ಪ್ಯಾಸೆಂಜರ್ ರೈಲಿನ ದರದಲ್ಲಿ ಭಾರಿ ಇಳಿಕೆ. ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿಗೆ ಆಗುವ ನಿರೀಕ್ಷೆ

railway

ನಮ್ಮ ದೇಶದಲ್ಲಿ ಅತಿ ಹೆಚ್ಚು ಪ್ರಯಾಣಿಸುವ ಸಾರಿಗೆ ಎಂದರೆ ಅದು ರೈಲು. ಪ್ರತಿ ದಿನವೂ ಓಡಾಟಕ್ಕೆ ಲಕ್ಷಾಂತರ ಮಂದಿ ರೈಲ್ವೆ ಸಾರಿಗೆಯನ್ನು ಅವಲಂಬಿಸಿದ್ದಾರೆ. ಜನರ ಓಡಾಟಕ್ಕೆ ಮಾತ್ರವಲ್ಲ ಸರಕು ಸಾಗಾಣಿಕೆ ಸಹ ರೈಲ್ವೆ ಸಾರಿಗೆ ಬಹಳ ಉಪಯೋಗ ಆಗಿದೆ. ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಾಭ ತರುವ ರೈಲ್ವೆ ಇಲಾಖೆಯು ಕಡಿಮೆ ದರದಲ್ಲಿ ದೂರದ ಪ್ರಯಾಣ ಮಾಡುವ ಅನುಕೂಲವನ್ನು ನೀಡಿದೆ. ಆರಾಮದಾಯಕ ಪ್ರಯಾಣದ ಜೊತೆಗೆ ಕಡಿಮೆ ವೆಚ್ಚದಿಂದ ಹೆಚ್ಚಾಗಿ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಈಗ ರೈಲ್ವೆ ಸಂಪರ್ಕಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್, ಹಮ್‌ಸ ಎಕ್ಸ್‌ಪ್ರೆಸ್, ಉದಯ್ ಎಕ್ಸ್‌ಪ್ರೆಸ್ ಗಳು ಸೇರ್ಪಡೆ ಆಗಿವೆ. ಆದರೆ ಹೆಚ್ಚಿನ ಜನ ಪ್ಯಾಸೆಂಜರ್ ಟ್ರೈನ್ ನಲ್ಲಿ ಪ್ರಯಾಣ ಮಾಡುತ್ತಾರೆ. ಈಗ ಪ್ರಯಾಣದ ದರವನ್ನು ಉಳಿಯುವುದರಿಂದ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ಪ್ರಯಾಣ ಮಾಡುವ ನಿರೀಕ್ಷೆ ಇದೆ.

WhatsApp Group Join Now
Telegram Group Join Now

ಕರೋನ ರೋಗದ ಸಮಯದಲ್ಲಿ ರೈಲು ನಿರ್ವಹಣೆ ಮತ್ತು ಸಿಬ್ಬಂದಿಗೆ ವೇತನ ನೀಡುವ ಸಲುವಾಗಿ ರೈಲು ದರವನ್ನು ಇಲಾಖೆಯು ಏರಿಸಿತ್ತು. ಈ ಏರಿಕೆಯು ನಿತ್ಯ ರೈಲಿನಲ್ಲಿ ಓಡಾಡುವ ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿತ್ತು. ಆದರೆ ಈಗ ಪ್ಯಾಸೆಂಜರ್ ರೈಲಿನ ದರವು ದಿಢೀರ್ ಇಳಿಕೆ ಆಗಿದ್ದು ಹೊಸ ದರವು ಫೆಬ್ರುವರಿ 27 ರಿಂದಲೇ ಜಾರಿಗೆ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್; ಸಬ್ಸಿಡಿ ಎಷ್ಟು ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ?

ದರ ಇಳಿಕೆಯ ಪ್ರಮಾಣ ಏಷ್ಟು?

ನೈಋತ್ಯ ನಗರದ ಬೆಂಗಳೂರು ವಲಯದ 20 ಜೋಡಿ ರೈಲುಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ. ಈ ರೈಲುಗಳನ್ನು ಕೋವಿಡ್ ಸಮಯದಲ್ಲಿ ನಿಲ್ಲಿಸಲಾಗಿತ್ತು. ಕರೋನ ಸಮಯದಲ್ಲಿ ಸ್ಥಳೀಯ ರೈಲಿನ ಟಿಕೆಟ್ ದರವನ್ನು 10 ರೂಪಾಯಿಯಿಂದ 30 ರೂಪಾಯಿಯ ವರೆಗೆ ಹೆಚ್ಚಿಸಲಾಗಿತ್ತು. ಹಿಂದಿನ ದರಗಳು ಭಾಗು ಎಕ್ಸ್‌ಪ್ರೆಸ್ ರೈಲುಗಳ ದರವು ಒಂದೇ ಆಗಿತ್ತು. ಆದರೆ ಈಗ ಈ ಸ್ಥಳೀಯ ಪ್ಯಾಸೆಂಜರ್ ರೈಲಿನ ದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ರೈಲು ಪ್ರಯಾಣಿಕರಿಗೆ ಸಂತಸ ಉಂಟಾಗಿದೆ. ದರ ಇಳಿಕೆಯನ್ನು ಎಲ್ಲಾ ಮುಖ್ಯ ಮಾರ್ಗದ ವಿದ್ಯುತ್ ಬಹು ಘಟಕ ರೈಲುಗಳು ಹಾಗೂ ಶೂನ್ಯದಿಂದ ಪ್ರಾರಂಭವಾಗುವ ಸಂಖ್ಯೆಗಳನ್ನು ಹೊಂದಿರುವ ರೈಲುಗಳಲ ಸಾಮಾನ್ಯ ದರ್ಜೆಯ ಟಿಕೆಟ್ ದರವನ್ನು 50 ಪ್ರತಿಶತ ಕಡಿಮೆ ಮಾಡಲಾಗಿದೆ..

ಯಾವ ಯಾವ ರೈಲುಗಳಿಗೆ ಈ ದರ ಅನ್ವಯಿಸುತ್ತದೆ:- ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿ ಸದಸ್ಯರಾದ ಶಿವನಾಥ ಬಿಜಾನಿ ಅವರು ಈ ಬಗ್ಗೆ ಮಾತನಾಡಿ ರೈಲ್ವೆಯ ನೂತನ ದರಗಳು ಗುರುವಾರದಿಂದ ಜಾರಿಗೆ ಬಂದಿವೆ. ಪ್ಯಾಸೆಂಜರ್ ರೈಲುಗಳು ಎಂದು ವರ್ಗೀಕರಣ ಆಗಿರುವ ಎಲ್ಲಾ ರೈಲುಗಳಿಗೆ ಈ ನೂತನ ದರವು ಅನ್ವಯಿಸುತ್ತದೆ. ಪ್ಯಾಸೆಂಜರ್ ರೈಲುಗಳು ಈಗ ದೇಶದಾದ್ಯಂತ ‘ಎಕ್ಸ್‌ಪ್ರೆಸ್ ವಿಶೇಷ’ ಅಥವಾ MEMU ರೈಲುಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಇದನ್ನೂ ಓದಿ: ದೈನಂದಿನ ಬಳಕೆಗೆ ಸೂಟ್ ಆಗುವಂತಹ ಒಂದೇ ಒಂದು ಸ್ಕೂಟರ್ ಎಂದರೆ ಅದು Ather Rizta Electric Scooter, ಅಬ್ಬಾ ಏನು ವೈಶಿಷ್ಟ್ಯತೆ!

ಇದನ್ನೂ ಓದಿ: ತೈಲ ಬೆಲೆ ಏರಿಕೆಯಿಂದ ಹೆಚ್ಚಾದ ಸಿಲಿಂಡರ್ ಬೆಲೆ, ತಿಂಗಳ ಆರಂಭದಲ್ಲಿ ಹೆಚ್ಚಲಿದೆ ಜನತೆಗೆ ತುಸು ಬಿಸಿ