HSRP Number Plate: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ರಾಮಾಯಣ ಬಗೆಹರಿಯೋ ಲಕ್ಷಣಗಳೇ ಕಾಣ್ತಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಶುಕ್ರವಾರ ಕೊನೆಯ ದಿನ ಅಂತಾ ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಇದೀಗ ಟೈಂ ಕೊಟ್ಟಿದೆ. ಆದರೆ, ಗೊಂದಲಗಳು ಮಾತ್ರ ಇನ್ನೂ ಮುಂದುವರೆದಿವೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ಜನರೇನೋ ರೆಡಿ ಇದ್ದಾರೆ. ಆದರೆ, ಈ ಪ್ರಕ್ರಿಯೆ ಜನರಿಗೆ ದೊಡ್ಡ ತಲೆ ನೋವಾಗಿದೆ. ಸರ್ಕಾರವೇನೋ ಅತ್ಯಂತ ಸುಲಭ ಮಾರ್ಗಗಳನ್ನ ಜನರಿಗೆ ಕೊಟ್ಟಿದೆ. ಆದರೆ, ವೆಬ್‌ಸೈಟ್‌ನಲ್ಲಿ ಮಾಹಿತಿ ಹಾಕೋದು, ಡೀಲರ್‌ಗಳನ್ನ ಹುಡುಕೋದು ಜನರಿಗೆ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಸದ್ಯದ ಮಟ್ಟಿಗೆ ಹೇಳೋದಾದರೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ಇನ್ನೂ 3 ತಿಂಗಳು ಟೈಂ ಇದೆ.
ಮುಂದಿನ ವರ್ಷ ಫೆಬ್ರುವರಿ 17ರ ಒಳಗೆ ನಿಮ್ಮ ಗಾಡಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿದರೂ ಸಾಕು. ಬೈಕು, ಕಾರು, ಆಟೋ, ಬಸ್, ಲಾರಿ ಸೇರಿದಂತೆ ಎಲ್ಲ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ. ನವಂಬರ್ 17 ನೆ ತಾರೀಖುನ್ನ ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಟೈಂ ಕೊಟ್ಟಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೊಂದಾಯಿಸಲಾದ ಎಲ್ಲಾ ವಾಹನಗಳು 2024 ಫೆಬ್ರವರಿ 17ರ ಒಳಗಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದ್ದು, ಫೆಬ್ರವರಿ 17 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇವಲ 600 ರೂ.ಗೆ LPG ಸಿಲಿಂಡರ್… ನೀವು ಈ ಯೋಜನೆಯ ಫಲಾನುಭವಿಗಳಾಗಬೇಕು ಎಂದರೆ ತಪ್ಪದೇ ಇದೊಂದು ಕೆಲಸವನ್ನು ಮಾಡಿ.
ವಾಹನ ಸವಾರರಿಗೆ ಹೊಸ ಡೆಡ್ ಲೈನ್ ಕೊಟ್ಟ ಸರ್ಕಾರ
ಇನ್ನು ನಿಮ್ಮ ಗಾಡಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಲ್ಲ ಅಂತಾ ಈಗಲೇ ಪೊಲೀಸರು ನಿಮ್ಮ ವಾಹನ ಹಿಡಿಯೋದಿಲ್ಲ. ಜೊತೆಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸುವಾಗ ಡೀಲರ್‌ಗಳು ನಿಮ್ಮ ಬಳಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ. ಸರ್ಕಾರ ನಿಗದಿ ಮಾಡಿರುವ ಹಣವನ್ನ ಮಾತ್ರ ಡೀಲರ್‌ಗಳು ಪಡೆಯಬೇಕು. ಜೊತೆಗೆ ವೆಬ್‌ಸೈಟ್ ಆಯ್ಕೆ ಮಾಡಿಕೊಳ್ಳುವಾಗ ಕೂಡಾ ನೀವು ಸಾಕಷ್ಟು ಎಚ್ಚರ ವಹಿಸಬೇಕು. ಇಲ್ಲವಾದ್ರೆ ಸೈಬರ್ ಕ್ರಿಮಿನಲ್‌ಗಳ ಬಲೆಗೆ ಬೀಳೋ ಚಾನ್ಸ್ ಇದೆ. ಈಗಾಗಲೇ ಇಂಥಾ ಕೇಸ್‌ಗಳು ಬೆಂಗಳೂರಿನಲ್ಲಿ ನಡೆದಿರೋ ಕಾರಣ ಸ್ವಲ್ಪ ಜಾಗರುಕರಾಗಿರಬೇಕು. ಇನ್ನು 2019ರ ಏಪ್ರಿಲ್ ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಬಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.
ಹೌದು 2019ರ ಏಪ್ರಿಲ್ 1ಕ್ಕಿಂತಾ ಮೊದಲು ನೀವು ನಿಮ್ಮ ವಾಹನ ಖರೀದಿ ಮಾಡಿದ್ದರೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಬೇಕು. ಯಾಕಂದ್ರೆ, 2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿದ ಎಲ್ಲ ವಾಹನಗಳಿಗೆ ಡಿಲೆವರಿ ಮಾಡುವ ಹೊತ್ತಲ್ಲೇ ಡೀಲರ್‌ಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿ ಕೊಡ್ತಿದ್ದಾರೆ. ಇದಕ್ಕೂ ಮುಂಚೆ ಖರೀದಿ ಮಾಡಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಇರಲಿಲ್ಲ. ಹೀಗಾಗಿ ಸಾಧ್ಯವಾದಷ್ಟು ಬೇಗ ಈ ಪ್ರಕ್ರಿಯೆ ಮುಗಿಸಿಕೊಳ್ಳಿ.
ಇನ್ನು ವಾಹನ ಮಾಲಿಕರು ಆನ್ಲೈನ್ ವೆಬ್ಸೈಟ್ ಗೆ ಭೇಟಿ ನೀಡಿ ನೊಂದಾಯಿಸಿ ಆನ್ ಲೈನ್ ಮೂಲಕವೇ ಹೆಚ್.ಎಸ್.ಆರ್.ಪಿ ಶುಲ್ಕವನ್ನು ಪಾವತಿಸಿ ನಂತರ ವಾಹನ ಡೀಲರ್ ಬಳಿ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳಬೇಕು. ಹೆಚ್.ಎಸ್.ಆರ್.ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಲಾಗಿದ್ದು, ಇದರಲ್ಲಿ ಲೇಸರ್ ಕೋಡ್ ಇದ್ದು ಸ್ಕ್ಯಾನ್ ಮಾಡಿದಾಗ ವಾಹನದ ಸಂಪೂರ್ಣ ಮಾಹಿತಿ ಹಾಗೂ ಅಶೋಕಚಕ್ರದ ಚಿತ್ರವನ್ನು ಒಳಗೊಂಡಿದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೌದು ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://transport.karnataka.gov.in/ ಗೆ ಲಾಗ್ ಇನ್ ಆಗಿ. ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್ ಸಂಘಟನೆಯ ವೆಬ್‌ಸೈಟ್‌ಗೆ ಬೇಕಿದ್ದರೂ ಲಾಗ್ ಇನ್ ಆಗಬಹುದು.
ಈ ವೆಬ್‌ಸೈಟ್‌ನ ವಿಳಾಸ https://www.siam.in/ ಈ ಎರಡೂ ವೆಬ್‌ಸೈಟ್‌ಗಳ ಪೈಕಿ ಯಾವುದಕ್ಕೆ ಭೇಟಿ ನೀಡಿದರೂ ಕೂಡಾ Book HSRP ಅನ್ನೋ ಆಯ್ಕೆ ಕಾಣ ಸಿಗುತ್ತೆ. ಈ ಆಯ್ಕೆಯನ್ನ ಕ್ಲಿಕ್ ಮಾಡಿದ ಬಳಿಕ ನಿಮ್ಮ ವಾಹನ ತಯಾರಕರನ್ನ ಆಯ್ಕೆ ಮಾಡಬೇಕು. ನಿಮ್ಮ ವಾಹನದ ಸಂಪೂರ್ಣ ಮಾಹಿತಿ ನೀಡಬೇಕು. ನಂತರ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಸೋಕೆ ನಿಮಗೆ ಅನುಕೂಲವಾದ ಪ್ರದೇಶದಲ್ಲಿ ಇರುವ ಡೀಲರ್ ಆಯ್ಕೆ ಮಾಡಬಹುದು. ಆ ನಂತರ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆಗೆ ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ ಮಾಡಬಹುದು. ಇನ್ನು ಕಾರ್‌ಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ 650 ರೂಪಾಯಿಯಿಂದ 850 ರೂಪಾಯಿವರೆಗೆ ಫೀಸ್ ಕೊಡಬೇಕಾಗುತ್ತೆ. ಇನ್ನು ಬೈಕ್, ಸ್ಕೂಟರ್‌ಗಳಿಗೆ 400 ರೂಪಾಯಿಯಿಂದ 600 ರೂಪಾಯಿ ಆಗುತ್ತೆ. ಹೀಗಾಗಿ ಸೈಬರ್ ಜಾಲದಿಂದ ತಪ್ಪಿಸಿಕೊಂಡು ನೀವು ಈ ಕೆಲಸವನ್ನ ಬಹಳ ಎಚ್ಚರಿಕೆಯಿಂದ ಮಾಡೋದು ಅತ್ಯಂತ ಮುಖ್ಯ.