ಬ್ಯಾಂಕ್ ಹುದ್ದೆಗೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಒಮ್ಮೆ ಬ್ಯಾಂಕ್ ಉದ್ಯೋಗ ದೊರೆತರೆ government ಜಾಬ್ ಅಂತೆಯೇ ಸೇಫ್ಟಿ ಜಾಬ್ ಅಷ್ಟೇ ಅಲ್ಲ ಯಾವುದೇ ನೈಟ್ ಡ್ಯೂಟಿ ಅಥವಾ ಆಫೀಸ್ ನಿಂದ ಮನೆಯ ಬಂದಮೇಲೆ ಮತ್ತೆ ಆಫೀಸ್ ವರ್ಕ್ ಮಾಡಬೇಕು ಎಂಬ ಟೆನ್ಶನ್ ಇರುವುದಿಲ್ಲ. ಆದರೆ ಬ್ಯಾಂಕ್ ಉದ್ಯೋಗ ದೊರೆಯುವುದು ಸುಲಭವಲ್ಲ. ಬ್ಯಾಂಕ್ ಎಕ್ಸಾಂ ಕ್ಲಿಯರ್ ಮಾಡಬೇಕು ನಂತರ ಸಂದರ್ಶನಕ್ಕೆ ಹೋಗಿ ಅಲ್ಲಿ ಪಾಸ್ ಆದ ನಂತರ ನಿಮಗೆ ಜಾಬ್ ಸಿಗುತ್ತದೆ. ಆದರೂ ಇಂಜನಿಯರ್ ಓದಿದವರು ಸಹ ಐಟಿ ಫೀಲ್ಡ್ ಬಿಟ್ಟು ಈಗ ಬ್ಯಾಂಕ್ ಎಕ್ಸಾಮ್ ಬರೆದು ಬ್ಯಾಂಕ್ ನಲ್ಲಿ ವರ್ಕ್ ಮಾಡುವುದನ್ನು ಇಷ್ಟ ಪಡುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಕನಸು ನಿಮಗೆ ಇದ್ದರೆ ಫೆಬ್ರುವರಿ 12 ರಿಂದ ಐಡಿಬಿಐ ಬ್ಯಾಂಕ್ ನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಪೂರ್ಣ ವಿವರ:- ಐಡಿಬಿಐ ಬ್ಯಾಂಕ್ ನಲ್ಲಿ 500 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದ್ದಾರೆ. ಅರ್ಜಿ ಸಲ್ಲಿಸಲು ಐಡಿಬಿಐ ಬ್ಯಾಂಕ್ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಹೋಗಿ ಅರ್ಜಿ ಸಲ್ಲಿಸಬಹುದು. ಫೆಬ್ರುವರಿ 26 ಅರ್ಜಿ ಹಾಕಲು ಲಾಸ್ಟ್ ಡೇಟ್. ಇದೇ ಬರುವ ಮಾರ್ಚ್-17-2024 ರಂದು ಆನ್ಲೈನ್ ಎಕ್ಸಾಮ್ಸ್ ನಡೆಯಲಿದೆ. ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದವರಿಗೆ 1,000 ರೂಪಾಯಿ ಎಕ್ಸಾಮ್ ಫೀಸ್ ನಿಗದಿ ಮಾಡಲಾಗಿದೆ. ಹಾಗೂ SC ಅಥವಾ ST ಅಥವಾ ವರ್ಗಗಳಿಗೆ 200 ರೂಪಾಯಿ ಎಕ್ಸಾಮ್ ಫೀಸ್ ಇರುತ್ತದೆ. ಭಾರತದಾದ್ಯಂತ ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಹಾಕಲು ಇರುವ ನಿಯಮಗಳು :-
- ಅರ್ಜಿದಾರರ ವಯಸ್ಸು 20 ರಿಂದ 25 ವರ್ಷ. SC ಅಥವಾ ST 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ.
- ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣ ಗೋಳಿಸಿರಬೇಕು.
- ಅಭ್ಯರ್ಥಿಯು ಐಡಿಬಿಐ ಬ್ಯಾಂಕ್ ನ ಯಾವುದೇ ಶಾಖೆಯಲ್ಲಿ ಕೆಲಸ ಮಾಡಲು ರೆಡಿ ಇರಬೇಕು.
ಅರ್ಜಿ ಸಲ್ಲಿಸುವ ವಿಧಾನ: www.idbibank.in ವೆಬ್ಸೈಟ್ ಗೆ ತೆರಳಿ ವೃತ್ತಿಜೀವನ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಕರೆಂಟ್ ಓಪನಿಂಗ್ಸ್ ಗೆ ಹೋಗಿ ಅಲ್ಲಿ ನಿಮಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಸಿಗುತ್ತದೆ. ಅಲ್ಲಿ ನಿಮ್ಮ ಹೆಸರು ವಿಳಾಸ ಆಧಾರ್ ಸಂಖ್ಯೆ ಲಿಂಗ, ಶೈಕ್ಷಣಿಕ ಅರ್ಹತೆ ಎಲ್ಲವನ್ನೂ ಭರ್ತಿ ಮಾಡಿ. ನಂತರ ನಿಮ್ಮ ಎಲ್ಲಾ ಮಾರ್ಕ್ಸ್ ಕಾರ್ಡ್ ಗಳು ಸ್ಕ್ಯಾನ್ ಮಾಡಿ ಹಾಕಬೇಕು. ನಂತರ ನಿಗದಿತ ಶುಲ್ಕ ಪಾವತಿಸಿ ಒಮ್ಮೆ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಿಮ್ಮ ಅರ್ಜಿಯನ್ನು ಸಲ್ಲಿಸಿ. ನೀವು ಅರ್ಜಿ ಸಲ್ಲಿಸದ ಬಗ್ಗೆ ಮಾಹಿತಿಯನ್ನು ಡೌನ್ಲೋಡ್ ಅಥವಾ ಪ್ರಿಂಟ್ ತೆಗೆದುಕೊಳ್ಳಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಎಕ್ಸಾಮ್ ಮತ್ತು ಸಂದರ್ಶನಗಳ ಬಗ್ಗೆ ಮಾಹಿತಿ: 200 ಮಾರ್ಕ್ಸ್ ಗೆ ಎಕ್ಸಾಮ್ ಬರೆಯಬೇಕು. 2ಗಂಟೆಗಳ ಕಾಲಾವಕಾಶ ಇರುತ್ತದೆ. ಆನ್ಲೈನ್ ನಲ್ಲಿ ಎಕ್ಸಾಮ್ ಅಟೆಂಡ್ ಆಗಬೇಕು. ಒಂದು ಉತ್ತರ ತಪ್ಪಾದರೆ 0.25 ಮಾರ್ಕ್ಸ್ ಕಡಿತವಾಗುತ್ತದೆ. ಎಕ್ಸಾಮ್ ಕ್ಲಿಯರ್ ಆದ ನಂತರ ನಿಮಗೆ ಇಂಟರ್ವ್ಯೂ ಕರೆಯುತ್ತಾರೆ. ಸಂದರ್ಶನ ನಡೆಯುವ ಸ್ಥಳಗಳ ಬಗ್ಗೆ ನಿಮಗೆ ಅಪ್ಡೇಟ್ ಬರುತ್ತದೆ.
ಇದನ್ನೂ ಓದಿ: ನೀವು ಪಿಯುಸಿಯನ್ನು ಮುಗಿಸಿದ್ದೀರಾ? ಶಿವಮೊಗ್ಗ ಜಿಲ್ಲೆ ಗ್ರಾಮ ಪಂಚಾಯಿತಿ ಗಳಲ್ಲಿ ನೇಮಕಾತಿ; 14 ಹುದ್ದೆಗಳು ಖಾಲಿ ಇವೆ..
ಇದನ್ನೂ ಓದಿ: 5 ವರ್ಷಕ್ಕೆ ನಾಲ್ಕು ವರೆ ಲಕ್ಷ ರೂಪಾಯಿ ಬಡ್ಡಿ ಪಡೆಯುವ ಪೋಸ್ಟ್ ಆಫೀಸ್ ಉಳಿತಾಯ ಸ್ಕೀಮ್ ಬಗ್ಗೆ ಪೂರ್ಣ ಮಾಹಿತಿ