ಐಎಎಸ್ ಎಂಬುದು ಬಹಳ ಉನ್ನತ ಶ್ರೇಣಿ ಎಂಬುದು ಎಲ್ಲರಿಗೂ ಗೊತ್ತು. ಒಮ್ಮೆ ಐಎಎಸ್ ಪರೀಕ್ಷೆ ಪಾಸ್ ಆಗಬೇಕು ಎಂದರೆ ಹಲವಾರು ವರ್ಷಗಳ ಕಠಿಣ ಶ್ರಮ ಹಾಗೂ ಏಕಾಗ್ರತೆ ಬೇಕಾಗುತ್ತದೆ. ಹಲವಾರು ವರ್ಷಗಳ ನಿರಂತರ ಪ್ರಯತ್ನ ಹಲವಾರು ಫೇಲ್ಯುವರ್ ನಂತರವೇ ಯುಪಿಎಸ್‌ಸಿ ಪರೀಕ್ಷಯಲ್ಲಿ ಪಾಸ್ ಆಗುತ್ತಾರೆ. ಆದರೆ ದೇಶದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಐಎಎಸ್ ಪಾಸ್ ಆಗಿ ಅಧಿಕಾರಿ ಆಗಿರುವ ಸ್ಮಿತಾ ಸಭರ್ವಾಲ್ ಅವರ ಬಗ್ಗೆ ತಿಳಿಯಲೇ ಬೇಕು.
22 ರ ಚೆಲುವೆ ಐಎಎಸ್ ಅಧಿಕಾರಿ :- ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬಂತೆ ಸಾಧಿಸಿದ ಚೆಲುವೆ ಸ್ಮಿತಾ ಸಭರ್ವಾಲ್. ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪಾಸ್ ಆಗಿ ಅಧಿಕಾರ ಸ್ವೀಕರಿಸಿದ ಹೆಣ್ಣು ಈಕೆ. ಯುಪಿಎಸ್‌ಸಿ ಪಾಸ್ ಆಗುವುದರ ಜೊತೆಗೆ ಉನ್ನತ ಹುದ್ದೆಯಲ್ಲಿ ಸ್ಥಾನ ಗಳಿಸುವುದು ಸುಲಭದ ಮಾತಲ್ಲ. ಎಷ್ಟೋ ಪ್ರಯತ್ನಗಳು ಅದೆಷ್ಟೋ ಕಷ್ಟಗಳ ನಂತರ ಸಿಗುವ ಐಎಎಸ್ ಹುದ್ದೆಯನ್ನು ಕೇವಲ 22 ವರ್ಷದಲ್ಲಿ ಗಳಿಸಿಕೊಂಡಿದ್ದಾರೆ.
ಸ್ಮಿತಾ ಸಭರ್ವಾಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಪುಟ್ಟ ಮಾಹಿತಿ :-
ಇವರ ಹುಟ್ಟೂರು ಪಶ್ಚಿಮ ಬಂಗಾಳದ ಡಾರ್ಜೆಲಿಂಗ್. ಇವರು ತಂದೆ ಮಿಲಿಟರಿಯ ನಿವೃತ್ತ ಕರ್ನಲ್ ಆಗಿದ್ದವರು. ಇವರ ತಂದೆ ಮಾಜಿ ಕರ್ನಲ್ ಪ್ರಣಬ್ ದಾಸ್. ಇವರು ನಿವೃತ್ತಿ ಆದ ಬಳಿಕ ಹೈದೆರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. St Ann’s ನಲ್ಲಿ ತಮ್ಮ ಆರಂಭಿಕ ಶಾಲಾ ಶಿಕ್ಷಣ ಮುಗಿಸಿದರು. ಪಿಯುಸಿ ಯಲ್ಲಿ ಇವರು ಕಾಲೇಜ್ ಗೆ ಟಾಪರ್ ಆಗಿದ್ದರೂ. . ಇವರು ಹೈದೆರಾಬಾದ್‌ನ ಸೆಂಟ್ ಫ್ರ್ಯಾನ್ಸಿಸ್ ಕಾಲೇಜಿನಲ್ಲಿ ಕಾಮರ್ಸ್ ವಿಷಯದಲ್ಲಿ ಪದವಿ ಓದಿದರು.
ದೇಶಕ್ಕೆ ನಾಲ್ಕನೇ ರ‍್ಯಾಂಕ್ :- UPSC ಪರೀಕ್ಷೆ ಪಾಸ್ ಆಗುವುದರ ಜೊತೆಗೆ 2000ನೇ ಸಾಲಿನಲ್ಲಿ ದೇಶಕ್ಕೆ ನಾಲ್ಕನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿಗೆ ಪೋಸ್ಟಿಂಗ್ ಆಗಿರುವ ಯಂಗೆಸ್ಟ್ ಆಫೀಸರ್ ಎಂಬ ಹೆಗ್ಗಳಿಕೆ ಇವರಿಗೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸೋಷಿಯಲ್ ಮೀಡಿಯಾ ಫಾಲೋವರ್ಸ್ :- ಸ್ಮಿತಾ ಅವರ ಖ್ಯಾತಿ ಎಷ್ಟಿದೆ ಎಂದರೆ ಇವರ ಟ್ವಿಟ್ಟರ್ ಖಾತೆಗೆ ಬರೋಬರಿ 4.4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇವರು ಟ್ವಿಟ್ಟರ್‌ನಲ್ಲಿ ತಮ್ಮನ್ನು ‘Army Brat’ ಎಂದು ಹಾಕಿಕೊಂಡಿದ್ದಾರೆ. ಇವರ ಬಗ್ಗೆ ಇನ್ನಷ್ಟು ತಿಳಿಯಲಿ ಇವರ ಅಧಿಕೃತ ಟ್ವಿಟ್ಟರ್ ಖಾತೆ @SmitaSabharwal ಫಾಲೋ ಮಾಡಿ.
ಇದನ್ನೂ ಓದಿ: Lava Yuva 5G; ಬಜೆಟ್ ಬೆಲೆಯಲ್ಲಿ ಅದ್ಭುತ ಫೋನ್ ಪಡೆಯಿರಿ!
UPSC ಪಾಸ್ ಮಾಡಿದ ಯಂಗೆಸ್ಟ್ ಲೇಡಿ :-
UPSC ಪರೀಕ್ಷೆ ಪಾಸ್ ಮಾಡಿದ ದೇಶದ ಯಂಗೆಸ್ಟ್ ಲೇಡಿ ಎಂಬ್ಬ ಹೆಗ್ಗಳಿಕೆ ಇವರಿಗೆ ಇದೆ. ಇವರ ಉತ್ತಮ ಸಾಧನೆಯನ್ನು ಭಾರತದಾದ್ಯಂತ ಹಲವಾರು ಗಣ್ಯರು ಹಾಡಿ ಹೊಗಳಿದ್ದಾರೆ. ಜೊತೆಗೆ ಇವರಿಗೆ ಜನರ ಅಧಿಕಾರಿ ಎಂಬ ಖ್ಯಾತಿಯನ್ನು ಪಡೆದಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿದ ಜನರು ಇವರ ಪೋಸ್ಟರ್ ಗಳನ್ನೂ ವಾರಂಗಲ್ ಹಾಗೂ ವಿಶಾಖಪಟ್ಟಣಂ ಹಾಗೂ ಕರಿಂನಗರ್ ಮತ್ತು ಚಿತ್ತೂರು ತೆಲಂಗಾಣದ ಹಲವು ಭಾಗಗಳಲ್ಲಿ ಹಾಕಲಾಗಿತ್ತು.
ಚಿಕ್ಕ ವಯಸ್ಸಿಗೇ ಸಾಧನೆ ಮಾಡಿದ ಸ್ಮಿತಾ ಸಭರ್ವಾಲ್ ಅವರು ಇಂದಿನ ಯುವಕರಿಗೆ ಮಾದರಿ ಆಗಿದ್ದರೆ. ಏಕಾಗ್ರತೆ ಮತ್ತು ಶ್ರಮದಿಂದ ಮನುಷ್ಯ ಏನನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಎಷ್ಟೋ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸು ಹೊತ್ತಿರುವ ಯುವಕರಿಗೆ ಇವರ ಸಾಧನೆ ಒಂದು ಮಾದರಿ. ಇವರ ಸಾಧನೆಯ ಹಾದಿ ಹೀಗೆ ಸಾಗಲಿ ಎಂದು ಹಾರೈಸೋಣ.
ಇದನ್ನೂ ಓದಿ: ಜನ್-ಧನ್ ಖಾತೆಯಿಂದ 10,000 ರೂ. ಓವರ್‌ಡ್ರಾಫ್ಟ್ ಸೇರಿದಂತೆ ಅನೇಕ ಲಾಭಗಳು! ಈಗಲೇ ತೆರೆಯಿರಿ!