸಿಗ್ನಲ್ ಉಲ್ಲಂಘನೆ ಮತ್ತು ಹೆಲ್ಮೆಟ್ ಧರಿಸದಂತಹ ಇತರ ಉಲ್ಲಂಘನೆಗಳಿಗೆ ವಿಧಿಸುವ ದಂಡದಂತೆಯೇ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೆ ಇದ್ದರೂ ದಂಡ ವಿಧಿಸಲಾಗುತ್ತದೆ. 500 ರೂಪಾಯಿಯಿಂದ 1000 ರೂಪಾಯಿಯ ಒಳಗೆ ದಂಡದ ಮೊತ್ತವನ್ನು ನಿಗದಿ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆಯು ತಿಳಿಸಿದೆ.

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೆ ಇದ್ದರೆ ಸಾರಿಗೆ ಇಲಾಖೆ ತೆಗೆದುಕೊಳ್ಳುವ ಕಠಿಣ ಕ್ರಮಗಳು ಏನು?: ಒಂದು ವೇಳೆ ಜೂನ್ ಒಂದರ ಒಳಗೆ ಬೈಕ್, ಕಾರ್, ಲಾರಿ, ಟ್ರ್ಯಾಕ್ಟರ್, ಹೀಗೆ ಎಲ್ಲ ರೀತಿಯ ವಾಹನ ಸವಾರರು ಹೊಸ ನಂಬರ್ ಪ್ಲೆಟ್ ಅಳವಡಿಕೆ ಮಾಡಿಸದೆ ಇದ್ದರೆ ಅಥವಾ ಅರ್ಜಿ ಹಾಕದೆ ಇದ್ದರೆ ದಂಡ ನೀಡುವ ಜೊತೆಗೆ ವಾಹನ ಮಾಲೀಕತ್ವ ವಿಸ್ತರಣೆ , ಅಥವಾ ವಿಳಾಸ ಬದಲಾವಣೆ ಅಥವಾ ಲೈಸೆನ್ಸ್ ವಿಸ್ತರಣೆ ಮಾಡುವ ಕೆಲಸಗಳನ್ನು ಮಾಡಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ಸಾರಿಗೆ ಇಲಾಖೆ ನೀಡಿದೆ. 

HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವುದು ಹೇಗೆ?: HSRP ನಂಬರ್ ಪ್ಲೇಟ್ ಪಡೆಯಬೇಕು ಎಂದರು ನೀವು ಮೊದಲು ನಿಮ್ಮ ಹತ್ತಿರದ RTO ಆಫೀಸ್ ಗೆ ಭೇಟಿ ನೀಡಿ ನಂತರ ನಿಮ್ಮ ಗಾಡಿಯ ಪೂರ್ಣ ವಿವರಗಳನ್ನು ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಾಗುತ್ತದೆ. ನಂತರ ನಿಮಗೆ ನಂಬರ್ ಪ್ಲಾಟ್ ನೀಡುವ ದಿನಾಂಕದ ಬಗ್ಗೆ RTO ಕಚೇರಿಯಲ್ಲಿ ಮಾಹಿತಿ ನೀಡುತ್ತಾರೆ. ಆ ದಿನಾಂಕದಂದು ನೀವು ಹೋಗಿ ನಿಮ್ಮ ಹೊಸ ನಂಬರ್ ಪ್ಲಾಟ್ ತೆಗೆದುಕೊಳ್ಳಬೇಕು.

ಇದನ್ನೂ ಓದಿ: 35 ಕಿಲೋಮೀಟರ್ ಮೈಲೇಜ್ ಹೊಂದಿರುವ ಹೊಸ ಸ್ವಿಫ್ಟ್ ಡಿಸೈರ್ ದಾರಿಯಲ್ಲಿದೆ, ಇದರ ವಿನ್ಯಾಸದಲ್ಲಿ ಎಷ್ಟೊಂದು ಬದಲಾವಣೆ ಗೊತ್ತಾ?

ಇದನ್ನೂ ಓದಿ: ಗೃಹಲಕ್ಷ್ಮಿ ಖಾತೆಯ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಲ್ಲಿ 4,000 ರೂಪಾಯಿ ಹಣ ಜಮಾ ಆಗಿದೆ.