HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಶುಭಸುದ್ದಿ ನೀಡಿದೆ.

Hsrp number plate date

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ HSRP ನಂಬರ್ ಪ್ಲೇಟ್ ರಾಜ್ಯದ ಪ್ರತಿಯೊಬ್ಬ ವಾಹನ ಸವಾರರು ಅಳವಡಿಕೆ ಮಾಡಿಕೊಳ್ಳಬೇಕು ಎಂಬ ಕಡ್ಡಾಯ ನಿಯಮವನ್ನು ಜಾರಿಗೆ ತರಲಾಗಿದೆ. ಇದೇ ಬರುವ ಮೇ 31 2024 ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶವನ್ನು ನೀಡಲಾಗಿದೆ. ಆದರೂ ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೆ ಇರುವ ವಾಹನ ಸವಾರರಿಗೆ ಈಗ ರಾಜ್ಯ ಸರ್ಕಾರವು ಶುಭ ಸುದ್ದಿ ನೀಡಿದೆ.

WhatsApp Group Join Now
Telegram Group Join Now

ರಾಜ್ಯ ಸರ್ಕಾರ ನೀಡಿರುವ ಗಡುವಿಗೆ ಇನ್ನು 8ದಿನಗಳ ಕಾಲಾವಕಾಶ ಇದೆ :- ರಾಜ್ಯ ಸರ್ಕಾರವು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿರುವ ಗಡುವಿನ ಇನ್ನು ಕೇವಲ ಒಂದು ವಾರಗಳ ಕಾಲಾವಕಾಶ ಇದೆ. ಈ ಸಮಯದ ಒಳಗೆ ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಬಹುದು. 

BND ಎನರ್ಜಿ ಲಿಮಿಟೆಡ್ ಹೈಕೋರ್ಟ್ ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಏನಿತ್ತು?: ರಾಜ್ಯ ಸರ್ಕಾರವು ಈ ಹಿಂದೆ ಜೂನ್ ಒಂದನೇ ತಾರೀಖಿನಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೆ ಇದ್ದವರಿಗೆ 1,000 ರೂಪಾಯಿಗಳ ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿತ್ತು. ನಂಬರ್ ಪ್ಲೇಟ್ ಅಳವಡಿಕೆಯ ದಿನಾಂಕವನ್ನು ವಿಸ್ತರಣೆ ಮಾಡುವಂತೆ BND ಎನರ್ಜಿ ಲಿಮಿಟೆಡ್ ಹೈಕೋರ್ಟ್​ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದೆ. ಮೇ 21 2024 ರಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜೂನ್ 11 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೈಕೋರ್ಟ್ ನಲ್ಲಿ ಸರಕಾರದ ಪರ ವಕೀಲರು ನೀಡುವ ಹೇಳಿಕೆ ಏನು?

BND ಎನರ್ಜಿ ಲಿಮಿಟೆಡ್ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವ ಕಾರಣ ಜೂನ್ 12 2024 ರ ವರೆಗೆ ಯಾವುದೇ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಸರ್ಕಾರದ ಪರ ವಕೀಲರಾಗಿರುವ ಎಎಜಿ ರೂಬೆನ್ ಜೇಕಬ್ ಅವರು ಹೈಕೋರ್ಟ್ ನಲ್ಲಿ ತಿಳಿಸಿದ್ದಾರೆ.

ಈಗಾಗಲೇ ರಾಜ್ಯ ಸರಕಾರ ಮೂರು ಬಾರಿ ಗಡುವು ವಿಸ್ತರಣೆ ಮಾಡಿದೆ. :- ಮೊದಲು ಸಾರಿಗೆ ಇಲಾಖೆಯು 17 ನವೆಂಬರ್ 2023 ರ ಒಳಗಾಗಿ ಎಲ್ಲಾ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಹೇಳಿತ್ತು ಆದರೆ ಮುಕ್ಕಾಲು ಭಾಗದಷ್ಟು ವಾಹನ ಸವಾರರು ಹೊಸ ನಂಬರ್ ಪ್ಲೇಟ್ ಅಳವಡಿಸಿ ಕೊಳ್ಳಲಿಲ್ಲ. ಅದರಿಂದ ಈ ಗಡುವನ್ನು ಬರೋಬ್ಬರಿ ನಾಲ್ಕು ತಿಂಗಳು ಎಂದರೆ ಫೆಬ್ರುವರಿ 17 2024 ರ ವರೆಗೆ ಮುಂದೂಡಲಾಯಿತು. ಆದರೂ ಸಹ ವಾಹನ ಸವಾರರು ಸರ್ಕಾರದ ಸೂಚನೆಯಂತೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲಿಲ್ಲ. 

ಆದ್ದರಿಂದ ಇದನ್ನು ಮೇ 31 2024 ರ ವರೆಗೆ ವಿಸ್ತರಣೆ ಮಾಡಲಾಯಿತು. ಈಗ ಮತ್ತೆ ಗಡುವು ವಿಸ್ತರಣೆ ಕೋರಿ BND ಎನರ್ಜಿ ಲಿಮಿಟೆಡ್ ಅವರು ಹೈಕೋರ್ಟ್​ ಗೆ ರಿಟ್ ಅರ್ಜಿ ಸಲ್ಲಿಸಿರುವ ಕಾರಣ ಮತ್ತೆ 12 ದಿನಗಳ ಕಾಲ ಅವಕಾಶ ಸಿಕ್ಕಿದಂತೆ ಆಗಿದೆ. ಆದರೆ ಈ ಸಮಯದ ನಂತರ ವಾಹನ ಸವಾರರಿಗೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಈಗಾಗಲೇ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಹೈಕೋರ್ಟ್ ನ ತೀರ್ಪಿನ ನಂತರ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ತಿಳಿಸಲಿದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ RBI ನ ನಿಯಮ ಏನು?

ಇದನ್ನೂ ಓದಿ: ವಿದ್ಯುತ್ ಬಿಲ್‌ಗಳಿಗೆ ಗುಡ್‌ಬೈ ಹೇಳಿ! ನಿಮ್ಮ ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಹಣವನ್ನು ಉಳಿಸಿರಿ!