ಈಗಾಗಲೇ ಎಲ್ಲ ವಾಹನ ಸವಾರರಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡೆಯಾಗಿಳಿಸಿರುವುದು ಗೊತ್ತೇ ಇದೆ. ಈಗಾಗಲೇ ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವು ನೀಡಲಾಗಿದ್ದು, ಇನ್ನು ಎರಡು ಕೋಟಿಗೂ ಅಧಿಕ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಬೇಕಿದೆ.
ಎರಡು ಬಾರಿ ಗಡುವು ವಿಸ್ತರಿಸಲು ಕಾರಣವೇನು?: ಹೆಚ್ಚಿನ ಪ್ರಮಾಣದಲ್ಲಿ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ಆಸಕ್ತಿ ತೋರಿಸದೆ ಇರುವ ಕಾರಣದಿಂದ ಎರಡು ಬಾರಿ ಗಡುವು ವಿಸ್ತರಣೆ ಮಾಡಿತು. ಮೊದಲನೇ ಬಾರಿ ಈ ಹೊಸ ನಿಯಮವನ್ನು ಜಾರಿಗೆ ತಂದಾಗ 2023 ನವೆಂಬರ್ 17 ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ಇಲಾಖೆ ಗಡುವು ನೀಡಲಾಗಿತ್ತು ಆದರೆ ಆಗ ಕೇವಲ 30,000 ವಾಹನಗಳಿಗೆ ಮಾತ್ರ ನಂಬರ್ ಪ್ಲಾಟ್ ಚೇಂಜ್ ಆಗಿತ್ತು. ಇದೇ ಕಾರಣಕ್ಕೆ ಫೆಬ್ರುವರಿ 17 2024 ರ ವರೆಗೆ ಗಡುವು ನೀಡಲಾಗಿತ್ತು. ಆ ಸಮಯದಲ್ಲಿ ಕೇವಲ 18 ಲಕ್ಷ ವಾಹನಗಳಿಗೆ ನಂಬರ್ ಪ್ಲೇಟ್ ಚೇಂಜ್ ಆಯಿತು. ಇದಾದ ನಂತರ ಕಠಿಣ ಕ್ರಮವನ್ನು ಕೈಗೊಂಡು ಮೇ 31 ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
HSRP ನಂಬರ್ ಪ್ಲೇಟ್ ಅಳವಡಿಕೆ ಮಾಡೈಸಿಕೊಂಡ ವಾಹನಗಳ ಸಂಖ್ಯೆ .:- ಈ ಸಮಯದಲ್ಲಿ 34ಲಕ್ಷ ನೊಂದಣಿಗಳು ಆಗಿವೆ. ಈಗಾಗಲೇ ಒಟ್ಟು 52 ಲಕ್ಷ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಆಗಿದೆ. ಇಲಾಖೆಯ ಮಾಹಿತಿಯ ಪ್ರಕಾರ ಶೇಕಡಾ 25% ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿದ್ದು, ಇನ್ನು 75% ರಷ್ಟು ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮೇ. 31ರಂತರ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳದ ವಾಹನಗಳು ದಂಡ ಪಾವತಿಸಬೇಕು:- ಇಲಾಖೆಯು ತಿಳಿಸಿರುವ ಪ್ರಕಾರ ಈಗಾಗಲೇ ವಾಹನ ಸವಾರರಿಗೆ ಎರಡು ಬಾರಿ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿ ಕೊಳ್ಳಲು ಗಡುವು ನೀಡಲಾಗಿದ್ದು ಇದನ್ನು ನಿರ್ಲಾಕ್ಯ ಮಾಡಿದವರಿಗೆ ಜೂನ್ ಒಂದರಿಂದ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಜೊತೆಗೆ ಚರ್ಚಿಸದೆ ಎನ್ನಲಾಗಿದೆ. ಇದು ಜಾರಿಗೆ ಬಂದರೆ ಇಷ್ಟು ದಿನ ಸಿಗ್ನಲ್ ಜಂಪ್ ಹಾಗೆ ಹೆಲ್ಮೆಟ್ ಹಾಕಲಿಲ್ಲ ಎಂದು ದಂಡ ಕಟ್ಟುತ್ತಾ ಇದ್ದ ವಾಹನ ಸವಾರರು ಇನ್ನು ಮುಂದೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸದೆ ಇದ್ದರೂ ದಂಡ ಕಟ್ಟಬೇಕು.
ಮತ್ತೊಮ್ಮೆ ಗಡುವು ವಿಸ್ತರಿಸುವ ಸಾಧ್ಯತೆ ಇದೆ. :-
ಈಗಾಗಲೇ ನಿರೀಕ್ಷಿತ ಮಟ್ಟದಲ್ಲಿ ನಂಬರ್ ಪ್ಲೆಟ್ ಅಳವಡಿಕೆ ಮಾಡಿಸಿಕೊಳ್ಳದ ಕಾರಣದಿಂದ ಈಗಾಗಲೇ ಎರಡು ಬಾರಿ ಗಡುವು ವಿಸ್ತರಣೆ ಮಾಡಿರುವ ಸಾರಿಗೆ ಇಲಾಖೆಯು ಮೇ. 31ರ ಒಳಗೆ ಶೇಕಡಾ 75% ರಷ್ಟು ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಆಗದೆ ಇದ್ದಲ್ಲಿ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಿದೆ.
HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು ನೀವು ನಿಮ್ಮ ಹತ್ತಿರದ ಹತ್ತಿರದ RTO ಆಫೀಸ್ ಗೆ ತೆರಳಿ ನಿಮ್ಮ ಗಾಡಿ ವಿವರಗಳನ್ನು ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಿ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿ. ನಂತರ ನಿಮಗೆ ನಂಬರ್ ಪ್ಲಾಟ್ ನೀಡುವ ದಿನಾಂಕದ ಮಾಹಿತಿಯನ್ನು ಕಚೇರಿಯ ಅಧಿಕಾರಿಗಳು ತಿಳಿಸುತ್ತಾರೆ.
ಇದನ್ನೂ ಓದಿ: ಇದೆ ತಿಂಗಳು ಎಲೋನ್ ಮಸ್ಕ್ ಭಾರತಕ್ಕೆ ಬರಲಿದ್ದು ಟೆಸ್ಲಾ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: 13 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ, AMOLED ಸ್ಕ್ರೀನ್ ಹೊಂದಿರುವ ಈ Samsung 5G ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ!