ಇಂದಿನ ಸ್ಮಾರ್ಟ್ ಫೋನ್ ಬಳಕೆಯ ಕಾಲದಲ್ಲಿ ಯಾರು ತಾನೇ ಹಣ ಚಲಾವಣೆ ಮಾಡುತ್ತಾರೆ? ಎಲ್ಲರೂ ಫೋನ್ ಪೇ ಗೂಗಲ್ ಪೇ ಎಂದು ಆನ್ಲೈನ್ ಪೇಮೆಂಟ್ ಹಿಂದೆ ಓಡುತ್ತಾ ಇದ್ದಾರೆ ಎಂದು ನೀವು ಭಾವಿಸಿರಬಹುದು. ಆದರೆ ಲಿಮಿಟೆಡ್ ಹಣಕ್ಕಿಂತ ಹೆಚ್ಚಿನ ಹಣವನ್ನು ತೆರಿಗೆ ಹಣದಿಂದ ತಪ್ಪಿಸಿಕೊಳ್ಳಲು ನೋಟಿನ ಚಲಾವಣೆ ಮಾಡುತ್ತಾರೆ. ಆದರೆ ರಂಗೋಲಿ ಕೆಳಗೆ ತೂರುವ ಆದಾಯ ಇಲಾಖೆ ನಮ್ಮ ಪ್ರತಿ ವ್ಯವಹಾರಗಳ ಮೇಲೆ ಒಂದು ಕಣ್ಣು ಇಟ್ಟಿದೆ. ಹಾಗಾದರೆ ಆದಾಯ ತೆರಿಗೆ ಇಲಾಖೆಯ ಯಾವ ಬಗೆಯ 5 ನಗದು ವ್ಯವಹಾರಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಯಿರಿ.
ತೆರಿಗೆ ಇಲಾಖೆಯಿಂದ ಈ 5 ಬಗೆಯ ವ್ಯವಹಾರಗಳಿಗೆ ಮನೆಗೆ ಬರಲಿದೆ ನೋಟಿಸ್
ವಾರ್ಷಿಕ ಆದಾಯಕ್ಕೂ ಮೀರಿ ನಿಮ್ಮ ಹಣದ ವ್ಯವಹಾರ ನಡೆಯುತ್ತಿದ್ದರೆ ಅಥವಾ ಯಾವುದೇ ಅನ್ಯ ಮಾರ್ಗದಿಂದ ವ್ಯವಹಾರ ಮಾಡುತ್ತಿದ್ದಾರೆ ಎಂಬ ಸಂಶಯ ಬಂದರೆ ಹಣದ ಮೂಲಗಳ ಬಗ್ಗೆ ಮಾಹಿತಿಯನ್ನು ಆದಾಯ ಇಲಾಖೆಯು ಪ್ರಶ್ನಿಸುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- ವಿವಿಧ ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಹಣ ಠೇವಣಿ ಮಾಡಿದರೆ:- ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (CBDT) ನಿಯಮ ಏನಿದೆ ಎಂದರೆ ನೀವು ಒಂದು ಆರ್ಥಿಕ ವರ್ಷದಲ್ಲಿ ಹತ್ತು ಲಕ್ಷಕ್ಕೂ ಹಣವನ್ನು ಠೇವಣಿ ಮಾಡಿದರೆ ಅದರ ಮಾಹಿತಿ ಆದಾಯ ತೆರಿಗೆಗೆ ಮಾಹಿತಿ ಸಿಗುತ್ತದೆ. ಆದಾಯ ತೆರಿಗೆ ತಪ್ಪಿಸಲು ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದು ಒಂದೊಂದು ಖಾತೆಯಲ್ಲಿ ಸ್ವಲ್ಪ ಸ್ವಲ್ಪ ಹಣ ಠೇವಣಿ ಮಾಡಿದರೂ ಸಹ ನಿಯಮದ ಅನ್ವಯ ನಿಮಗೆ ಆದಾಯ ತೆರಿಗೆಯಿಂದ ನೋಟಿಸ್ ಬರುತ್ತದೆ.
- fixed deposit ರೂಪದಲ್ಲಿ ಹಣ ಠೇವಣಿ ಮಾಡಿದರೆ:– ನೀವು ಹಣವನ್ನೂ fixed deposit ರೂಪದಲ್ಲಿ ಹಲವಾರು ಬ್ಯಾಂಕ್ ಗಳಲ್ಲಿ 50,000 ರೂಪಾಯಿ 1,00,000 ರೂಪಾಯಿ ಹಣ ಇಟ್ಟು ಎಲ್ಲವೂ ಸೇರಿ ಹತ್ತು ಲಕ್ಷಕ್ಕಿಂತ ಅಧಿಕ ಮೊತ್ತ ಆದರೆ ನಿಮ್ಮ ಹಣದ ಮೂಲವನ್ನು ಆದಾಯ ಇಲಾಖೆ ಕೇಳುತ್ತದೆ.
- ಚರಾಸ್ತಿ ಖರೀದಿಸಿದರೆ:- ನೀವು ಯಾವುದೇ ರೀತಿಯ ಆಸ್ತಿಯನ್ನು ತೆಗೆದುಕೊಳ್ಳುವಾಗ 30 ಲಕ್ಷ ಮೊತ್ತಕ್ಕಿಂತ ಜಾಸ್ತಿ ಇದ್ದರೆ ನೀವು ಆಸ್ತಿ ರಿಜಿಸ್ಟರ್ ಮಾಡುವ ಸಮಯದಲ್ಲಿ ಹಣದ ಮೂಲವನ್ನು ಆದಾಯ ತೆರಿಗೆ ಪ್ರಶ್ನಿಸುವ ಸಾಧ್ಯತೆ ಇದೆ.
- ಮೀತಿ ಮೀರಿದ ಕ್ರೆಡಿಟ್ ಕಾರ್ಡ್ ಬಿಲ್:- ಯಾವುದೇ ವಸ್ತು ಖರೀದಿಸುವಾಗ ಕ್ರೆಡಿಟ್ ಕಾರ್ಡ್ ಬಳಸುವುದು ಸಾಮಾನ್ಯ ಆದರೆ ಕ್ರೆಡಿಟ್ ಕಾರ್ಡ್ ಜೊತೆಗೆ ನಗದು ರೂಪದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ವ್ಯವಹಾರ ಮಾಡಿದರೆ ಹಣದ ಮೂಲದ ಬಗ್ಗೆ ಕೇಳಬಹುದು. ಹಾಗೂ ಒಂದು ಆರ್ಥಿಕ ವರ್ಷದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಮೊತ್ತದ credit card ಬಿಲ್ ಬಂದರೆ ಆದಾಯ ತೆರಿಗೆಗೆ ಹಣದ ಮೂಲದ ಬಗ್ಗೆ ತಿಳಿಸಬೇಕಾಗಬಹುದು.
- ಷೇರು, ಮ್ಯೂಚುವಲ್ ಫಂಡ್ ಗಳಲ್ಲಿ ಇನ್ವೆಸ್ಟ್ ಮಾಡಿದರೆ:- ಒಂದು ಆರ್ಥಿಕ ವರ್ಷದಲ್ಲಿ ನೀವು ಹತ್ತು ಲಕ್ಷಕ್ಕೂ ಮೀರಿ ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಅಥವಾ ಬಾಂಡ್‌ಗಳನ್ನು ಖರೀದಿಸಿದರೆ ಆದಾಯ ಇಲಾಖೆ ಈ ಬಗ್ಗೆ ನಿಮಗೆ ಎಚ್ಚರಿಕೆ ಸಂದೇಶ ನೀಡುತ್ತದೆ. ಇಂತಹ ವ್ಯವಹಾರಗಳಿಗೆ ನಿಮ್ಮ ಹಣದ ಮೂಲವೇನು ನಿಮ್ಮ ಉದ್ಯೋಗ ಅಥವಾ ಯಾವುದೇ ಬ್ಯುಸಿನೆಸ್ ಇಂದ ನಿಮಗೆ ಬರುವ ಆದಾಯ ಏನು ಎಂದು ಇಲಾಖೆಯು ಪ್ರಶ್ನಿಸಬಹುದು.
ಇದನ್ನೂ ಓದಿ: ಟಾಟಾ ಪ್ರೇಮಿಗಳಿಗೆ ಗುಡ್ ನ್ಯೂಸ್, 1 ಲಕ್ಷ ರೂ ರಿಯಾಯಿತಿಯಲ್ಲಿ ಟಾಟಾ ನೆಕ್ಸನ್ EV
ಇದನ್ನೂ ಓದಿ: ಹಲವು ವೈಶಿಷ್ಟ್ಯಗಳು ಮತ್ತು ಉತ್ತಮ ಮೈಲೇಜನೊಂದಿಗೆ ಹೊಸ hero xoom, ಅದೂ ಕೇವಲ ರೂ. 8000 EMI ನಲ್ಲಿ