ರಾಜ್ಯದಲ್ಲಿ ಬಹಳಷ್ಟು ಅಕ್ರಮ ನಡೆಯುತ್ತಿದ್ದು, ಹಲವಾರು ಕುಟುಂಬಗಳು ಶಕ್ತಿ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ ಇದರಿಂದ ಎಚ್ಚೆತ್ತ ಸರ್ಕಾರ ಪಡಿತರ ಚೀಟಿಯನ್ನು ಹೊಂದಿದವರಿಗೆ ಕೆಲವೊಂದು ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದು ಜನಗಳ ಹಿತರಕ್ಷಣೆಗಾಗಿಯೇ ಹೊರತು ಇನ್ಯಾವ ಉದ್ದೇಶಗಳಿಗೂ ಕೂಡ ಮೀಸಲಾಗಿಲ್ಲ. ಹೌದು ವೀಕ್ಷಕರೇ, ಬಡವ ಹಾಗೂ ಮಹಿಳೆಯರ ಸದೃಢೀಕರಣಕ್ಕಾಗಿ ಕೆಲವೊಂದು ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ ಆದರೆ ಹಲವರು ತಮ್ಮ ಅಗತ್ಯತೆಗಳನ್ನು ಮೀರಿ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಇದು ಸರ್ಕಾರದ ಗಮನಕ್ಕೆ ಬಂದಿದ್ದು,ಈ ಅಕ್ರಮವನ್ನು ತಪ್ಪಿಸಲು ಸರ್ಕಾರವು ಕೆಲವೊಂದು ಕಾಯ್ದೆ ಕಾನೂನನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಆದ್ದರಿಂದ ರೇಷನ್ ಕಾರ್ಡ್ ಗಳನ್ನು ಹೊಂದಿದವರು ಈ ಕೆಲಸವನ್ನು ತಪ್ಪದೆ ಡಿಸೆಂಬರ್ ತಿಂಗಳ ಒಳಗಾಗಿ ಕಡ್ಡಾಯವಾಗಿ ಮಾಡಬೇಕಿದೆ ಇಲ್ಲದೆ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದರಲ್ಲಿ ಯಾವುದೇ ಎರಡು ಮಾತಿಲ್ಲ.
ಎಲ್ಲಾ ಯೋಜನೆಗಳಿಗೂ ರೇಷನ್ ಕಾರ್ಡ್ ಬೇಕಾಗುತ್ತಿದ್ದು ಇದರಿಂದ ಹಲವಾರು ಜನ ಅಕ್ರಮವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ ಈ ಸಂದರ್ಭದಲ್ಲಿ ಅಕ್ರಮ ಬಿಪಿಎಲ್ ಕಾರ್ಡುಗಳನ್ನು (illegal BPL card) ಭೇದಿಸುವುದು ಮುಖ್ಯವಾಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಡಿಸೆಂಬರ್ 30ರೊಳಗಾಗಿ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು
ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಇ-ಕೆ ವೈ ಸಿ (E-KYC) ಯನ್ನು ಮಾಡಿಸಲೇಬೇಕಾಗಿದೆ. ಇದರ ಸಲುವಾಗಿ ರಾಜ್ಯ ಸರ್ಕಾರ ಜನಗಳಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಿದ್ದು ಡಿಸೆಂಬರ್ 30ರ ಒಳಗಾಗಿ ಇ-ಕೆ ವೈ ಸಿ ಯನ್ನು ಮಾಡಿಸಿಕೊಳ್ಳದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಈ ಕೆ ವೈ ಸಿ ಯನ್ನು ಮಾಡಿಸಲು ನಿಮ್ಮ ಹತ್ತಿರವಿರುವ ಆಹಾರ ಇಲಾಖೆಗೆ ಭೇಟಿ ಕೊಡಿ. ಅಲ್ಲಿ ಅಧಿಕಾರಿಗಳ ಮೂಲಕ ಕೆಲವೊಂದು ದಾಖಲಾತಿಗಳನ್ನ ದಾಖಲಿಸಬೇಕಾಗುತ್ತದೆ. ಅದೇನೆಂದರೆ ನಿಮ್ಮ ಹೆಸರು ನಿಮ್ಮ ಮನೆಯ ವಿಳಾಸ ನೀವು ಹುಟ್ಟಿದ ದಿನಾಂಕ ಹಾಗೂ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ಗಳ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಇಲ್ಲಿ ತಿಳಿಸಿದ ದಾಖಲೆತಿಗಳನ್ನು ಸ್ಕ್ಯಾನ್ ಮಾಡಿ ನಂತರ ಅಪ್ಲೋಡ್ ಮಾಡಬೇಕಾಗುತ್ತದೆ.
ಪ್ರಕ್ರಿಯೆ ಪೂರ್ಣಗೊಂಡ ನಂತರ ಸಬ್ಮಿಟ್(submit) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಎಲ್ಲ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಮೊಬೈಲ್ ಗೆ ಒಂದು ಸಂಖ್ಯೆ ಬರುತ್ತದೆ. ನಿಮ್ಮ ಕೆ ವೈ ಸಿ ಪ್ರಕ್ರಿಯೆ ಮುಗಿದ ಮೇಲೆ ಇದರ ಬಗ್ಗೆ ಮಾಹಿತಿಯನ್ನು ನಿಮಗೆ ಮೊಬೈಲ್ ಸಂದೇಶದ ಮೂಲಕ ತಿಳಿಸಲಾಗುತ್ತದೆ. ಈ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಅಂದರೆ ರೇಷನ್ ಕಾರ್ಡ್ ಹೊಂದಿದವರು ಇ -ಕೆ ವೈ ಸಿ ಯನ್ನು ಮಾಡಿಸಬೇಕು.
ಒಮ್ಮೆ ಮಾಡಿಸದೆ ಹೋದ ಪಕ್ಷದಲ್ಲಿ ನಿಮ್ಮ ರೇಷನ್ ಕಾರ್ಡ್ ನೂರಕ್ಕೆ ನೂರು ರದ್ದಾಗುತ್ತದೆ. ಇದರಿಂದ ನೀವು ಯಾವ ಯೋಜನೆಗಳಿಗೂ ಬದ್ಧರಾಗುವುದಿಲ್ಲ. ಶಕ್ತಿ ಯೋಜನೆಗಳ ಪೈಕಿ ಒಂದನ್ನು ಸಹ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಡಿಸೆಂಬರ್ 30ರ ಒಳಗಾಗಿ ಕಡ್ಡಾಯವಾಗಿ ಇ-ಕೆ ವೈ ಸಿ ಯನ್ನು ಮಾಡಿಸಿಕೊಳ್ಳಿ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ದೀಪಾವಳಿಗೆ ಬಂಪರ್ ಲಾಟರಿ 4000 ರೂಪಾಯಿ, ಹಾಗಾದ್ರೆ ಈ ಹಣ ಯಾರಿಗೆ ಸಲ್ಲುತ್ತದೆ?
ಇದನ್ನೂ ಓದಿ: 2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಸಮಯ; ಪೂಜೆ ಮಾಡುವ ವಿಧಾನ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram