HSRP ನಂಬರ್ ಪ್ಲೇಟ್ ಅನ್ನು ಸರ್ಕಾರ ದ್ವಿಚಕ್ರ ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಭಾರಿ ಗಾತ್ರದ ವಾಹನಗಳಿಗೆ ಕಡ್ಡಾಯ ನಿಯಮವನ್ನು ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿದೆ. ಈ ಹಿಂದೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31 2024 ಕೊನೆಯ ದಿನ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಈಗ ಈ ಗಡುವನ್ನು ಜೂನ್ 12 2024 ರ ವರೆಗೆ ವಿಸ್ತರಿಸಲಾಗಿದೆ.
ಗಡುವು ವಿಸ್ತರಣೆಗೆ ಕಾರಣ ಏನು?
ಜೂನ್ 1 2024 ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಆಗದೆ ಇರುವ ವಾಹನಗಳಿಗೆ 1,000 ರೂಪಾಯಿ ದಂಡ ವಿಧಿಸಲಾಗಿತ್ತು. ರಾಜ್ಯ ಸರಕಾರವು HSRP ನಂಬರ್ ಪ್ಲೇಟ್ ಅಳವಡಿಕೆಯ ಸಮಯವನ್ನು ವಿಸ್ತರಿಸಬೇಕು ಎಂದು ಕೋರಿ BND ಎನರ್ಜಿ ಲಿಮಿಟೆಡ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದೆ. ಈಗಾಗಲೆ ಮೇ 21 2024 ರಂದು ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸಿದೆ. ವಿಚಾರಣೆ ನಡೆಸಿರುವ ಕೋರ್ಟ್ ಜೂನ್ 11 ರಂದು ರಿಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಈ ಕಾರಣದಿಂದ ಜೂನ್ 12 ರ ವರೆಗೆ ಗಡುವನ್ನು ವಿಸ್ತರಣೆ ಮಾಡಲಾಗಿದೆ.
ಹೈಕೋರ್ಟ್ ನಲ್ಲಿ ಸರಕಾರದ ಪರವಾಗಿ ವಾದ ಮಾಡಿರುವ ಲಾಯರ್ ನ ಹೇಳಿಕೆ ಹೀಗಿದೆ :-
BND ಎನರ್ಜಿ ಲಿಮಿಟೆಡ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವುದರಿಂದ ಮುಂದಿನ ಜೂನ್ 12 2024 ರ ವರೆಗೆ ರಾಜ್ಯ ಸರಕಾರವು ಯಾವುದೇ ರೀತಿಯ ಕಟ್ಟುನಿಟ್ಟಿನ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರದ ಪರ ವಕೀಲ ಎಎಜಿ ರೂಬೆನ್ ಜೇಕಬ್ ಅವರು ಹೈಕೋರ್ಟ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜೂನ್ 12 ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆ ಸೂಚನೆ :-
ಹೈಕೋರ್ಟ್ ಆದೇಶದ ಮೇಲೆ ಜೂನ್ 12 ರ ಒಳಗೆ ನಂಬರ್ ಪ್ಲೆಟ್ ಅಳವಡಿಕೆಗೆ ಇರುವ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಇನ್ನು ಹೊಸ ನಂಬರ್ ಪ್ಲೇಟ್ ಅಳವಡಿಸ್ಕೊಳ್ಳದೆ ಇರುವ ಜೂನ್ 1 2019 ರ ಒಳಗೆ ವಾಹನ ತೆಗೆದುಕೊಂಡ ವಾಹನ ಸವಾರರು ಜೂನ್ 12 ರ ಒಳಗಾಗಿ ಹೊಸ ನಂಬರ್ ಪ್ಲೇಟ್ ಅಳವಾದಕ್ಕೊಳ್ಳಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಮೂರು ಬಾರಿ ಗಡುವು ವಿಸ್ತರಣೆ ಮಾಡಿರುವ ರಾಜ್ಯ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆಗೆ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರವು 17 ನವೆಂಬರ್ 2023 ಕೊನೆಯ ದಿನಾಂಕ ಎಂದು ತಿಳಿಸಿದ್ದವು. ಆದರೆ ಆಗ ಮುಕ್ಕಾಲು ಭಾಗದಷ್ಟು ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಸಿ ಮಾಡಿಕೊಳ್ಳದ ಕಾರಣ ಫೆಬ್ರುವರಿ 17 2024 ರ ವರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದೆ ಇರುವುದರಿಂದ ಮತ್ತೆ ಇದನ್ನು ಮೇ 31 2024 ರ ವರೆಗೆ ವಿಸ್ತರಣೆ ಮಾಡಲಾಯಿತು.
ರಾಜ್ಯದಲ್ಲಿ ಇನ್ನೂ ಎಷ್ಟು ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿಲ್ಲ?: ರಾಜ್ಯದಲ್ಲಿ ಈಗಾಗಲೇ ಒಟ್ಟು 45 ಲಕ್ಷ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿದೆ. ಆದರೂ ಇನ್ನೂ 1.55 ಕೋಟಿ ವಾಹನಗಳಿಗೆ ಹಳೆಯ ನಂಬರ್ ಪ್ಲೇಟ್ ಇದೆ.
ಇದನ್ನೂ ಓದಿ: ಭಾರತದಲ್ಲಿ ಗಣನೀಯವಾಗಿ ಕಡಿಮೆಯಾದ ಜಾಗ್ವಾರ್, ರೇಂಜ್ ರೋವರ್ ಕಾರುಗಳ ಬೆಲೆ, ಎಷ್ಟು ಗೊತ್ತಾ?
ಇದನ್ನೂ ಓದಿ: ಬರೋಬ್ಬರಿ ಒಂದು ಲೀಟರ್ ಗೆ 73KM ಮೈಲೇಜ್ ನೀಡುವ. ಹೊಸ Hero Splendor Plus XTEC 2.0 ಬೈಕ್